ಭಾನುವಾರ, ಏಪ್ರಿಲ್ 11, 2021
33 °C

ಗೋಧ್ರಾ: 11 ಗಲ್ಲು, 20 ಮಂದಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹಮದಾಬಾದ್ (ಪಿಟಿಐ): ಒಟ್ಟು 59 ಜನ ಸಜೀವವಾಗಿ ದಹನಗೊಂಡ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತ್ವರಿತ ನ್ಯಾಯಾಲಯವು ಈಚೆಗೆ ಗುರುತಿಸಿದ್ದ 31 ಮಂದಿ ತಪ್ಪಿತಸ್ಥರಲ್ಲಿ, ಮಂಗಳವಾರ 11 ಮಂದಿಗೆ ಗಲ್ಲು ಮತ್ತು  20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಕಳೆದ 2002ರ ಫೆ. 27ರಂದು ಅಯೋಧ್ಯೆಯಿಂದ ಕರಸೇವೆ ಮುಗಿಸಿಕೊಂಡು ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹಿಂದಿರುಗುತ್ತಿದ್ದ  59 ಮಂದಿ ಕರಸೇವಕರು ಗೋಧ್ರಾ ಬಳಿ ಸಜೀವ ದಹನಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಗುಜರಾತ್ ನ ವಿವಿಧೆಡೆ ಭುಗಿಲೆದ್ದ ಗಲಭೆಯಲ್ಲಿ 1200 ಮಂದಿ ಪ್ರಾಣ ಕಳೆದುಕೊಂಡಿದ್ದರು.

~ಈ ಪ್ರಕರಣ ಅಪರೂಪದಲ್ಲಿ ಒಂದು ಅಪರೂಪದ ಪ್ರಕರಣ~ ಎಂದು ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶ  ಪಿ.ಆರ್ ಪಾಟೀಲ್ ಅವರು, 31 ಮಂದಿ ತಪ್ಪಿತಸ್ಥರ ಪೈಕಿ 11 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದರೆ, 20 ಮಂದಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.