ಗೋಪಾಲಕೃಷ್ಣ ಪೈಗೆ ಅಕಾಡೆಮಿ ಪ್ರಶಸ್ತಿ ಪ್ರದಾನ

7

ಗೋಪಾಲಕೃಷ್ಣ ಪೈಗೆ ಅಕಾಡೆಮಿ ಪ್ರಶಸ್ತಿ ಪ್ರದಾನ

Published:
Updated:

ನವದೆಹಲಿ: ಕನ್ನಡ ಲೇಖಕ ಗೋಪಾಲಕೃಷ್ಣ ಪೈ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸುನಿಲ್ ಗಂಗೋಪಾಧ್ಯಾಯ ಮಂಗಳವಾರ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು. ಪೈ ಅವರ `ಸಪ್ನ ಸಾರಸ್ವತ~ ಕೃತಿಗೆ ಪ್ರಶಸ್ತಿ ದೊರೆತಿದೆ.ಕೊಂಕಣಿ ಲೇಖಕ ಮೆಲ್ವಿನ್ ರೋಡ್ರಿಗಸ್, ಉರ್ದು ಲೇಖಕ ಖಲೀಲ್ ಮೆಮನ್ ಅವರಿಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಖ್ಯಾತ ಲೇಖಕ ಹಾಗೂ `ಪ್ರಜಾವಾಣಿ~ ಅಂಕಣಕಾರ ರಾಮ ಚಂದ್ರ ಗುಹಾ ಅವರ `ಇಂಡಿಯಾ ಆಫ್ಟರ್ ಗಾಂಧಿ~ ಕೃತಿಗೂ ಪ್ರಶಸ್ತಿ ನೀಡಲಾಗಿದ್ದು ಅವರ ಪರವಾಗಿ ರುಕುಂ ಅಡ್ವಾಣಿ ಪ್ರಶಸ್ತಿ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry