ಮಂಗಳವಾರ, ಮೇ 18, 2021
22 °C

`ಗೋಪಾಲಗೌಡರ ಆದರ್ಶ ಸದಾ ಪ್ರಸ್ತುತ'

ಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಗೋಪಾಲಗೌಡರ ಆದರ್ಶ ಸದಾ ಪ್ರಸ್ತುತ'

ಬೆಂಗಳೂರು:`ಸಾಮಾಜಿಕ ಸಮತೋಲನಕ್ಕಾಗಿ ಅವಿರತವಾಗಿ ಶ್ರಮಿಸಿದ ಶಾಂತವೇರಿ ಗೋಪಾಲಗೌಡರು ಅಶಾಂತ ಸಂತನಂತೆ' ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಬಣ್ಣಿಸಿದರು.ಡಾ.ಲೋಹಿಯಾ ಸಮತಾ ಸಂಘಟನೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಚಿಂತಕ ಶಾಂತವೇರಿ ಗೋಪಾಲಗೌಡ ಅವರ ಒಂದು ನೆನಪು'  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಉಳುವವನೇ ಭೂಮಿಯ ಒಡೆಯ ಎಂಬ ತತ್ವವನ್ನು ಅಕ್ಷರಶಃ ಪಾಲಿಸಲು ಹೋರಾಟಕ್ಕಿಳಿದ ಬಹುದೊಡ್ಡ ರಾಜಕಾರಣಿ. ಆದರೆ, ಇಂದಿನ ರಾಜಕಾರಣಿಗಳು ಉಳ್ಳವರಿಗೆ ಭೂಮಿ ಕೊಡಿಸುವ ಸಲುವಾಗಿ ಹಠ ತೊಟ್ಟು ನಿಂತಿರುವುದು ನಾಚಿಕೆಗೇಡಿನ ಸಂಗತಿ' ಎಂದು ವಿಷಾದ ವ್ಯಕ್ತಪಡಿಸಿದರು.`ಆಸೆ-ಆಮಿಷಗಳಿಗೆ ಬಲಿಯಾಗದೇ ಬದುಕಿದ ರಾಜಕಾರಣಿಯೆಂದರೆ ಗೋಪಾಲಗೌಡರು. `ಹ' ಕಾರ ಮತ್ತು `ಶ' ಕಾರಗಳನ್ನು ಸರಿಯಾಗಿ ಉಚ್ಚರಿಸಲು ಬಾರದೇ ಇರುವವರೆಲ್ಲರೂ ಸಹ ಪ್ರಸ್ತುತ ಕನ್ನಡ ಹೋರಾಟಗಾರರಾಗಿದ್ದಾರೆ. ಅವರೆಲ್ಲರೂ ಗೋಪಾಲಗೌಡರು ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಇತಿಹಾಸವನ್ನು ಅರಿಯುವ ಅಗತ್ಯವಿದೆ' ಎಂದು ಹೇಳಿದರು.`ವ್ಯವಸ್ಥೆಯಲ್ಲಿ ಸತತವಾಗಿ ಆದ ಅನ್ಯಾಯ, ಅಕ್ರಮಗಳ ವಿರುದ್ಧ ಸಿಡಿದೆದ್ದು ಪ್ರಾಮಾಣಿಕರಾಗಿ ಹೋರಾಟ ನಡೆಸಿದ ಅವರ ವ್ಯಕ್ತಿತ್ವ ಯುವಜನತೆಗೆ ಸ್ಫೂರ್ತಿ. ಯುವ ಸಮೂಹ ಆದಷ್ಟು ಅವರ ಕುರಿತ ಪುಸ್ತಕಗಳನ್ನು ಓದಿ ಸಾಧನೆಯನ್ನು ತಿಳಿದುಕೊಳ್ಳಬೇಕು' ಎಂದು ಸಲಹೆ ನೀಡಿದರು.ರೈತ ಮುಖಂಡ ಕೆ.ಟಿ.ಗಂಗಾಧರ , `ಅನುಸರಿಸಬಹುದಾದ ಕೆಲವೇ ರಾಜಕಾರಣಿಗಳಲ್ಲಿ ಅವರು ಒಬ್ಬರು. ಪ್ರತಿಫಲಾಪೇಕ್ಷೆಯಿಲ್ಲದೇ ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾನ್‌ಚೇತನವು ಇನ್ನಷ್ಟು ದಿನ ಇರಬೇಕಿತ್ತು' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.