ಮಂಗಳವಾರ, ನವೆಂಬರ್ 12, 2019
28 °C
ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ರಾಜೀವ್ ಮಧ್ಯಸ್ಥಿಕೆ

ಗೋಪ್ಯ ಮಾಹಿತಿಯಲ್ಲ

Published:
Updated:

ವಾಷಿಂಗ್ಟನ್ (ಪಿಟಿಐ): `ಇಂದಿರಾ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ಸ್ವೀಡನ್ ಕಂಪೆನಿಯಿಂದ ಯುದ್ಧ ವಿಮಾನ ಖರೀದಿಸುವಲ್ಲಿ ರಾಜೀವ್ ಗಾಂಧಿ ಅವರು ಮಧ್ಯಸ್ಥಿಕೆದಾರನ ಪಾತ್ರ ವಹಿಸಿದ್ದರು' ಎಂಬುದು ಗೋಪ್ಯ ಮಾಹಿತಿಯಲ್ಲ ಎಂಬುದು ಈಗ ದೃಢಪಟ್ಟಿದೆ.ಈ ಯುದ್ಧ ವಿಮಾನ ಖರೀದಿ ಒಪ್ಪಂದದ ವೇಳೆ ಇಂದಿರಾ ಗಾಂಧಿ ಅವರ ಪುತ್ರ ರಾಜೀವ್ ಗಾಂಧಿಯವರು ಮಧ್ಯಸ್ಥಿಕೆ ವಹಿಸಿದ್ದರು ಎಂಬ ವಿಷಯ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ,1975ಘೆಉಈಉ14031ಚಿ ಕಡತದ ಈ ಮಾಹಿತಿಯನ್ನು ಅಮೆರಿಕದ ವಿದೇಶಾಂಗ ಇಲಾಖೆಯು 2006ರ ಜುಲೈ 6ರಂದು ಗೋಪ್ಯ ಮಾಹಿತಿ ಪಟ್ಟಿಯಿಂದ ಕೈಬಿಟ್ಟಿತ್ತು. ಹೀಗಾಗಿ ಸರ್ಕಾರದ ನ್ಯಾಷನಲ್ ಆರ್ಕೈವ್ಸ್ ಅಂಡ್ ರೆಕಾರ್ಡ್ಸ್ ಅಡ್‌ಮಿನಿಸ್ಟ್ರೇಷನ್‌ನ (ನಾರಾ) ಡಿಡಿಡಿ. ಚ್ಟ್ಚಜಿಛಿ.ಟ್ಟಜ ವೆಬ್‌ಸೈಟ್‌ನಲ್ಲಿ ನಾಲ್ಕು ವರ್ಷಗಳಿಂದಲೂ ಈ ಮಾಹಿತಿ ಇತ್ತು.ಅಷ್ಟೇ ಅಲ್ಲದೆ, ವಿಕಿಲೀಕ್ಸ್ ಇದೀಗ ಹೊರಗೆಡವಿರುವ ಅಮೆರಿಕ ರಾಜತಾಂತ್ರಿಕತೆಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆ ಮಾಹಿತಿಗಳಲ್ಲ. ಬದಲಾಗಿ ಸರ್ಕಾರದ ಅಂತರ್ಜಾಲದಿಂದ ನಿಯಮಬದ್ಧವಾಗಿಯೇ ಅವನ್ನು ಪಡೆದು ಹರಿಬಿಟ್ಟಿದೆ.1973-76ರ ನಡುವಿನ ಅವಧಿಯ 17 ಲಕ್ಷ ರಾಜತಾಂತ್ರಿಕ ಮಾಹಿತಿಗಳನ್ನು ವಿಕಿಲೀಕ್ಸ್ ಅಂತರ್ಜಾಲದಲ್ಲಿ ಹಾಕಿದ್ದು, ಇದು `ದಿ ಕಿಸಿಂಜರ್ ಕೇಬಲ್' ಎಂದೇ ಜನರ ನಾಲಿಗೆ ಮೇಲೆ ಹರಿದಾಡುತ್ತಿದೆ.ವಿಕಿಲೀಕ್ಸ್ ಅಂತರ್ಜಾಲಕ್ಕೆ ಹಾಕಿರುವ ಈ ಮಾಹಿತಿ ಹೊಸದೇನೂ ಅಲ್ಲ. ಅಮೆರಿಕದ ವಿದೇಶಾಂಗ ಇಲಾಖೆಯು 2006ರಲ್ಲೇ ಇವನ್ನು ಗೋಪ್ಯ ಮಾಹಿತಿ ಪಟ್ಟಿಯಿಂದ ಕೈಬಿಟ್ಟಿತ್ತು. ಹೀಗಾಗಿ, ನಾರಾದ ವೆಬ್‌ಸೈಟ್‌ನಲ್ಲಿ ಇವೆಲ್ಲವೂ ಪ್ರಕಟವಾಗಿದ್ದವು.ಆದರೆ ವಿಕಿಲೀಕ್ಸ್, ಈ ಮಾಹಿತಿಗಳನ್ನು ಅಲ್ಲಿಂದ ಪಡೆದು ಅವಕ್ಕೆ ಸುಧಾರಿತ ರೂಪ ಕೊಟ್ಟು `ಓದುಗ ಸ್ನೇಹಿ'ಯಾಗುವಂತೆ ಮಾಡಿದೆ. ಅಂದರೆ ಇದಕ್ಕಾಗಿ ನಾರಾ ವೆಬ್‌ಸೈಟ್‌ನ 17 ಲಕ್ಷ  ಪಿಡಿಎಫ್ ಫೈಲ್‌ಗಳನ್ನು ಕಲೆಹಾಕಿ, ಅವನ್ನೆಲ್ಲಾ `ಉಲ್ಟಾ ಎಂಜಿನಿಯರಿಂಗ್' ಪ್ರಕ್ರಿಯೆಗೆ ಒಳಪಡಿಸಿ ಸುಧಾರಿತ ರೂಪ ನೀಡಿದೆ.

ಪ್ರತಿಕ್ರಿಯಿಸಿ (+)