ಗೋಪ್ಯ ವರದಿ:ಸುಪ್ರೀಂಗೆ ಟಾಟಾ

7

ಗೋಪ್ಯ ವರದಿ:ಸುಪ್ರೀಂಗೆ ಟಾಟಾ

Published:
Updated:

ನವದೆಹಲಿ (ಐಎಎನ್‌ಎಸ್): ಕಾರ್ಪೊರೇಟ್ ದಲ್ಲಾಳಿ ನೀರಾ ರಾಡಿಯಾ ಟೇಪ್ ಹಗರಣಕ್ಕೆ ಸಂಬಂಧಿಸಿದ ಗೋಪ್ಯ ವರದಿಯನ್ನು ತಮಗೆ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಉದ್ಯಮಿ ರತನ್ ಟಾಟಾ ಗುರುವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಆದಾಯ ತೆರಿಗೆ ಮಹಾ ನಿರ್ದೇಶಕರು ನಡೆಸಿರುವ ತನಿಖೆಯ ಈ ವರದಿಯನ್ನು ಅಧ್ಯಯನ ಮಾಡಿದರೆ, ದೂರಸಂಪರ್ಕ ಸೇವಾ ಕಂಪೆನಿಗಳನ್ನು ಪ್ರತಿವಾದಿಗಳನ್ನಾಗಿಸಿ ಖಟ್ಲೆ ಹೂಡಲು ಅನುಕೂಲವಾಗುತ್ತದೆ ಎಂದು ಟಾಟಾ ವಾದಿಸಿದ್ದಾರೆ.

ನ್ಯಾಯಮೂರ್ತಿ ಜಿ.ಎಸ್ ಸಿಂಘ್ವಿ ನೇತೃತ್ವದ ಏಕಸದಸ್ಯ ಪೀಠದ ಮುಂದೆ  ಟಾಟಾ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry