ಬುಧವಾರ, ಆಗಸ್ಟ್ 21, 2019
22 °C

ಗೋಮಾಳ ಒತ್ತುವರಿ ಸಮಗ್ರ ತನಿಖೆಗೆ ಆಗ್ರಹ

Published:
Updated:

ಬೆಂಗಳೂರು: ಬಾಗಲಗುಂಟೆಯ ಸರ್ವೆ ನಂಬರ್ 133ರ 40 ಎಕರೆ ಗೋಮಾಳ ಜಮೀನಿನಲ್ಲಿ 33 ಗುಂಟೆ ಜಾಗ ಕಬಳಿಸಲು ಖಾಸಗಿ ವ್ಯಕ್ತಿಗಳು ಹುನ್ನಾರ ನಡೆಸಿದ್ದಾರೆ ಎಂಬ ದೂರು ಕೇಳಿಬಂದಿದೆ. ಸರ್ಕಾರಿ ಜಮೀನಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಬಡಾವಣೆ ನಿರ್ಮಿಸಿ ನಿವೇಶನ ಮಾರಾಟಕ್ಕೆ ಭೂಗಳ್ಳರು ಮುಂದಾಗಿದ್ದಾರೆ ಎಂದು ಬಾಗಲಗುಂಟೆ ಗ್ರಾಮ ನಾಗರಿಕರ ಹಿತರಕ್ಷಣಾ ವೇದಿಕೆ ಆರೋಪಿಸಿದೆ.`ನಗರ ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿಯ ಬಾಗಲಗುಂಟೆ ಗ್ರಾಮದ ಸರ್ವೆ 133ರ ಜಮೀನಿನಲ್ಲಿ 33 ಗುಂಟೆ ಜಾಗವನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಕರ್ನಾಟಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಮಂಡಳಿ, ಆಹಾರ ಇಲಾಖೆ, ಕೃಷಿ ಇಲಾಖೆಗೆ ಒಟ್ಟು 22.20 ಎಕರೆ ಜಮೀನು ಮಂಜೂರಾಗಿದೆ.ಆದರೆ, ಇದೇ ಮಂಜೂರಾತಿ ಸಂಖ್ಯೆಗಳ ಆಧಾರದ ಮೇಲೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, 33 ಗುಂಟೆ ಜಮೀನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆ' ಎಂದು ವೇದಿಕೆ ಅಧ್ಯಕ್ಷ ಬಿ.ಜಿ.ಅನಂತರಾಜು ದೂರಿದ್ದಾರೆ.ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಮಹಾನಗರ ಕಾರ್ಯಪಡೆ ನಗರ ವಿಶೇಷ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಆದರೆ, ಈವರೆಗೂ ಒತ್ತುವರಿ ತೆರವುಗೊಳಿಸುವ ಯಾವುದೇ ಪ್ರಯತ್ನ ನಡೆದಿಲ್ಲ' ಎಂದು ಆರೋಪಿಸಿದ್ದಾರೆ.

Post Comments (+)