ಗೋಯಲ್‌ಗೆ ಕಡ್ಡಾಯ ರಜೆ: ಸಿದ್ದಯ್ಯ ಮತ್ತೆ ಬಿಬಿಎಂಪಿ ಆಯುಕ್ತ

7

ಗೋಯಲ್‌ಗೆ ಕಡ್ಡಾಯ ರಜೆ: ಸಿದ್ದಯ್ಯ ಮತ್ತೆ ಬಿಬಿಎಂಪಿ ಆಯುಕ್ತ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಡಾ. ರಜನೀಶ್ ಗೋಯಲ್ ಅವರಿಗೆ 15 ದಿನಗಳ ಕಡ್ಡಾಯ ರಜೆಯನ್ನು ನೀಡಿರುವ ರಾಜ್ಯ ಸರ್ಕಾರ, ಆ ಹುದ್ದೆಯ ಹೊಣೆಯನ್ನು ಹಿರಿಯ ಐಎಎಸ್ ಅಧಿಕಾರಿ ಸಿದ್ದಯ್ಯ ಅವರಿಗೆ ವಹಿಸಿದೆ. ಸಿದ್ದಯ್ಯ ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸೋಮವಾರ ಸಂಜೆಯೇ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.ತ್ಯಾಜ್ಯ ವಿಲೇವಾರಿ ವೈಫಲ್ಯಕ್ಕಾಗಿ ಹೈಕೋರ್ಟ್‌ನಿಂದ ಮೇಲಿಂದ ಮೇಲೆ ಛೀಮಾರಿಗೆ ಒಳಗಾಗಿದ್ದ ಸರ್ಕಾರ, ಗೋಯಲ್ ಅವರನ್ನು ವರ್ಗಾವಣೆ ಮಾಡಲು ತೀರ್ಮಾನಿಸಿತ್ತು. ಮತದಾರರ ಪಟ್ಟಿ ಪರಿಷ್ಕರಣೆ ನಡೆದ ಈ ಹಂತದಲ್ಲಿ ವರ್ಗಾವಣೆ ಮಾಡಲು ಅವಕಾಶ ಇಲ್ಲದ ಕಾರಣ ಕಡ್ಡಾಯದ ರಜೆ ಮೇಲೆ ಕಳುಹಿಸಲಾಗಿದೆ ಎಂದು ಗೊತ್ತಾಗಿದೆ.`ಕಸ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ಆಯುಕ್ತರು, ಅಭಿವೃದ್ಧಿ ಕೆಲಸಗಳಲ್ಲೂ ಹಿಂದೆ ಬಿದ್ದಿದ್ದಾರೆ. ಅವರ ಸೇವೆ ನಮಗೆ ಬೇಡ' ಎಂದು ಬಿಬಿಎಂಪಿ ಸದಸ್ಯರು ಕಳೆದ ಸಾಮಾನ್ಯ ಸಭೆಯಲ್ಲಿ ಪಕ್ಷಭೇದ ಮರೆತು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry