ಸೋಮವಾರ, ಆಗಸ್ಟ್ 26, 2019
21 °C

ಗೋರ್ಖಾಲ್ಯಾಂಡ್: ಅನಿರ್ದಿಷ್ಟಾವಧಿ ಬಂದ್

Published:
Updated:

ಡಾರ್ಜಿಲಿಂಗ್ (ಪಿಟಿಐ): ಗೋರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ `ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನೀಡಿರುವ ಬಂದ್ ಕರೆಗೆ ಪಶ್ಚಿಮ ಬಂಗಾಳದ ಈ ಪರ್ವತ ಪ್ರದೇಶದಲ್ಲಿ ಶನಿವಾರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.ಅಂಗಡಿ-ಮುಂಗಟ್ಟುಗಳು, ಮಾರುಕಟ್ಟೆ, ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ-ಖಾಸಗಿ ಕಚೇರಿಗಳು, ಬ್ಯಾಂಕ್‌ಗಳು ಮುಚ್ಚಿದ್ದವು. ವಾಹನಗಳ ಸಂಚಾರ ಇರಲಿಲ್ಲ. ಹೊಸದಾಗಿ ಎಲ್ಲೂ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿಲ್ಲ.ಆದರೆ ಜಿಜೆಎಂ ಕಾರ್ಯಕರ್ತರು ರಾಮಂ ಮತ್ತು ರಿಂಬಿಕ್ ನಿಪ್ಪೊನ್ ಜಲ ವಿದ್ಯುತ್ ಯೋಜನಾ ಘಟಕವನ್ನು ಬಲವಂತದಿಂದ ಮುಚ್ಚಿಸಿದರು. ಈ ಮಧ್ಯೆ, ನವದೆಹಲಿಯಲ್ಲಿರುವ ಜಿಜೆಎಂನ ನಿಯೋಗವು ಸಂಸದರನ್ನು ಭೇಟಿ ಮಾಡಿ ಅಧಿವೇಶನದಲ್ಲಿ ಗೋರ್ಖಾಲ್ಯಾಂಡ್ ರಚನೆ ಬಗ್ಗೆ ಧ್ವನಿ ಎತ್ತುವಂತೆ ಕೋರಿದೆ.

Post Comments (+)