ಗುರುವಾರ , ನವೆಂಬರ್ 14, 2019
22 °C

ಗೋರ್ಟಾದಲ್ಲಿ ರೈತ ಆತ್ಮಹತ್ಯೆ

Published:
Updated:

ಬಸವಕಲ್ಯಾಣ (ಬೀದರ್ ಜಿಲ್ಲೆ): ಸಾಲದ ಬಾಧೆ ತಾಳದೆ ರೈತನೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಗೋರ್ಟಾ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಮೃತ ರೈತನನ್ನು ರಾಜಕುಮಾರ ಸಿದ್ರಾಮಪ್ಪ ನಾಗೂರೆ (38) ಎಂದು ಗುರುತಿಸಲಾಗಿದೆ. ಇವರ ಹೆಸರಲ್ಲಿ 6 ಎಕರೆ ಜಮೀನು ಇದ್ದು, ಸಾಲ ಮಾಡಿದ್ದರಿಂದ ಕಳೆದ ವರ್ಷ ಎತ್ತುಗಳನ್ನು ಮಾರಾಟ ಮಾಡಿದ್ದರು  ಎನ್ನಲಾಗಿದೆ.

 

ಆದರೂ 2 ಲಕ್ಷ ರೂಪಾಯಿ ಸಾಲ ಕೊಡುವುದು ಬಾಕಿ ಉಳಿದಿತ್ತು. ಹೀಗಾಗಿ ಹಣ ಕೊಟ್ಟವರ ಕಾಟ ಹೆಚ್ಚಾಗಿದ್ದರಿಂದ ಈತ ಆತ್ಮಹತ್ಯೆಗೆ ಶರಣಾದುದಾಗಿ ತಿಳಿದುಬಂದಿದೆ. ಈ ಸಂಬಂಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪ್ರತಿಕ್ರಿಯಿಸಿ (+)