ಗೋಲ್ಡ್‌ಪ್ಲಸ್‌ನ ಚಿನ್ನದ ನ್ಯಾನೊ

7

ಗೋಲ್ಡ್‌ಪ್ಲಸ್‌ನ ಚಿನ್ನದ ನ್ಯಾನೊ

Published:
Updated:
ಗೋಲ್ಡ್‌ಪ್ಲಸ್‌ನ ಚಿನ್ನದ ನ್ಯಾನೊ

ಮುಂಬೈ: ಟೈಟಾನ್ ಇಂಡಸ್ಟ್ರೀಸ್‌ನ ಚಿನ್ನಾಭರಣ ಬ್ರಾಂಡ್ ಆಗಿರುವ ಗೋಲ್ಡ್‌ಪ್ಲಸ್, ಚಿನ್ನಾಭರಣ ಬಳಸಿ ರೂಪಿಸಿರುವ ವಿಶ್ವದ ಮೊದಲ ಕಾರನ್ನು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರು ಸೋಮವಾರ ಇಲ್ಲಿ ಅನಾವರಣಗೊಳಿಸಿದರು.ಚಿನ್ನಾಭರಣಗಳಿಂದ ಅಲಂಕೃತಗೊಂಡಿರುವ ಈ ನ್ಯಾನೊ ಕಾರಿನ ಪರಿಕಲ್ಪನೆ ಸಾಕಾರಗೊಳ್ಳಲು 30ಕ್ಕೂ ಹೆಚ್ಚು  ಕಲಾವಿದರು ಶ್ರಮಿಸಿದ್ದಾರೆ. 22 ಕ್ಯಾರೆಟ್‌ನ 80ಕೆ.ಜಿ ಚಿನ್ನ ಹಾಗೂ 15 ಕೆ.ಜಿಯಷ್ಟು ಬೆಳ್ಳಿ ಮತ್ತು ಹರಳು ಗಳಿಂದ ಈ ಕಾರು ಅಲಂಕೃತಗೊಂಡಿದೆ.   ಮೀನಕರಿ, ಕುಂದನ್  ಮೊದಲಾದ ಸಾಂಪ್ರದಾಯಿಕ  ಶೈಲಿಗಳು ಇಲ್ಲಿ ಬಳಕೆಯಾಗಿವೆ.ದೇಶದಲ್ಲಿ ಚಿನ್ನಾಭರಣಗಳ ತಯಾರಿಕೆಯ 5000 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಈ  ವಿಶಿಷ್ಟ ಪರಿಕಲ್ಪನೆಯ ಕಾರು ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಬೆಳಗಾವಿ, ಶಿವಮೊಗ್ಗ ಸೇರಿದಂತೆ ದೇಶದಾದ್ಯಂತ 29 ನಗರಗಳಲ್ಲಿ ಈ ಕಾರನ್ನು ಪ್ರದರ್ಶಿಸಲಾಗುವುದು. ಆನಂತರವಷ್ಟೇ ಇದನ್ನು ಮಾರಾಟ ಮಾಡಬೇಕೆ ಅಥವಾ ಬೇಡವೇ ಎನ್ನುವುದನ್ನು ನಿರ್ಧರಿಸಲಾಗುವುದು. ಸದ್ಯಕ್ಕಂತೂ ಇದರ ಬೆಲೆ ಎಷ್ಟೆಂಬುದನ್ನು ಪ್ರಕಟಿಸಿಲ್ಲ. ಮಾರಾಟ ಮಾಡುವುದೇ ಆದರೆ, ಹರಾಜು ಹಾಕಬೇಕಾಗುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry