ಭಾನುವಾರ, ಜನವರಿ 19, 2020
27 °C

ಗೋಲ್ಡ್‌ ಕಪ್‌: ಹೈದರಾಬಾದ್‌ ಚಾಂಪಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಭಾರತೀಯ ತಂಡದ ಮಾಜಿ ಟೆಸ್ಟ್‌ ಆಟಗಾರ ಅರ್ಷದ್‌ ಅಯ್ಯೂಬ್‌, ರಣಜಿ ಮಾಜಿ ಆಟಗಾರ ಸಾದ್‌– ಬಿನ್‌– ಜಂಗ್ (ಪಟೌಡಿ ಸಮೀಪದ ಸಂಬಂಧಿ) ಸೇರಿದಂತೆ ಹಲವು ಆಟಗಾರರು ಹಾಗೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಪ್ರಮುಖರ ವೀಕ್ಷಣೆ, ಕಿಕ್ಕಿರಿದು ತುಂಬಿದ ಕ್ರೀಡಾಂಗಣ, ಬ್ಯಾಂಡ್‌–ಬಜಾನಾ, ಅಭಿಮಾನಿಗಳ ಘೋಷಣೆಗಳ, ನೇರ ಪ್ರಸಾರ, ವೀಕ್ಷಕ ವಿವರಣೆ ನಡುವೆ ನಡೆದ ಖ್ವಾಜಾ ಬಂದೇ ನವಾಜ್‌ ಕ್ರಿಕೆಟ್ ಗೋಲ್ಡ್‌ ಕಪ್‌ ಟೂರ್ನಿಯ ಫೈನಲ್‌ ಗೆಲ್ಲುವು ಮೂಲಕ ಸಿಸಿಒಬಿ ಹೈದರಾಬಾದ್‌ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು.ಇಲ್ಲಿನ ಕೆಬಿಎನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಜುನೈದ್‌ ಆಲಿ ರಕ್ಷಣಾತ್ಮಕ ಬ್ಯಾಟಿಂಗ್‌, ಆಲಿ ಅಬ್ದುಲ್ಲಾ ವೇಗದ ದಾಳಿಯ ನೆರವಿ ನಿಂದ ಮುಂಬೈ ಅಂಜುಮಾನ್‌–ಎ–ಇಸ್ಲಾಂ ತಂಡ ವನ್ನು 123 ರನ್‌ ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿತು.ಟೂರ್ನಿಯುದ್ದಕ್ಕೂ ಭರವಸೆ ಮೂಡಿಸಿದ ಮುಂಬೈಯ ಹಾಶೀರ್ ದಫೇದಾರ್‌ ಕರಾಮತ್ತು ಫೈನಲ್‌ನಲ್ಲಿ ನಡೆಯಲಿಲ್ಲ. ಬೌಲಿಂಗ್‌ನಲ್ಲಿ ಸೂರ್ಯಪ್ರತಾಪ್‌ ಮಿಂಚಲಿಲ್ಲ. ದಿನದ ಸಂಪೂರ್ಣ ಗೌರವ ಹೈದರಾಬಾದ್ ಆಟಗಾರರ ಪಾಲಾಯಿತು. ಬ್ಯಾಟಿಂಗ್‌ ನಲ್ಲಿ ಆಕರ್ಷಕ ಕಟ್‌, ಡ್ರೈವ್‌ಗಳ ಮೂಲಕ ಮಿಂಚಿದ ಆಲಿ ಜುನೈದ್‌ ಅಜೇಯ 73 ರನ್‌ ಗಳಿಸಿದರು. ತಾಳ್ಮೆಯಿಂದ ಆಡಿದ ಅವರು ತಂಡವು 200 ರನ್‌ ಸನಿಹ ತಲುಪಲು ನೆರವಾದರು. ಬೌಲಿಂಗ್‌ನಲ್ಲಿ ಆಲಿ ಅಬ್ದುಲ್ಲಾ ಅಬ್ಬರಿಸಿದರು. ಅವರ ವೇಗಕ್ಕೆ ಬೆಂಬಲ ನೀಡಿದ ಪ್ರೇಕ್ಷಕರ ಘೋಷಣೆಗಳು ಭೋರ್ಗರೆಯುತ್ತಿತ್ತು. ಏಕಪಕ್ಷೀಯವಾಗಿ ನಡೆದ ಪಂದ್ಯವನ್ನು ಹೈದರಾಬಾದ್‌ ಜಯಿಸಿತು. ಆರಂಭ ದಿಂದ ಉತ್ತಮ ಪ್ರದರ್ಶನ ತೋರಿದ್ದ ಮುಂಬೈ ಅಂತಿಮ ಪಂದ್ಯದಲ್ಲಿ ಎಡವಿತು. ರನ್ನರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಮುಂಬೈಯ ದಫೇದಾರ್ ಹಾಶೀರ್‌ ಸರಣಿ ಶ್ರೇಷ್ಠ ಪ್ರಶಸ್ತಿಯ ಬೈಕ್‌ ಸ್ವೀಕರಿಸಿದರು. ಸಿಸಿಒಬಿ ಹೈದರಾ ಬಾದ್‌ನ ಆಲಿ ಅಬ್ದುಲ್ಲಾ ಫೈನಲ್‌ ಪಂದ್ಯಶ್ರೇಷ್ಠ ಹಾಗೂ ಸರಣಿಯ ಉತ್ತಮ ಬೌಲರ್‌ ಪ್ರಶಸ್ತಿ ಪಡೆದರು. ನೋಬಲ್‌ ಹೈದರಾಬಾದ್‌ ತಂಡದ ಶೇಕ್‌ ನಫಾಜ್‌ ಸರಣಿಯ ಉತ್ತಮ ಬ್ಯಾಟ್ಸ್‌ಮನ್‌ ಪ್ರಶಸ್ತಿ ಪಡೆದರು.ಪ್ರಶಸ್ತಿ: ಪ್ರಶಸ್ತಿ ಪ್ರದಾನ ಮಾಡಿದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಹೈದರಾಬಾದ್‌ ಕರ್ನಾಟಕದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಈ ನಿಟ್ಟಿನಲ್ಲಿ ಕೆಬಿಎನ್‌ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಶಿಕ್ಷಣದ ಜೊತೆ ಕ್ರೀಡೆಗೂ ಪ್ರಾಮುಖ್ಯತೆ ನೀಡಬೇಕು’ ಎಂದರು.ಭಾರತೀಯ ಟೆಸ್ಟ್ ತಂಡದ ಮಾಜಿ ಆಟಗಾರ ಅರ್ಷದ್‌ ಅಯ್ಯೂಬ್‌ ಮಾತನಾಡಿ,‘ಈ ಊರಿನಲ್ಲಿ ಇಂತಹ ಅದ್ಭುತ ಕ್ರೀಡಾಂಗಣ ಕಂಡು ಅಚ್ಚರಿಪಟ್ಟಿದ್ದೇನೆ. ಇದು ರಣಜಿ ಪಂದ್ಯ ನಡೆಸಲು ಯೋಗ್ಯ ಅಂಗಣವಾಗಿದೆ. ಕೆಎಸ್‌ಸಿಎ ಇತ್ತ ಗಮನ ಹರಿಸಬೇಕು. ಸ್ಥಳೀಯ ಶಿಕ್ಷಣ ಸಂಸ್ಥೆಗಳೂ ಇದೇ ವೃತ್ತಿಪರ ಮಾದರಿಯಲ್ಲಿ ಕ್ರೀಡೆಯನ್ನು ಪ್ರೋತ್ಸಾಯಿಸಬೇಕು’ ಎಂದರು.ರಣಜಿ ಮಾಜಿ ಆಟಗಾರ ಸಾದ್‌– ಬಿನ್‌– ಜಂಗ್ (ಪಟೌಡಿ ಸಮೀಪದ ಸಂಬಂಧಿ) ಮಾತನಾಡಿ, ‘ಕ್ರೀಡಾ ವ್ಯವಸ್ಥೆ ಕಂಡು ನಾನು ಆಶ್ಚರ್ಯ ಚಕಿತನಾಗಿದ್ದೇನೆ. ಕೆಬಿಎನ್‌ ಇನ್ನಷ್ಟು ಕ್ರೀಡಾ ಚಟುವಟಿಕೆ ಆಯೋಜಿಸಲಿ. ಕ್ರೀಡೆಯ ಮೂಲಕ ಯುವಜನಾಂಗದ ಏಳಿಗೆಗೆ ಮಾದರಿಯಾಗಲಿ’ ಎಂದರು.ಗುಲ್ಬರ್ಗದ ಖ್ವಾಜಾ ಬಂದೇ ನವಾಜ್‌ ದರ್ಗಾದ ಸಜ್ಜಾದ್‌ ನಜ್ರೀನ್‌ (ಮುಖ್ಯಸ್ಥರು) ಡಾ. ಸಯ್ಯದ್‌ ಶಹಾ ಗೇಸುರ್‌ದಾಸ್ ಖುಸ್ರದ್‌ ಹುಸೈನಿ, ಮಾಜಿ ಸಂಸದ ಇಕ್ಬಾಲ್‌ ಅಹ್ಮದ್‌ ಸರಡಗಿ, ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಮಹಾಗಾಂವ, ಉದ್ಯಮಿ ಇಲಿಯಾಸ್‌ ಭಾಗಾವಾನ್, ಕೆಬಿಎನ್ ಸಂಸ್ಥೆ ಉಪಾಧ್ಯಕ್ಷ ಮಹ್ಮದ್‌ ಅಲಿ–ಅಲ್‌– ಹುಸೈನಿ, ಸೈಯ್ಯದ್‌ ಮುಸ್ತಫಾ ಹುಸೈನಿ, ಅರ್ಷದ್‌ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)