ಗೋಳು ಕೇಳುವವರಾರು?

7

ಗೋಳು ಕೇಳುವವರಾರು?

Published:
Updated:

ಆಡಳಿತ ಚುಕ್ಕಾಣಿ ಹಿಡಿದಿರುವ ರಾಜಕಾರಣಿಗಳಿಗೆ ಸದಾ ಜೀವ ಭಯದ ಭೀತಿ ಕಾಡುತ್ತಿರುವ ಸಂದರ್ಭದಲ್ಲಿ  ಶ್ರಿಸಾಮಾನ್ಯನ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದವರೆ ತಮಗೇ ಅಪಾಯವಿದೆ ಎಂದು ಹೇಳಿಕೆ ನೀಡುವಂತಾಗಿರುವುದು ರಾಜ್ಯ ರಾಜಕೀಯ ಯಾವ ಮಟ್ಟಕ್ಕೆ ಮುಟ್ಟಿದೆ ಎನ್ನುವುದು ತಿಳಿಯುತ್ತದೆ.ಮುಖ್ಯಮಂತ್ರಿಗಳು ತಾನು ಆಡಳಿತ ನಡೆಸುತ್ತಿರುವುದು ವಿರೋಧ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲಾ ಆದ ಕಾರಣ ನನಗೆ ವಾಮಾಚಾರ ಮಾಡಿಸುವುದರ ಮೂಲಕ ಕೊಲೆ ಯತ್ನ ನಡೆಯುತ್ತಿದೆ ಎಂದು ಜನರ ಮುಂದೆ ತಮ್ಮ ಅಸಹಾಯಕತೆಯ ಮೂಲಕ ಅಳಲು ತೋಡಿಕೊಂಡಿದ್ದಾರೆ.ಇದರ ಬೆನ್ನಲ್ಲೇ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಕರೆಗಳು ಕಾಡುತ್ತಿವೆಯಂತೆ. ಜನಸಾಮಾನ್ಯರಿಗೆ ರಕ್ಷಣೆ ನೀಡಬೇಕಾದ ಮುಖ್ಯಮಂತ್ರಿ ಮತ್ತು ಸಚಿವರಿಗೆ ಪ್ರಾಣ ಬೆದರಿಕೆಯುಂಟಾದರೆ ಇನ್ನು ಇವರು ಸಾರ್ವಜನಿಕರನ್ನು ಹೇಗೆ ರಕ್ಷಿಸುತ್ತಾರೆ?ಸಚಿವೆ ಶೋಭಾ ಕರಂದ್ಲಾಜೆ ಆಯಿಲ್ ಮಾಫಿಯಾಕ್ಕೆ ಹೆದರಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೋ  ಅಥವಾ ವಾಸ್ತವಿಕವಾಗಿ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆಯೋ  ತಿಳಿಯದು.ಇದೇ ಗೊಂದಲದಲ್ಲಿ ಅಕ್ರಮವಾಗಿ ಪಡಿತರಚೀಟಿಗಳನ್ನು ಹೊಂದಿರುವವರ ವಿರುದ್ದ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಈ ಪಡಿತರ ಚೀಟಿ ಮಾಫಿಯಾದ ಈ ಬೆದರಿಕೆಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಕಾಲವೇ ಹೇಳಬೇಕು. ಅಂತು ಈ ಬಿಜೆಪಿ ಸರ್ಕಾರದ ಮಂತ್ರಿಗಳ ಗೋಳು ವಿಚಿತ್ರವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry