ಗೋಳೂರು ಮಂಜುನಾಥ್ ಡಾ. ರಾಜ್ ಕುಸ್ತಿಕಂಠೀರವ

7

ಗೋಳೂರು ಮಂಜುನಾಥ್ ಡಾ. ರಾಜ್ ಕುಸ್ತಿಕಂಠೀರವ

Published:
Updated:

ಮೈಸೂರು:  ಗೋಳೂರ ಹತ್ತು ಜನಗರ ಗರಡಿಯ ಪೈಲ್ವಾನ್ ಮಂಜುನಾಥ್ ಭಾನುವಾರ ಡಾ. ರಾಜಕುಮಾರ್ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ನಾಡಕುಸ್ತಿ ಸ್ಪರ್ಧೆಯಲ್ಲಿ `ಡಾ. ರಾಜ್ ಕುಸ್ತಿ ಕಂಠೀರವ~ ಪ್ರಶಸ್ತಿ ಗೆದ್ದರು.ದಿವಂಗತ. ಡಿ. ದೇವರಾಜ್ ಅರಸ್ ವಿವಿಧೋದ್ದೇಶ ಕ್ರೀಡಾಂಗಣದ ಆಖಾಡದಲ್ಲಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘ ಮತ್ತು ಡಾ.ರಾಜಕುಮಾರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಕ್ಯಾತಮಾರನಹಳ್ಳಿಯ  ಹುತ್ತು ಜನಗಳ ಗರಡಿಯ ಪೈಲ್ವಾನ್ ಮಂಜುನಾಥ್ ಅವರನ್ನು `ಚಿತ್~ ಮಾಡಿದ ಗೋಳೂರಿನ ಪೈಲ್ವಾನ್ ವಿಜಯದ ನಗೆ ಬೀರಿದರು.ಸ್ಪರ್ಧೆಯಲ್ಲಿ  ಮುಖ್ಯ ತೀರ್ಪುಗಾರರಾಗಿ ಪೈಲ್ವಾನರಾದ ಜಿ. ಸಿದ್ಧಪ್ಪ, ಜಿ. ಶಂಕರ್, ಬಿ. ಸೋಮಣ್ಣ,  ಎಂ. ರಾಮೇಗೌಡ, ಬಿ. ಬಸಪ್ಪ, ಎಂ.ಜಿ. ಶ್ರೀನಿವಾಸ್, ನಂಜಯ್ಯ ರಣಧೀರ ಅವರು ಕಾರ್ಯನಿರ್ವಹಿಸಿದರು.ಅಖಿಲ ಕರ್ನಾಟಕ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಮುಡಾ ಅಧ್ಯಕ್ಷ ಎಲ್. ನಾಗೇಂದ್ರ, ಎಸ್.ಪಿ. ತಿರುಮಲರಾವ್, ಜಯಚಾಮರಾಜ ಒಡೆಯರ್ ಗರಡಿ ಸಂಘದ ಮುಖಂಡ ಎಸ್.ಜೆ. ಲಕ್ಷ್ಮೇಗೌಡ, ಬಿ.ಪಿ. ಮಂಜುನಾಥ, ಉಪಮೇಯರ್ ಮಹದೇವಪ್ಪ ಇದ್ದರು. ಸಂಘದ ಕುಸ್ತಿ ಸಮಿತಿ ಅಧ್ಯಕ್ಷ ಯಜಮಾನ್ ಮಹದೇವ್ ಸ್ಪರ್ಧೆ  ನಿರ್ವಹಿಸಿ ದರು. ಸಂಘದ ಅಧ್ಯಕ್ಷ ಪೈಲ್ವಾನ್ ದೇಸಿಗೌಡ ,  ಟ್ರಸ್ಟ್ ಅಧ್ಯಕ್ಷ ಎಂ. ಸದಾನಂದ ಹಾಜರಿದ್ದರು.ಫಲಿತಾಂಶಗಳು: ನಗುವಿನಹಳ್ಳಿ ಎಂ. ಮೋಹನ ಕುಮಾರ್ ಅವರು ಪ್ರತಿಸ್ಪರ್ಧಿ ನಗರ್ಲೇ ಕುಮಾರ್ ವಿರುದ್ಧ;  ಚಂದ್ರು ಅವರು ಶಂಕರಾ ಪುರದ ಗರಡಿಯ ಜಿ. ಲೋಕೇಶ್ ವಿರುದ್ಧ;  ಕ್ಯಾತಮಾರನಹಳ್ಳಿ ದೇವರಾಜು, ನಗುವಿನ ಹಳ್ಳಿಯ ವಿನಯಕುಮಾರ್ ವಿರುದ್ಧ; ಮೇಳಾ ಪುರದ ಕುಮಾರ್, ಲಕ್ಷ್ಮೀಪುರದ ರಾಘವೇಂದ್ರ ವಿರುದ್ಧ; ನೀಲಕಂಠರಾಯರ ಗರಡಿಯ ಶಿವಕುಮಾರ್, ಬೆಳವಾಡಿ ಪೈ. ಸ್ಟಾರ್ ಭರತ್ ವಿರುದ್ಧ; ಹಳ್ಳದಕೇರಿ ಗರಡಿಯ ಮಣಿ,  ಮಂಡಿಮೊಹಲ್ಲಾದ  ಮುಕ್ತಾರ್ ಅಲಿ ವಿರುದ್ಧ;  ಗೋಳೂರು ಎಸ್. ನಾಗೇಂದ್ರ,  ಕೆ.ಜಿ. ಕೊಪ್ಪಲಿನ ಪೈ. ಎಂ. ಸುರೇಶ್ ವಿರುದ್ಧ;  ಲಾಲಾಮಿಯಾ ಗರಡಿಯ ಅಕ್ಮಲ್ ಪಾಶಾ ಅವರು ಮೇಳಾಪುರದ ಬಾಲು ವಿರುದ್ಧ; ಗುವಿನಹಳ್ಳಿ ಕಿಶೋರ್,  ಶಂಕರಪುರದ ಅಭಿ ವಿರುದ್ಧ; ಮೈಸೂರು ಭೂತಪ್ಪನವರ ಗರಡಿಯ ದೇಸಿಗೌಡರ ಶಿಷ್ಯ ವಿರುದ್ಧ ಪೈ. ಎ. ದಿಕ್ಷಿತ್ ಉರುಫ್ ಗಿರಿ, ಮೇಳಾಪುರದ ಬಿ. ಆದರ್ಶ ವಿರುದ್ಧ;  ನಗುವಿನಹಳ್ಳಿ ಭೈರವ,  ಶಂಕರಾ ಪುರದ ಸಂಜೀವ ವಿರುದ್ಧ;  ಬೋಗಾದಿಯ ಚರಣ್, ನಗುವಿನಹಳ್ಳಿ ಚೇತನ್ ವಿರುದ್ಧ;  ಮಿಠಾಯಿ ಅಣ್ಣಯ್ಯನವರ ಗರಡಿಯ ಕೇಶವ್, ವೀರಭದ್ರಸ್ವಾಮಿ ರಘು ವಿರುದ್ಧ; ನಂಜನ ಗೂಡು ಭರತ್‌ಸಿಂಗ್,  ರಮ್ಮನಹಳ್ಳಿ ಗೋಪಾಲಿ ವಿರುದ್ಧ;  ಚಾಮಲಾಪುರದ ಮೇಹ ಬೂಬ್ ರಮ್ಮನಹಳ್ಳಿ ರಘು ವಿರುದ್ಧ; ಗಾಂಧಿನಗರದ ಕಿರಣ್ ಮಲಬಾರ್ ಗೋಲ್ಡ್,  ರಮ್ಮನಹಳ್ಳಿ ರವಿ ವಿರುದ್ಧ ಗೆದ್ದರು.ಶಾಂತಿನಗರದ ಹಾಜಿ ನಜೀರಸಾಬ್ ಗರಡಿಯ ಪೈ. ಶಬೀರ್‌ಖಾನ್ ಮತ್ತು ಶಂಕರಾ ಪುರದ ಗರಡಿ ಪೈ. ರಾಘವೇಂದ್ರ; ಲಾಲಾ ಮಿಯಾ ಗರಡಿಯ ಅಮ್ಜದ್‌ಖಾನ್ ಹಾಗೂ ಕ್ಯಾತಮಾರನಹಳ್ಳಿ ರಾಜುಗೌಡ; ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡಾದ ಯಜಮಾನ್ ಎಸ್. ಮಹಾದೇವ ಅವರ ಶಿಷ್ಯ ಪೈ. ಬಿ. ವಿಜಯ್ ಹಾಗೂ ಗೋಳೂರು ಕೃಷ್ಣ;  ಬೋಗಾದಿ  ತ್ಯಾಗರಾಜ್ ಮತ್ತು ಚಾಮಲಾಪು ರದ ಗರಡಿ ಎನ್.ಎಸ್. ಉಮೇಶ್;

ಮೈಸೂರು ತಾಲ್ಲೂಕು ಪೈ. ಬಸವೇಶ್ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಪೈ. ಎನ್. ಎಸ್. ಶ್ರೀಕರ; ಬಿ.ಜಿ. ಸರಗೂರು ಪೈ. ಅಶೋಕ್ ಹಾಗೂ ಬೆಸ್ತರ ಕಾಳಣ್ಣನವರ ಗರಡಿ  ಪ್ರವೀಣ್, ಕಾರ್ತಿಕ್ ಹಾಗೂ ರಮ್ಮನ ಹಳ್ಳಿ  ಚಂದ್ರಶೇಖರ್ ನಡುವಿನ ಪಂದ್ಯ ಸಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry