ಸೋಮವಾರ, ಜೂನ್ 14, 2021
28 °C
ಚಿತ್ರನಟ ವಿನೋದ್‌ ಕುಮಾರ್‌ ಕೊಲೆ ಪ್ರಕರಣ

ಗೋವರ್ಧನಮೂರ್ತಿಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿತ್ರನಟ ವಿನೋದ್‌ ಕುಮಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿ­ಸಿ­­ದಂತೆ ಗೋವರ್ಧನ­ಮೂರ್ತಿ ಅವರಿಗೆ ಹೈಕೋರ್ಟ್‌ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ಗೋವರ್ಧನಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ­ಮೂರ್ತಿ­ಗಳಾದ ದಿಲೀಪ್‌ ಭೋಸ್ಲೆ ಮತ್ತು ಬಿ. ಮನೋಹರ್‌ ಅವರಿದ್ದ ವಿಭಾ­ಗೀಯ ಪೀಠ, ‘₨ 25 ಸಾವಿರ ಮೊತ್ತದ ವೈಯಕ್ತಿಕ ಭದ್ರತೆ ನೀಡ­ಬೇಕು, ಅನು­ಮತಿ ಇಲ್ಲದೆ ರಾಜ್ಯಬಿಟ್ಟು ತೆರಳು­ವಂತಿಲ್ಲ, ಪ್ರತಿ ತಿಂಗಳು ಪೊಲೀಸ್‌ ಠಾಣೆಗೆ ಹೋಗಿ ಸಹಿ ಮಾಡಬೇಕು’ ಎಂಬ ಷರತ್ತುಗಳನ್ನು ವಿಧಿಸಿದೆ.ವಿನೋದ್‌ ಕುಮಾರ್‌ ಅವರನ್ನು 2008ರಲ್ಲಿ ಬೆಂಗಳೂರಿನ ಹೊರವಲ­ಯದ ಬಾಗಲೂರಿನಲ್ಲಿ ಕೊಲೆ ಮಾಡ­ಲಾಗಿತ್ತು. ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಅಧೀನ ನ್ಯಾಯಾ­ಲಯ ಗೋವರ್ಧನ­ಮೂರ್ತಿ ಸೇರಿದಂತೆ ಒಟ್ಟು ಏಳು ಜನರನ್ನು ಖುಲಾಸೆ­ಗೊ­ಳಿಸಿ 2012ರ ಡಿಸೆಂಬರ್‌ನಲ್ಲಿ ಆದೇಶಿ­ಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಹಾಗಾಗಿ ಗೋವರ್ಧ­ನ­­ಮೂರ್ತಿ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.