ಗೋವಾದ ಮಹಾಲ್ಸಾ ರಥೋತ್ಸವ: ರಥದ ಗಾಲಿಗೆ ಸಿಲುಕಿ ಕಾರವಾರದ ವ್ಯಕ್ತಿ ಸಾವು

7

ಗೋವಾದ ಮಹಾಲ್ಸಾ ರಥೋತ್ಸವ: ರಥದ ಗಾಲಿಗೆ ಸಿಲುಕಿ ಕಾರವಾರದ ವ್ಯಕ್ತಿ ಸಾವು

Published:
Updated:

ಪಣಜಿ,(ಐಎಎನ್ಎಸ್): ಮೊಮಗನನ್ನು ರಕ್ಷಿಸಲು ಹೋದ ಕರ್ನಾಟಕದ ಕಾರವಾರದ 75 ವರ್ಷದ ವ್ಯಕ್ತಿಯೊಬ್ಬ ರಥದ ಗಾಲಿಗೆ ಸಿಲುಕಿ ಸಾವಿಗೀಡಾದ ದಾರುಣ ಘಟನೆ ಗುರುವಾರ ಮುಂಜಾನೆ ಮರ್ಡೊಲದ ಮಹಾಲ್ಸಾ ದೇವಸ್ಥಾನದಲ್ಲಿ ನಡೆದಿದೆ ಎಂದು ಇಲ್ಲಿನ ಪೋಲಿಸ್ ಅಧಿಕಾರಿ ತಿಳಿಸಿದ್ದಾರೆ.

 ರಥೋತ್ಸವದ ಸಂದರ್ಭದಲ್ಲಿ ಮೊಮ್ಮಗ ರಥದ ಮುಂಭಾಗಕ್ಕೆ ಹೋದಾಗ ಅವನನ್ನು ಉಳಿಸಲು ಧಾವಿಸಿದ ಅವರು  ಗಾಲಿಗೆ ಸಿಲುಕಿ ಸಾವನ್ನಪ್ಪಿದರು.  ಮೃತರನ್ನು ಕಾರವಾರದ ಪುಂಡಲಿಕ ವಿಠಲ್ ನ್ಯೂರೇಕರ್ ಎಂದು ಗುರುತಿಸಲಾಗಿದೆ. ಕಾರವಾರದ ನಿವಾಸಿಯಾಗಿದ್ದ  ಅವರ ಪ್ರತಿವರ್ಷದಂತೆ, ಈಬಾರಿಯೂ ಮಹಾಲ್ಸಾದೇವಸ್ಥಾನದಲ್ಲಿ  ಫೆಬ್ರವರಿಯಲ್ಲಿ ನಡೆಯುವ ರಥೋತ್ಸವದಲ್ಲಿ ಪಾಲ್ಗೋಳ್ಳಲು  ಎರಡು ದಿನ ಮೊದಲೇ ಕುಟುಂಬದ ಸಮೇತ ಇಲ್ಲಿಗೆ ಆಗಮಿಸಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry