ಸೋಮವಾರ, ಮೇ 17, 2021
25 °C

ಗೋವಾ: ಅಕ್ರಮ ಗಣಿಗಾರಿಕೆ ತನಿಖೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಪಿಟಿಐ): ಗೋವಾ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ಎಂ.ಬಿ.ಷಾ ನೇತೃತ್ವದ ಆಯೋಗ ತನಿಖೆಯನ್ನು ಚುರುಕುಗೊಳಿಸಿದೆ.ಆಯೋಗದ ಸದಸ್ಯರು ಹಲವಾರು ವಿವಾದಾತ್ಮಕ ಕಬ್ಬಿಣದ ಅದಿರು ಗಣಿಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ಪರಿಶಿಲಿಸಿದರು.ಗುರುವಾರ ಸಂಜೆ ಇಲ್ಲಿಗೆ ಆಗಮಿಸಿದ ಷಾ ಅವರು, ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆಸಿ ರಾಜಭವನದಲ್ಲಿ ಸಭೆ ನಡೆಸಿದರು.ಸಮಯದ ಅಭಾವದಿಂದಾಗಿ ನ್ಯಾಯಮೂರ್ತಿ ಷಾ ಅವರು ಕೆಲವೇ ಗಣಿಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಖನಿಜ ಮತ್ತು ಗಣಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಷಾ ಅವರ ನಿಗದಿತ ಕಾರ್ಯಕ್ರಮದಂತೆ ಅಕ್ರಮ ಗಣಿಗಾರಿಕೆ ನಡೆದಿದೆ ಎನ್ನಲಾದ ಎಲ್ಲಾ ಗಣಿ ಪ್ರದೇಶಕ್ಕೂ ಅವರು ಭೇಟಿ ನೀಡಬೇಕಾಗಿತ್ತು.ಆಯೋಗದ ಸದಸ್ಯರಾಗಿರುವ ಡಾ.ಯು.ವಿ.ಸಿಂಗ್ ಅವರು ಭಾನುವಾರದಿಂದ ಗೋವಾದಲ್ಲಿಯೇ ಬೀಡುಬಿಟ್ಟಿದ್ದಾರೆ. ಸಿಂಗ್ ಅವರ ನೇತೃತ್ವದಲ್ಲಿ ಒಟ್ಟು ಎಂಟು ತಂಡಗಳನ್ನು ರಚನೆ ಮಾಡಲಾಗಿದ್ದು, ಈ ತಂಡಗಳು ವಿವಿಧ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿವೆ.ಷಾ ಅವರು ಶನಿವಾರ ಇಲ್ಲಿನ ಸಚಿವಾಲಯದಲ್ಲಿ ಸಾರ್ವಜನಿಕರಿಂದಲೂ ಮಾಹಿತಿ ಪಡೆಯಲಿದ್ದಾರೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಗಣಿ ಗುತ್ತಿಗೆ ಪಡೆದಿರುವ ಎಲ್ಲಾ 90 ಗಣಿ ಪ್ರದೇಶಕ್ಕೆ ಭೇಟಿ ನೀಡಲಾಗುವುದು. ಜತೆಗೆ ಈಗಾಗಲೇ ಸ್ಥಗಿತಗೊಂಡಿರುವ ಗಣಿ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.