ಸೋಮವಾರ, ಜೂನ್ 21, 2021
27 °C

ಗೋವಾ: ಬಿಜೆಪಿ ಸಚಿವರ ಸಾವು, ಬಜೆಟ್ ಮಂಡನೆ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ: ಭಾರತೀಯ ಜನತಾ ಪಕ್ಷದ ಸಚಿವ ಮಥನಿ ಸಲ್ದಾನಾ ಅವರ ಹಠಾತ್ ನಿಧನದ ಪರಿಣಾಮವಾಗಿ ಬುಧವಾರ ಮಂಡನೆಯಾಗಬೇಕಾಗಿದ್ದ ಗೋವಾದ 2012-13ರ ಸಾಲಿನ ಮುಂಗಡ ಪತ್ರ ಮಂಡನೆ ಮಾರ್ಚ್ 26ಕ್ಕೆ ಮುಂದೂಡಿಕೆಯಾಗಿದೆ.

 

ಬುಧವಾರ ನಸುಕಿನ ವೇಳೆಯಲ್ಲಿ ಸಲ್ದಾನಾ ಅವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಹಿನ್ನೆಲೆಯಲ್ಲಿ ಸರ್ಕಾರವು ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಯನ್ನೂ ಘೋಷಣೆ ಮಾಡಿದೆ.



~ಗೋವಾ ರಾಜ್ಯಪಾಲ ಕೆ. ಶಂಕರನಾರಾಯಣನ್ ಅವರಿಗೆ ಮುಂಗಡಪತ್ರ ಮುಂದೂಡಿಕೆ ಬಗ್ಗೆ ನಾವು ತಿಳಿಸಿದ್ದೇವೆ. ಸಲ್ದಾನಾ ನಿಧನದಿಂದ ನಾವು ಆಘಾತಕ್ಕೆ ಒಳಗಾಗಿದ್ದೇವೆ. ಅವರು ವಿಧಾನಸಭೆಯಲ್ಲಿ ಸದಾ ನನ್ನೊಂದಿಗೆ ಇರುತ್ತಿದ್ದ ಸಹೋದರನಂತಿದ್ದರು~ ಎಂದು ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹೇಳಿದ್ದಾರೆ.



ಸಲ್ದಾನಾ ಅವರು ಕಳೆದ ಕೆಲವಾರು ವರ್ಷಗಳಿಂದ ಬಿಜೆಪಿ ಜೊತೆಗಿದ್ದ ಕೆಲವೇ ಕೆಲವು ಕ್ರೈಸ್ತ ಸಚಿವರಲ್ಲಿ ಒಬ್ಬರಾಗಿದ್ದು ಮಾರ್ಚ್ 3ರ ಚುನಾವಣೆಗಳಿಗಿಂತ ಮುನ್ನ ಅವರು ಔಪಚಾರಿಕವಾಗಿ ಬಿಜೆಪಿ ಸೇರಿದ್ದರು. ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದಲ್ಲಿ ಅವರು ಪ್ರವಾಸೋದ್ಯಮ, ಪರಿಸರ ಮತ್ತು ಅರಣ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.



 40 ಸದಸ್ಯ ಬಲದ ವಿಧಾನಸಭೆಯಲ್ಲಿ 21 ಸದಸ್ಯರನ್ನು ಹೊಂದಿದ್ದ ಬಿಜೆಪಿ ಸಲ್ದಾನಾ ನಿಧನದ ಪರಿಣಾಮವಾಗಿ ತನಗಿದ್ದ  ಸರಳ ಬಹುಮತವನ್ನೂ ಕಳೆದುಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.