ಗೋವಾ: ಮತ್ತೊಂದು ಕಟ್ಟಡ ವಾಲುವ ಭೀತಿ

7

ಗೋವಾ: ಮತ್ತೊಂದು ಕಟ್ಟಡ ವಾಲುವ ಭೀತಿ

Published:
Updated:

ಪಣಜಿ(ಪಿಟಿಐ): ಇಲ್ಲಿಗೆ ಸಮೀಪದ ಕಾಣಕೋಣ್‌ನಲ್ಲಿ ಶನಿವಾರ ಕುಸಿದ ನಿರ್ಮಾಣ ಹಂತದ ವಸತಿಗೃಹ ಕಟ್ಟ­ಡದ ಅವಶೇಷ ತೆರವು ಕಾರ್ಯಾ­ಚರ ಣೆಗೆ ಮತ್ತೊಂದು  ಭೀತಿ ಎದುರಾಗಿದೆ.ಇದೇ ಕಟ್ಟಡದ ಪಕ್ಕದಲ್ಲಿ ರುವ ಐದು ಮಹಡಿಯ ಕಟ್ಟಡ ವಾಲ ತೊಡಗಿರು­ವುದರಿಂದ ಮತ್ತಷ್ಟು ಕಾರ್ಯಾಚರಣೆ ಮುಂದುವರಿಸಲು ಅಡ್ಡಿಯಾಗುತ್ತಿದೆ.

‘ಪಕ್ಕದಲ್ಲಿರುವ ಎರಡು ಕಟ್ಟಡಗಳು ವಾಲತೊಡಗಿದ್ದರಿಂದ ಪರಿಹಾರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ’ ಎಂದು ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.  ಈಗಾಗಲೇ 17 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯ­ಗೊಂಡಿ­ರುವ 16 ಜನರನ್ನು  ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry