ಸೋಮವಾರ, ಜೂನ್ 21, 2021
29 °C

ಗೋವಿಂದನ ಪ್ರೀತಿಯ ಅಲೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಲಿ ನೆರೆದಿದ್ದವರ ಬಾಯಲ್ಲಿ ಒಂದೇ ಸಾಲು. `ಪ್ಯಾರ್‌ಗೆ ಆಗ್ಬುಟ್ಟೈತೆ...~. ಹಾಡು ಗೆದ್ದ ಖುಷಿಯಲ್ಲಿ ಬೀಗುತ್ತಿದ್ದ `ಗೋವಿಂದಾಯ ನಮಃ~ ಚಿತ್ರತಂಡ ಸುದ್ದಿಮಿತ್ರರಿಗೆ ಎದುರಾದಾಗ ಅವರಲ್ಲಿ ಚಿತ್ರ ಗೆದ್ದಷ್ಟೇ ಸಂಭ್ರಮ ಕಾಣುತ್ತಿತ್ತು.

 

ಈ ಹಾಡಿನ ಜನಪ್ರಿಯತೆಯ ಅಲೆಯಲ್ಲಿ ಚಿತ್ರವೂ ಯಶ ಕಾಣಲಿದೆ ಎಂಬುದು ಚಿತ್ರತಂಡದ ನಂಬಿಕೆ.ಕಾಮಿಡಿ ಪ್ರಧಾನ ಚಿತ್ರಗಳಲ್ಲಿ ಹಾಡುಗಳಿಗೆ ಕೆಲಸವಿಲ್ಲ ಎಂಬುದು ಚಿತ್ರರಂಗದಲ್ಲಿರುವ ಅಭಿಪ್ರಾಯ. ಕಾಮಿಡಿ ಚಿತ್ರವೆಂದರೆ ಅದರ ಹಾಡುಗಳಿಗೆ ಮಾರುಕಟ್ಟೆ ಇಲ್ಲ ಎಂದೇ ಅರ್ಥ. ಅದಕ್ಕೆ ಅಪವಾದ `ಗೋವಿಂದಾಯ ನಮಃ~ ಚಿತ್ರ ಎಂದರು ನಟ ಕೋಮಲ್. ಹಾಡಿನ ಗೆಲುವಿನ ಶ್ರೇಯಸ್ಸನ್ನು ಅವರು ಸಂಗೀತ ನಿರ್ದೇಶಕ ಗುರುಕಿರಣ್‌ಗೆ ಅರ್ಪಿಸಿದರು.ಕನ್ನಡದ ಹಾಡೊಂದು ಇಷ್ಟರಮಟ್ಟಿಗೆ ಜನಪ್ರಿಯತೆ ಗಳಿಸುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ ಎಂದು ಅರಳಿದ್ದ ಮುಖವನ್ನು ಮತ್ತಷ್ಟು ಹಿಗ್ಗಿಸಿ ಹೇಳಿದರು ಗುರುಕಿರಣ್. ಹಾಡು ಗೆಲ್ಲುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಈ ಮಟ್ಟಿಗೆ ದೇಶವಿದೇಶದಲ್ಲಿ ಖ್ಯಾತಿ ಗಳಿಸುತ್ತದೆ ಎಂಬ ಊಹೆ ಮಾಡಿರಲಿಲ್ಲ ಎಂದರು.ಚಿತ್ರ ಬಿಡುಗಡೆಗೂ ಮುನ್ನವೇ ಹಾಡು ಹೊಸ ಅಲೆ ಹುಟ್ಟುಹಾಕಿರುವುದು ಚಿತ್ರಕ್ಕೆ ಉತ್ತಮ ಆರಂಭ ಸಿಗುವ ಭರವಸೆ ಮೂಡಿಸಿದೆ ಎನ್ನುವುದು ನಿರ್ದೇಶಕ ಪವನ್ ಒಡೆಯರ್ ಮಾತು.ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಸೆನ್ಸಾರ್ ಮಂಡಳಿ ಒಪ್ಪಿಗೆಗೆ ಕಾದು ಕುಳಿತಿದೆ. ಇದೇ ತಿಂಗಳ ಅಂತ್ಯಕ್ಕೆ ಚಿತ್ರಮಂದಿರದಲ್ಲಿ ಗೋವಿಂದನನ್ನು ಪ್ರತಿಷ್ಠಾಪಿಸುವುದು ನಿರ್ಮಾಪಕ ಸುರೇಶ್ ಉದ್ದೇಶ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.