ಶುಕ್ರವಾರ, ನವೆಂಬರ್ 22, 2019
19 °C

ಗೋವಿಂದ ಕಾರಜೋಳ, ತಿಮ್ಮಾಪುರ ಶಕ್ತಿ ಪ್ರದರ್ಶನ

Published:
Updated:

ಮುಧೋಳ:  ಮುಧೋಳ ಮೀಸಲು ವಿಧಾನ ಸಭಾ ಕ್ಷೇತ್ರ-19ರ ಬಿಜೆಪಿಯ ಉಮೇದುವಾರ ರಾಗಿ ಸಚಿವ ಗೋವಿಂದ ಕಾರಜೋಳ  ನಾಮಪತ್ರವನ್ನು ಸೋಮವಾರ ಚುನಾವಣಾ ಅಧಿಕಾರಿ ಎಸ್.ಎಸ್.ಫಡಕೆ ಅವರಿಗೆ ಸಲ್ಲಿಸಿದರು.ಸುಮಾರು 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಅಭಿಮಾನಿಗಳೊಂದಿಗೆ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹ ಶೀಲ್ದಾರ್ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು.ಸುಡು ಬಿಸಿಲಲ್ಲಿ ಮಹಿಳೆಯರು ಕಾರ್ಯಕರ್ತರು ಸುಮಾರು 2 ಕಿ.ಮೀ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾ ಗಿತ್ತು.ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ಕಳೆದ 20 ವರ್ಷಗಳಿಂದ ನಿಮ್ಮ ಮಗನಂತೆ ಬೆಳಿಸಿ ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದಲ್ಲಿ ನನ್ನ ಹೆಸರು ಬಂದಿದ್ದರೆ ಅದು ಇಲ್ಲಿಯ ಪ್ರತಿ ಮತದಾ ರರಿಗೆ ಸಲ್ಲಬೇಕು. ನಾನು ನುಡಿದಂತೆ ನಡೆದಿದ್ದೇನೆ. ಘಟಪ್ರಭಾ ನದಿಯಲ್ಲಿ 12 ತಿಂಗಳು ನೀರು ಇರುವಂತೆ ಮಾಡಿ ಕೃಷಿಗೆ ಅನಕೂಲಮಾಡಿದ್ದೇನೆ. ರೈತರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಟಮಾಡಿ  ಕಬ್ಬಿನ ಬೆಲೆ ನಿಗದಿಗೆ ಪ್ರಯತ್ನ ಪಟ್ಟಿದ್ದೇನೆ. ರೈತರ ಮೇಲೆ ಹಾಕಿರುವ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಶೈಕ್ಷಣಿಕ, ಸಹಕಾರಿ ರಂಗದಲ್ಲಿ, ರಸ್ತೆ ಕುಡಿಯುವ ನೀರಿನ ವ್ಯವಸ್ಥೆಯನ್ನು ತಾವೆಲ್ಲ ಕಣ್ಣಾರೆ ಕಂಡಿದ್ದಿರಿ ನನ್ನ ಅಭಿವೃದ್ಧಿಯ ಹೋರಾಟ ನಿಂತಿಲ್ಲ ಇಲ್ಲಿ ಸೇರಿರುವ ಅಪಾರ ಸಂಖ್ಯೆಯ ಕಾರ್ಯಕರ್ತರು ಅಭಿಮಾನಿಗಳು ಈಗ ಸ್ವಯಂ ಸ್ಪೂರ್ತಿಯಿಂದ ಬಂದಂತೆ ಮುಂದಿನ 20 ದಿನಗಳಕಾಲ ಪಕ್ಷದ ಪರವಾಗಿ ವ್ಯವಸ್ಥಿತ ಪ್ರಚಾರ ನಡೆಸಲು ವಿನಂತಿಸಿದರು.ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಮಾತನಾಡಿ, ಇದು ಚುನಾ ವಣೆಯಲ್ಲ ಇದು ಧರ್ಮಯುದ್ಧ ಕ್ಷೇತ್ರದಾದ್ಯಂತ ಸಾವಿರಾರು ಕೋಟಿ ಅನುದಾನದಿಂದ ಅಭಿವೃದ್ಧಿ ಮಾಡಿದ ಕಾರಜೋಳರು ಜನರ ನಂಬಿಕೆ ಉಳಿಸಿಕೊಂಡಿದ್ದಾರೆ ಎನ್ನುವದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಯಾರು ಎನೇ ಕುತಂತ್ರ ಮಾಡಿದರೂ ಕಾರಜೋಳರು ದಾಖಲೆ ಮತಗಳ ಅಂತರದಿಂದ ಆಯ್ಕೆ ಶತಸಿದ್ದ ಎಂದು ಹೇಳಿದರು.ಮುಖಂಡರಾದ   ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ   ಎಲ್.ಕೆ.ಬಳಗಾನೂರ, ರಾಜು ಭರಮೋಜಿ, ವಕೀಲ ಪ್ರಕಾಶ ವಸ್ತ್ರದ, ಬಿಜೆಪಿ ಅಧ್ಯಕ್ಷ      ಬಿ.ಎಚ್.ಪಂಚಗಾವಿ, ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ, ಜಿ.ಪಂ. ಅಧ್ಯಕ್ಷೆ ಶಾಂತವ್ವ ಭೂಷಣ್ಣವರ, ವೆಂಕಪ್ಪ ಗಿಡ್ಡಪ್ಪನವರ, ಉದಯ ಸಾರವಾಡ,  ಅನಂತರಾವ ಘೋರ್ಪಡೆ, ಬಸವರಾಜ ಮಾನೆ, ಗುರುರಾಜ ಕಟ್ಟಿ, ಮುಂತಾದವರು ಹಾಗೂ ವಿವಿಧ ಸಮಾಜದ ಮುಖಂಡರು  ಮಾತನಾಡಿದರು.ಮುಧೋಳ: 8 ನಾಮಪತ್ರ

ಮುಧೋಳ ವಿಧಾನಸಭಾ ಮೀಸಲು ಕ್ಷೇತ್ರದಿಂದ ಎಂಟು ಜನರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಗೋವಿಂದ ಕಾರಜೋಳ (ಬಿಜೆಪಿ), ಆರ್.ಬಿ. ತಿಮ್ಮಾಪುರ (ಕಾಂಗ್ರೆಸ್), ಶಂಕರ ನಾಯಕ (ಜೆಡಿಎಸ್), ಅಶೋಕ ಲಿಂಬಾವಳಿ (ಬಿಎಸ್‌ಆರ್ ಕಾಂಗ್ರೆಸ್), ಶಂಕರ ಪುಜಾರಿ (ಪಕ್ಷೇತರ) ಕಿರಣ ಕಟ್ಟಿಮನಿ, ಸುರೇಶ ಕಾಳೆ, ಪರುಶರಾಮ ಜಾಲಗಾರ ಇವರು ಕೆಜೆಪಿ ಯಿಂದ ನಾಮ ಪತ್ರಸಲ್ಲಿಸಿದ್ದಾರೆ.ತಿಮ್ಮಾಪುರ ನಾಮಪತ್ರ 

ಮುಧೋಳ ಮೀಸಲು ವಿಧಾನ ಸಭಾ ಕ್ಷೇತ್ರ-19 ರ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಬಿ.ತಿಮ್ಮಾ ಪುರ  ಬುಧವಾರ ನಾಮಪತ್ರ ಸಲ್ಲಿಸಿದರು. ಅಪಾರ ಅಭಿಮಾನಿಗಳೊಂದಿಗೆ ಸೈಯದಸಾಬ್ ದರ್ಗಾದಿಂದ ಬೃಹತ್ ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ್, ಸೈದು ಹುಬ್ಬ ಳ್ಳಿಕರ, ಐ.ಎಚ್. ಅಂಬಿ, ಸಿ.ಜಿ.ಚಿನಿವಾಲ, ಶಿವಾನಂದ ಉದಪುಡಿ, ಶಿವಕುಮಾರ ಮಲಘಾಣ, ಲೋಕಣ್ಣ ಕೊಪ್ಪದ, ಎಚ್.ಎ.ಕಡಪಟ್ಟಿ, ಹಣಮಂತ ಅಡವಿ, ಸಿದ್ರಾಮ ಪುಜಾರ, ಮುಂತಾದ ಮುಖಂಡರು ಪಾಲ್ಗೊಂಡಿ ದ್ದರು. ಬಿಜೆಪಿಯ ಸಿದ್ದು ಸೂರ್ಯವಂಶಿ, ಗೋಪಾಲ ಗುಣದಾಳ, ಅಜೀತ ಹೊನವಾಡ, ಎಸ್.ಆರ್.ಹಿಪ್ಪರಗಿ, ಮಹಾದೇವ ಬಿದರಿ, ತಾನಾಜಿ ಸೂರ್ಯವಂಶಿ, ಮಹಾಂತೇಶ ಉದ ಪುಡಿ ಮುಂತಾದವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು.ಬಿಜೆಪಿಗೆ ಸೇರ್ಪಡೆ

ಬಿ.ಜೆ.ಪಿ. ಸರ್ಕಾರ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಮಾಡಿದ ಜನಪರ ಕೆಲಸಗಳನ್ನು ಮೆಚ್ಚಿ ಸೋರಗಾಂವ ಗ್ರಾಮದ ಸುಮಾರು 60 ಜನ ವಿವಿಧ ಪಕ್ಷ  ತೂರೆದು  ಗೋವಿಂದ ಕಾರಜೋಳ, ಬಿ.ಹೆಚ್.ಪಂಚಗಾವಿ, ಆರ್.ಟಿ.ಪಾಟೀಲ, ಕೆ.ಟಿ.ಪಾಟೀಲ, ಸುರೇಶ ಉತ್ತೂರ, ಹಣಮಂತ, ರುದ್ರಪ್ಪ ಅಡವಿ, ಎ.ಆರ್.ಮಾಚಪ್ಪನವರ.            ಅರುಣ ಕಾರಜೋಳ ಸಮ್ಮುಖದಲ್ಲಿ ಸೇರಿದರು.

ಪ್ರತಿಕ್ರಿಯಿಸಿ (+)