ಗೋವಿಂದ ವರದಿ: ಎಸ್‌ಎಫ್‌ಐ ಪ್ರತಿಭಟನೆ

7

ಗೋವಿಂದ ವರದಿ: ಎಸ್‌ಎಫ್‌ಐ ಪ್ರತಿಭಟನೆ

Published:
Updated:

ಯಲಬುರ್ಗಾ: ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವಂತೆ ಶಿಫಾರಸು ಮಾಡಿರುವ ಪ್ರೋ. ಗೋವಿಂದ ವರದಿಯನ್ನು ಸರ್ಕಾರ ಈ ಕೂಡಲೇ ತಿರಸ್ಕರಿಸುವುದು ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ಎಸ್‌ಎಫ್‌ಐ ಸಂಘಟನೆ ಶುಕ್ರವಾರ ಧರಣಿ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಪಟ್ಟಣದ ವಿವಿಧ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ತಹಸೀಲ್ ಕಚೇರಿಯ ಆವರಣದಲ್ಲಿ ಸಭೆ ಸೇರಿದರು.ನಂತರ ಜಿಲ್ಲಾ ಘಟಕದ ಉಪಾಧ್ಯಕ್ಷ ಹನಮಂತ ಭಜಂತ್ರಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ. ಅಪ್ರತ್ಯಕ್ಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲಿಸುವ ಬಿಜೆಪಿ ಸರ್ಕಾರ ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತಿರುವ ಸಚಿವರು ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ತೋರುತ್ತಿಲ್ಲ, ಶಿಕ್ಷಣ ಸಚಿವರಿಂದ ಕನ್ನಡ ಶಾಲೆ ಹಾಗೂ ಭಾಷೆಗೆ ಕುತ್ತು ಬಂದಿರುವ ಹಿನ್ನೆಲೆಯಲ್ಲಿ ಸಚಿವರು ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.ಯಾವುದೇ ಕಾರಣಕ್ಕು 12,740 ಸರ್ಕಾರಿ ಕನ್ನಡ ಶಾಲೆಗಳನ್ನು ಬೇರೆ ಶಾಲೆಗಳಿಗೆ ವೀಲಿನಗೊಳಿಸದೇ ಕಡಿಮೆ ಮಕ್ಕಳಿರುವ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೊಳಿಸಬೇಕು, ಸರ್ಕಾರಿ ಶಾಲೆಗಳಿಗೆ ವಿಷಯವಾರು  ಅಗತ್ಯ ಶಿಕ್ಷಕರ ನೇಮಕ, ಶಿಕ್ಷಕರಿಗೊಂದು ಕೊಠಡಿ, ಆಟದ ಮೈದಾನ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಹಾಗೂ ಇನ್ನಿತರ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಖಾಸಗಿ ಶಾಲೆಗಳಿಗೆ ಅನುಮತಿ ನೀಡಕೂಡದು ಹಾಗೂ ಅನುಮತಿ ಇಲ್ಲದೇ ನಡೆಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ತಾಲ್ಲೂಕು ಘಟಕದ ಉಪಾಧ್ಯಕ್ಷ ರಾಶೀದ್ ಖಾಜಿ, ಉಪಾಧ್ಯಕ್ಷ ಜಗದೀಶ ಪೊಲೀಸ್‌ಪಾಟೀಲ, ಮಂಜು ಹಳ್ಳಿಕೇರಿ, ಮಹಾಂತೇಶ ಉಂಗ್ರಾಣಿ, ಮಲ್ಲು ಬಡಿಗೇರಿ, ಯಮನೂರ ಭಾವಿಮನಿ, ನಾಗರಾಜ ಕುರಬರ, ಶೈಲಾ, ಮಂಜುಳಾ ದ್ರಾಕ್ಷಾಯಿಣಿ, ರೇಖಾ ಮಹಾಲಕ್ಷ್ಮಿ, ಪರ್ವಿನ್ ಕುಮಾರಸ್ವಾಮೀ, ಸರೋಜಾ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry