`ಗೋಶಾಲೆಗೆ ಹಣ ಬಿಡುಗಡೆ ಮಾಡಿ'

6

`ಗೋಶಾಲೆಗೆ ಹಣ ಬಿಡುಗಡೆ ಮಾಡಿ'

Published:
Updated:

ಬೆಳಗಾವಿ: ರಾಯಬಾಗ ತಾಲ್ಲೂಕಿನ ಮಂಟೂರ ಗೋಶಾಲೆಗೆ ಮೇವು        ಪೂರೈಸಿದ ರೈತರಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್    ಪಕ್ಷದ ಎಸ್ ಘಟಕದ ಬೆಳಗಾವಿ ಜಿಲ್ಲಾ ಅಧ್ಯಕ್ಷ            ಅಣ್ಣಾಸಾಹೇಬ ಹಂಚಿನಮನಿ ನೇತೃತ್ವದಲ್ಲಿ ರೈತರು ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿಗೆ ಸೋಮವಾರ ಮನವಿ        ಸಲ್ಲಿಸಿದರು.ಮಂಟೂರ ಗೋಶಾಲೆಗೆ ರೈತರು ಸುಮಾರು 1400 ಟನ್‌ಗಳಷ್ಟು ಮೇವು ಪೂರೈಸಿದ್ದಾರೆ. ಐದು ತಿಂಗಳಾದರೂ ರೈತರಿಗೆ ಹಣ ನೀಡಿಲ್ಲ. ಆದ್ದರಿಂದ       ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ    ಒತ್ತಾಯಿಸಲಾಗಿದೆ.ಸುರೇಶ ಹಂಜಿ, ಬಸವರಾಜ, ಎ.ಪಿ.ಪಾಟೀಲ, ಎಸ್.ಆರ್.ಮೀಸಿ, ಶಿವಪುತ್ರ ಕಲ್ಟಿಪ್ಪಿ, ನಾಗಪ್ಪ ಪಾಶ್ಚಾಪುರಿ, ರಾಮಪ್ಪ ಹಂಜಿ, ಬೆಲ್ಲಪ್ಪ ಬುರ್ಜಿ, ಶೇಖರ ಹಂಜಿ, ಮಲ್ಲಪ್ಪ ಮತ್ತಿತರರು ಮನವಿ ಸಲ್ಲಿಸುವ ಸಂದರ್ಭದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry