ಭಾನುವಾರ, ಮೇ 22, 2022
26 °C

ಗೋಷ್ಠಿ ಅಧ್ಯಕ್ಷತೆಗೆ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ‘ಸಮ್ಮೇಳನ ಮೆರವಣಿಗೆ ಬ್ಯಾಡ್ಜ್‌ಗಳನ್ನು ವಿತರಿಸದೇ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ಅಪಮಾನ ಎಸಗಿರುವುದರಿಂದ ಸಮ್ಮೇಳನ ಗೋಷ್ಠಿಯ ಅಧ್ಯಕ್ಷತೆ ವಹಿಸುವುದಿಲ್ಲ’ ಎಂದು ಲೇಖಕ ಪುಸ್ತಕಮನೆ ಹರಿಹರ ಪ್ರಿಯ ‘ಪ್ರಜಾವಾಣಿ’ಗೆ ತಿಳಿಸಿದರು.‘ಭಾನುವಾರ ನಡೆಯಬೇಕಿದ್ದ ‘ಪರಂಪರೆ ಮತ್ತು ಕನ್ನಡ’ ಗೋಷ್ಠಿಯ ಅಧ್ಯಕ್ಷನಾಗಿ ನಾನು ಭಾಗವಹಿಸುತ್ತಿದ್ದು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಬ್ಯಾಡ್ಜ್ ಕೇಳಿದರೆ ಶುಕ್ರವಾರ ಮುಂಜಾನೆ 6 ಗಂಟೆಗೆ ಬರಲು ಸಿಬ್ಬಂದಿ ಸೂಚಿಸಿದರು. ದೂರವಾಣಿ ಕರೆ ಮಾಡಿ ಬ್ಯಾಡ್ಜ್ ಅಗತ್ಯವಿದೆ ಎಂದು ತಿಳಿಸಿದ್ದರೂ ಸ್ಥಳಕ್ಕೆ ಹೋದಾಗ ನಿಮ್ಮೊಬ್ಬರಿಗೇ ಪಾಸ್ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅವಮಾನಿಸಲಾಯಿತು’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.