ಸೋಮವಾರ, ಅಕ್ಟೋಬರ್ 21, 2019
25 °C

ಗೋಹತ್ಯೆ- 7 ವರ್ಷ ಕಠಿಣ ಶಿಕ್ಷೆ

Published:
Updated:

ಭೋಪಾಲ್ (ಪಿಟಿಐ): ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾದ ಗೋ ಹತ್ಯೆಯ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದಿರುವ ಮಧ್ಯಪ್ರದೇಶ ಸರ್ಕಾರ, ಕಾನೂನು ಉಲ್ಲಂಘಿಸಿದವರಿಗೆ ಈಗಿರುವ ಮೂರು ವರ್ಷಗಳ ಕಠಿಣ ಸಜೆಯನ್ನು ಏಳು ವರ್ಷಗಳಿಗೆ ಏರಿಸಿದೆ.ರಾಷ್ಟ್ರಪತಿ ಅವರ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ, `ಮಧ್ಯಪ್ರದೇಶ ಗೋ ಹತ್ಯಾ ತಡೆ ಕಾಯ್ದೆ~ಯನ್ನು ಜಾರಿಗೆ ತರಲಾಗಿದೆ ಎಂದು ಸರ್ಕಾರದ ಅಧಿಕೃತ ಹೇಳಿಕೆ ತಿಳಿಸಿದೆ. ಗೋ ಸಂತತಿ ರಕ್ಷಣೆಗಾಗಿ ರಾಜ್ಯ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದಿರುವ ಅಧಿಕಾರಿಗಳು, 2004ರಲ್ಲಿ ಜಾರಿಗೆ ತಂದ ಗೋವಂಶ ಪ್ರತಿಷೇಧ ಅಧಿನಿಯಮದಲ್ಲಿ ಹಲವು ಬದಲಾವಣೆಗಳನ್ನು ತರುವುದರೊಂದಿಗೆ 2010ರಲ್ಲಿ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲಾಗಿತ್ತು ಎಂದು ತಿಳಿಸಿದ್ದಾರೆ.ಈ ಕಾಯ್ದೆಯಲ್ಲಿದ್ದ ಹಲವು ಕುಂದುಕೊರತೆಗಳನ್ನು ನಿವಾರಿಸುವ ಮೂಲಕ ಅದನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಹೊಸ ಕಾಯ್ದೆಯ ಅನ್ವಯ ಯಾವುದೇ ವ್ಯಕ್ತಿ ಗೋಹತ್ಯೆ ಮಾಡುವುದಾಗಲಿ, ಅದನ್ನು ಪ್ರೋತ್ಸಾಹಿಸುವುದಾಗಲಿ ಅಥವಾ ಹತ್ಯೆಗಾಗಿ ಗೋವುಗಳನ್ನು ನೀಡುವುದಾಗಲಿ ಅಪರಾಧವಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)