ಗೋ ಕಾರ್ಟಿಂಗ್: ಕುಶ್ ಮೈನಿಗೆ ಪ್ರಶಸ್ತಿ

ಸೋಮವಾರ, ಜೂಲೈ 22, 2019
27 °C

ಗೋ ಕಾರ್ಟಿಂಗ್: ಕುಶ್ ಮೈನಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ಕರ್ನಾಟಕದ ಕುಶ್ ಮೈನಿ ಇಟಲಿಯಲ್ಲಿ ಇತ್ತೀಚಿಗೆ ನಡೆದ ಗೋ ಕಾರ್ಟಿಂಗ್ ರೇಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಹನ್ನೊಂದು ವರ್ಷದ ಕುಶ್ 8ರಿಂದ 13 ವರ್ಷದೊಳಗಿನವರ ವಿಭಾಗದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಗೆಲುವು ಬೆಂಗಳೂರಿನ ಕುಶ್ ಅವರಿಗೆ ಸಾಕಷ್ಟು ಆತ್ಮವಿಶ್ವಾಸ ತಂದು ಕೊಟ್ಟಿದೆ.

ಭಾರಿ ಪೈಪೋಟಿ ಏರ್ಪಟ್ಟಿದ್ದ ಕೊನೆಯ ಲ್ಯಾಪ್‌ನಲ್ಲಿ ಕುಶ್ ತಮ್ಮ ತಂಡದವರೇ ಆದ ಲಿನಾರ್ಡೊ ಲೊರಾಂಡಿ ಅವರನ್ನು ಹಿಂದಿಕ್ಕಿದರು. ಲೊರಾಂಡಿ `ಬೇಬಿ ರೇಸ್~ನ ಅಗ್ರಮಾನ್ಯ ಚಾಲಕರಾಗಿದ್ದಾರೆ. ಈ ಸ್ಪರ್ಧಿ ಹಿಂದೆ ಸಾಕಷ್ಟು ಸಲ         ಇಟಲಿ ಹಾಗೂ ಯುರೋಪ್ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.  ಅವರನ್ನು ಹಿಂದಿಕ್ಕಿ ಕುಶ್ ಈ ಸಾಧನೆ ಮಾಡಿದ್ದಾರೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry