ಸೋಮವಾರ, ಮಾರ್ಚ್ 8, 2021
31 °C

ಗೋ. ಮಧುಸೂದನ ವಜಾಕ್ಕೆ ಆಗ್ರಹ, ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋ. ಮಧುಸೂದನ ವಜಾಕ್ಕೆ ಆಗ್ರಹ, ಪ್ರತಿಭಟನೆ

ಮೈಸೂರು: ಬಿಜೆಪಿ ರಾಜ್ಯ ಘಟಕದ ಸಹ ವಕ್ತಾರ ಗೋ. ಮಧುಸೂದನ ಅವರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಪಕ್ಷದ ಕಾರ್ಯಕರ್ತರು ಸಭೆಗೆ ಅಡ್ಡಿಪಡಿಸಿದ ಘಟನೆ ಗುರುವಾರ ಇಲ್ಲಿ ನಡೆಯಿತು.

ಹೋಟೆಲ್‌ವೊಂದರಲ್ಲಿ ನಗರ ಘಟಕದ ವಿಶೇಷ ಕಾರ್ಯಕಾರಿಣಿ ಸಭೆ ಆರಂಭಕ್ಕೂ ಮುನ್ನವೇ ಪ್ರತಿಭಟನೆಯಲ್ಲಿ ತೊಡಗಿದ್ದ ಒಂದು ಬಣದ ಕಾರ್ಯಕ್ರರ್ತರು ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಘೋಷಣೆ ಕೂಗಲಾರಂಭಿಸಿದರು.ಗೋ. ಮಧುಸೂದನ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲು ಮುಂದಾಗುತ್ತಿದ್ದಂತೆ ವೇದಿಕೆ ಮೇಲೇರಿದ ಕಾರ್ಯಕರ್ತರು ಅಡ್ಡಿಪಡಿಸಿದರು. ಶಾಸಕ ಅರವಿಂದ ಲಿಂಬಾವಳಿ ಅವರ ಮನವಿಗೂ ಕಿವಿಗೊಡದೆ ‘ನ್ಯಾಯ ಬೇಕು’ ಎಂದು ಕೂಗುತ್ತಾ ವೇದಿಕೆಗೆ ಮುತ್ತಿಗೆ ಹಾಕಿದರು.‘ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಗೋ ಮಧುಸೂದನ ಪ್ರಮುಖ ಕಾರಣ. ನಗರ ಘಟಕದ ಪದಾಧಿಕಾರಿಗಳ ಆಯ್ಕೆ ಸರಿಯಾಗಿ ನಡೆದಿಲ್ಲ. ಅವರಿಗೆ ಮಾತನಾಡಲು ಅವಕಾಶ ನೀಡಬಾರದು. ಸಭೆಯಿಂದ ಹೊರಕಳುಹಿಸಿ’ ಎಂದು ಹಟ ಹಿಡಿದರು.ಈ ಸಂದರ್ಭದಲ್ಲಿ ಮಾತಿನ ಚಕಮಕಿ ಜೋರಾಯಿತು. ಗಲಾಟೆ ಹೆಚ್ಚಾಗಬಹುದು ಎಂದು ಅರಿತ ಗೋ ಮಧುಸೂದನ ಅವರು ವೇದಿಕೆಯಿಂದ ಕೆಳಗಿಳಿದು ಹೊರ ನಡೆದರು.ಬಳಿಕ ಮಾತನಾಡಿದ ಲಿಂಬಾವಳಿ, ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ. ಎಲ್ಲರೂ ಪಕ್ಷದ ನೀತಿ ನಿಯಮಗಳ ಚೌಕಟ್ಟಿನಲ್ಲಿ ನಡೆಯಬೇಕು. ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಮತ್ತೆ ಮಧ್ಯ ಪ್ರವೇಶಿಸಿದ ಕಾರ್ಯಕರ್ತರು, ‘ನಗರ ಘಟಕದ ಪದಾಧಿಕಾರಿಗಳ ನೇಮಕದಲ್ಲೂ ಅನ್ಯಾಯವಾಗಿದೆ. ಹೊಸಬರಿಗೆ ಅವಕಾಶ ನೀಡಿ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಸಂಘಟನೆ ಗೊತ್ತಿಲ್ಲದವರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ. ಪದಾಧಿಕಾರಿಗಳನ್ನು ಬದಲಾಯಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.