ಸೋಮವಾರ, ಜನವರಿ 20, 2020
24 °C

ಗೌಡರ ಆರೋಪ ನಿರಾಕರಿಸಿದ ನೈಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹೊಸದಾಗಿ ಜಾರಿ ಯಾಗಲಿರುವ ಭೂಸ್ವಾಧೀನ ಕಾಯ್ದೆಯ ವ್ಯಾಪ್ತಿಯಿಂದ ತಪ್ಪಿಸಿಕೊ ಳ್ಳುವ ಉದ್ದೇಶದಿಂದ, ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿ ಡಾರ್‌ (ಬಿಎಂಐಸಿ) ಯೋಜನೆಗೆ ಜಮೀನು ನೀಡಿದವರಿಗೆ ಶೇಕಡ 40ರಷ್ಟು ಅಭಿವೃದ್ಧಿಪಡಿಸಿದ ಜಮೀ ನನ್ನು ಪರಿಹಾರ ರೂಪದಲ್ಲಿ ನೀಡಲು ನಾವು ಮುಂದೆ ಬಂದಿದ್ದೇವೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಆರೋಪಿಸಿ ರುವುದು ಸುಳ್ಳು’ ಎಂದು ನೈಸ್ ಕಂಪೆನಿ ಹೇಳಿದೆ.



ಗೌಡರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಂಪೆನಿ, ‘ಹೊಸ ಕಾಯ್ದೆಯ ಅನ್ವಯ ಜಮೀನು ನೀಡಿದವರಿಗೆ ಶೇಕಡ 20ರಷ್ಟು ಅಭಿವೃದ್ಧಿಪಡಿಸಿದ ಜಮೀನನ್ನು ಪರಿಹಾರ ರೂಪದಲ್ಲಿ ನೀಡಿದರೆ ಸಾಕು. ಆದರೆ ನಾವು ಶೇಕಡ 40ರಷ್ಟನ್ನು ನೀಡಲು ಮುಂದೆ ಬಂದಿದ್ದೇವೆ’ ಎಂದು ಹೇಳಿದೆ.

ಪ್ರತಿಕ್ರಿಯಿಸಿ (+)