ಶನಿವಾರ, ಡಿಸೆಂಬರ್ 7, 2019
24 °C

ಗೌನಿಪಲ್ಲಿಗೆ ಪ.ಪಂ. ಸ್ಥಾನ: ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌನಿಪಲ್ಲಿಗೆ ಪ.ಪಂ. ಸ್ಥಾನ: ಬೇಡಿಕೆ

ಶ್ರೀನಿವಾಸಪುರ: ತಾಲ್ಲೂಕಿನ ಮುಖ್ಯ ವ್ಯಾಪಾರ ಕೇಂದ್ರವಾದ ಗೌನಿಪಲ್ಲಿಯನ್ನು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿ ಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ. ಅದಕ್ಕೆ ಪೂರಕವಾಗಿ ಗ್ರಾಮ ವನ್ನು ಸಜ್ಜುಗೊಳಿಸಬೇಕು. ರಸ್ತೆ, ಪಾದಚಾರಿ ರಸ್ತೆಯಲ್ಲಿನ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿದರು.ಗೌನಿಪಲ್ಲಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಗೌನಿಪಲ್ಲಿಗೆ ಗುಣಾತ್ಮಕ ವಿದ್ಯುತ್ ಪೂರೈಸುವ ದೃಷ್ಟಿಯಿಂದ ಉಪ ವಿದ್ಯುತ್ ಕೇಂದ್ರವನ್ನು ಸ್ಥಾಪಿಸಲಾಗು ವುದು. ಇಲ್ಲಿನ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ 15 ಎಕೆರೆ ಜಮೀನು ಪಡೆದುಕೊಂಡು ನಿವೇಶನಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.ತಾಲ್ಲೂಕಿನ ದಳಸನೂರು, ಹೊಗಳ ಗೆರೆ, ಗೌನಿಪಲ್ಲಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸ ಲಾಗಿದೆ. ಗಡಿ ಪ್ರದೇಶದಲ್ಲಿನ ರಾಯ ಲ್ಪಾಡ್, ಅಡ್ಡಗಲ್ ಮತ್ತು ಕೂರಿಗೇಪಲ್ಲಿಯಲ್ಲಿ ತಲಾ 30 ಹಾಸಿಗೆ ಗಳ ಆಸ್ಪತ್ರೆಗಳನ್ನು ನಿರ್ಮಿಸಲಾಗು ವುದು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಿರಂತರವಾಗಿ ಪ್ರಯತ್ನಿಸ ಲಾಗುತ್ತಿದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಆರ್. ನಾರಾಯಣಸ್ವಾಮಿ, ಜಿ.ಕೆ.ನಾಗರಾಜ್, ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್, ಗ್ರಾ.ಪಂ. ಸದಸ್ಯ ಗಣೇಶ್,  ತಾ.ಪಂ. ಮಾಜಿ ಸದಸ್ಯ ರಾಜಶೇಖರರೆಡ್ಡಿ, ಗ್ರಾ. ಪಂ. ಅಧ್ಯಕ್ಷೆ ಸುಬ್ಬಮ್ಮ, ಸದಸ್ಯ ರಾಮು, ಮುಖಂಡರಾದ ವೆಂಕಟರಾಯಪ್ಪ, ಇ.ಶಿವಣ್ಣ, ಕೆ.ಕೆ.ಮಂಜು, ಮಧು ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)