ಸೋಮವಾರ, ಜೂನ್ 21, 2021
21 °C

ಗೌರಿಬಿದನೂರಿನಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಸರ್ಕಾರಿ ಪದವಿ ಕಾಲೇಜು­ಗಳಲ್ಲಿ ಪ್ರವೇಶ ಮತ್ತು ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಗುರುವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟಿಸಿದರು.ಸರ್ಕಾರ ಪ್ರತಿವರ್ಷ ಪ್ರವೇಶ ಮತ್ತು ಪರೀಕ್ಷಾ ಶುಲ್ಕ ಏರಿಕೆ ಮಾಡುತ್ತಿ­ರುವುದರಿಂದ ಸರ್ಕಾರಿ ಕಾಲೇಜಿನ ಶುಲ್ಕಕ್ಕೂ ಖಾಸಗಿ ಕಾಲೇಜುಗಳ ಶುಲ್ಕಕ್ಕೂ ಯಾವುದೇ ವ್ಯತ್ಯಾಸವಿಲ್ಲ­ದಂತಾಗಿದೆ ಎಂದು ಎಬಿವಿಪಿ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಕುಮಾರ್ ಟೀಕಿಸಿದರು.ಶುಲ್ಕ ಹೆಚ್ಚಳದಿಂದಾಗಿ ಗ್ರಾಮೀಣ ವಿದ್ಯಾರ್ಥಿಗಳು ಶುಲ್ಕ ಕಟ್ಟಲು ಸಾಧ್ಯವಿಲ್ಲದೆ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸುವ ಸಾಧ್ಯತೆ ಇದೆ. ಒಂದೆಡೆ ಕಡ್ಡಾಯ ಶಿಕ್ಷಣದ ಮಂತ್ರ ಪಠಿಸುವ ಸರ್ಕಾರ ಮತ್ತೊಂದೆಡೆ ಶುಲ್ಕ ಏರಿಕೆ ಮೂಲಕ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದರು.ಸರ್ಕಾರ ಇದೇ ರೀತಿ ಶುಲ್ಕ ಹೆಚ್ಚಿಸಿದರೆ ಹಣ ಇದ್ದವರಿಗೆ ಮಾತ್ರ ಉನ್ನತ ಶಿಕ್ಷಣ ಎಂದಾಗುತ್ತದೆ. ಶುಲ್ಕ ಏರಿಕೆ ಆದೇಶವನ್ನು ಶೀಘ್ರ ಹಿಂಪಡೆ­ಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸ­ಲಾಗುವುದು ಎಂದು ಎಚ್ಚರಿಸಿದರು.ಎಬಿವಿಪಿ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್, ಮುಖಂಡರಾದ ಮಹೇಂದ್ರ, ಸುರೇಶ್, ಪುರುಷೋತ್ತಮ, ಅನುರಾಧಾ, ಚೈತ್ರಾ, ರೂಪಾ, ನಾಗ­ಮಣಿ, ಶ್ವೇತಾ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.