ಸೋಮವಾರ, ಮೇ 17, 2021
21 °C
ಗಾಲ್ಫ್: ಉಷಾ ಐಜಿಯು ಸದರ್ನ್ ಇಂಡಿಯಾ ಟೂರ್ನಿ

ಗೌರಿ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೆಹಲಿಯ ಗೌರಿ ಮೋಂಗಾ ಇಲ್ಲಿ ಕೊನೆಗೊಂಡ ಉಷಾ ಐಜಿಯು ಸದರ್ನ್ ಇಂಡಿಯಾ ಮಹಿಳೆಯರ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಕರ್ನಾಟಕ ಗಾಲ್ಫ್ ಕೋರ್ಸ್‌ನಲ್ಲಿ ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು ಗೌರಿ 73 ಅವಕಾಶಗಳನ್ನು ಬಳಸಿಕೊಂಡರು. ಈ ಮೂಲಕ ಒಟ್ಟಾರೆಯಾಗಿ 219 ಸ್ಕೋರ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.2011ರ ಬಳಿಕ ಗೌರಿಗೆ ದೊರೆತ ಮೊದಲ ಪ್ರಶಸ್ತಿ ಇದಾಗಿದೆ. `ಸುದೀರ್ಘ ಅವಧಿಯ ಬಳಿಕ ಈ ಪ್ರಶಸ್ತಿ ಲಭಿಸಿದೆ. ಈ ಹಿಂದಿನ ಎರಡು ವರ್ಷಗಳಲ್ಲಿ ನಾನು ಹೆಚ್ಚು ಟೂರ್ನಿಗಳಲ್ಲಿ ಆಡಿಲ್ಲ. ಈ ಸಾಧನೆಯಿಂದ ಆತ್ಮವಿಶ್ವಾಸ ಹೆಚ್ಚಿದ್ದು, ಋತುವಿನ ಇನ್ನುಳಿದ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ನೆರವಾಗಲಿದೆ' ಎಂದು 19ರ ಹರೆಯದ ಆಟಗಾರ್ತಿ ಪ್ರತಿಕ್ರಿಯಿಸಿದರು.ಹೋದ ವಾರ ನಡೆದ ಕರ್ನಾಟಕ ಗಾಲ್ಫ್ ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಗೌರಿ ಮೂರು ಸುತ್ತುಗಳಲ್ಲೂ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಯಶಸ್ವಿಯಾದರು.ಅಂತಿಮ ಸುತ್ತಿನಲ್ಲಿ ಗೌರಿ ಹಾಗೂ ಗುರ್ಬಾನಿ ನಡುವೆ ಪ್ರಬಲ ಪೈಪೋಟಿ ಕಂಡುಬಂತು. 220 ಸ್ಕೋರ್‌ಗಳೊಂದಿಗೆ ಗುರ್ಬಾನಿ `ರನ್ನರ್ ಅಪ್' ಎನಿಸಿಕೊಂಡರು. ಮೊದಲ ಸುತ್ತಿನ ಬಳಿಕ ಮುನ್ನಡೆಯಲ್ಲಿದ್ದ ಅಸ್ತಾ ಮದನ್ ಒಟ್ಟು 221 ಸ್ಕೋರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರು.ತ್ವೇಸಾ ಮಲಿಕ್ (222), ಗುರ್‌ಸಿಮರ್ ಬದ್ವಾಲ್ (223), ರಕ್ಷಾ ಫಡ್ಕೆ (226) ಮತ್ತು ಅದಿತಿ ಅಶೋಕ್ (227) ಬಳಿಕದ ಸ್ಥಾನಗಳನ್ನು ಪಡೆದುಕೊಂಡರು. ಅದಿತಿ ಅಂತಿಮ ಸುತ್ತಿನಲ್ಲಿ (71) ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.`ಎ' ವಿಭಾಗದ ಪ್ರಶಸ್ತಿಯನ್ನು ಗುರ್ಬಾನಿ ತಮ್ಮದಾಗಿಸಿಕೊಂಡರು. ಅಸ್ತಾ ಮದನ್, ತ್ವೇಸಾ ಮಲಿಕ್ ಮತ್ತು ಅದಿತಿ ಅಶೋಕ್ ಬಳಿಕದ ಸ್ಥಾನಗಳನ್ನು ಪಡೆದರು. ಅಮೃತಾ ಆನಂದ್ (229) ಮತ್ತು ಸಿಫಾತ್ (258) ಕ್ರಮವಾಗಿ `ಬಿ' ಹಾಗೂ `ಸಿ' ವಿಭಾಗದಲ್ಲಿ ಚಾಂಪಿಯನ್ ಆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.