ಗ್ಯಾಜೆಟ್ ಲೋಕ: ಫೋಟೋನ್ ಮ್ಯೋಕ್ಸ್ ಜಾಹೀರಾತಿನಲ್ಲಿರುವ ವೇಗ ವಾಸ್ತವದಲ್ಲಿಲ್ಲ!

7

ಗ್ಯಾಜೆಟ್ ಲೋಕ: ಫೋಟೋನ್ ಮ್ಯೋಕ್ಸ್ ಜಾಹೀರಾತಿನಲ್ಲಿರುವ ವೇಗ ವಾಸ್ತವದಲ್ಲಿಲ್ಲ!

ಯು.ಬಿ. ಪವನಜ
Published:
Updated:
ಗ್ಯಾಜೆಟ್ ಲೋಕ: ಫೋಟೋನ್ ಮ್ಯೋಕ್ಸ್ ಜಾಹೀರಾತಿನಲ್ಲಿರುವ ವೇಗ ವಾಸ್ತವದಲ್ಲಿಲ್ಲ!

ಗಣಕವನ್ನು ಅಂತರಜಾಲಕ್ಕೆ ಸಂಪರ್ಕಿಸಲು ಅಂತರಜಾಲ ಸಂಪರ್ಕ ಸೇವೆ ನೀಡುವವರು ಹಲವು ಮಂದಿ ಇದ್ದಾರೆ. ಅವರುಗಳಲ್ಲಿ ಪ್ರಮುಖರು -ಬಿಎಸ್‌ಎನ್‌ಎಲ್, ರಿಲಯನ್ಸ್, ಟಾಟಾ, ಇತ್ಯಾದಿ. ಅಂತರಜಾಲ ಸಂಪರ್ಕದಲ್ಲಿ ಹಲವು ವಿಧ. ಮನೆಗೆ ಕೇಬಲ್ ಮೂಲಕ, ಸಾಮಾನ್ಯವಾಗಿ ದೂರವಾಣಿ ಕೇಬಲ್ ಮೂಲಕ, ಬ್ರ್ಯಾಡ್‌ಬ್ಯಾಂಡ್ ಸಂಪರ್ಕ ಒಂದು ಪ್ರಮುಖ ವಿಧ. ಇನ್ನೊಂದು ಪ್ರಮುಖ ವಿಧ ಎಂದರೆ ಯುಎಸ್‌ಬಿ ಡಾಟಾ ಕಾರ್ಡ್ ಬಳಸುವುದು. ಇದರಲ್ಲೂ ಹಲವು ನಮೂನೆಗಳಿವೆ. ಅವುಗಳೆಂದರೆ - ಸಾಮಾನ್ಯ 1ಗಿ  ವೇಗದ್ದು, ಇವಿಡಿಒ, 3ಜಿ, ಸಿಡಿಎಂಎ, ಇತ್ಯಾದಿ. ಈ ಸಲ ನಾವು ಟಾಟಾದವರ ಫೋಟೋನ್ ಮ್ಯೋಕ್ಸ್ ಅನ್ನು ಸ್ವಲ್ಪ ಗಮನಿಸೋಣ.ಟಾಟಾದವರು ಯುಎಸ್‌ಬಿ ಮೂಲಕ ಅಂತರಜಾಲ ಸಂಪರ್ಕ ಸೇವೆ ನೀಡುವುದರಲ್ಲೂ ಮೂರು ವಿಧಗಳಿವೆ. ಒಂದು ಸಾಮಾನ್ಯ 1ಗಿ (153.6 ಓಚಿ)  ವೇಗದ್ದು. ಅದಕ್ಕೆ ಫೋಟೋನ್ ವ್ಹ್ಿಎಂಬ ಹೆಸರಿದೆ. ಎರಡನೆಯದು ಫೋಟೋನ್ ಪ್ಲಸ್. ಇದು 3.1 ಚಿ ತನಕ ಡೌನ್‌ಲೋಡ್ ವೇಗವನ್ನು ಹೊಂದಿದೆ. ಎಲ್ಲಕ್ಕಿಂತ ಅಧಿಕ ವೇಗದ್ದು ಫೋಟೋನ್ ಮ್ಯೋಕ್ಸ್. ಇದರ ಡೌನ್‌ಲೋಡ್ ವೇಗ 6.2 ಚಿ ಮತ್ತು ಅಪ್‌ಲೋಡ್ ವೇಗ 3.6 ಚಿ ಆಗಿದೆ. ಅಥವಾ ಹಾಗೆಂದು ಅವರ ಕ್ಯಾಟಲಾಗ್ ಹೇಳುತ್ತದೆ. ಈಗ ಟಾಟಾ ಫೋಟೋನ್ ಮ್ಯೋಕ್ಸ್ ಬಗ್ಗೆ ಗಮನ ಹರಿಸೋಣ.ಈಗಾಗಲೇ ಹೇಳಿದಂತೆ ಇದು ಯುಎಸ್‌ಬಿ ಪೋರ್ಟ್ ಮೂಲಕ ಗಣಕ ಅಥವಾ ಲ್ಯಾಪ್‌ಟಾಪ್‌ಗೆ ಜೋಡಣೆಯಾಗುತ್ತದೆ. ವಿಂಡೋಸ್, ಮ್ಯೋಕ್ ಮತ್ತು ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆಗಳಿಗೆ ಸೂಕ್ತ ತಂತ್ರಾಂಶ ನೀಡಿದ್ದಾರೆ.

 

ಮೈಕ್ರೋಎಸ್‌ಡಿ ಕಾರ್ಡ್ ಜೋಡಿಸಿ ಯುಎಸ್‌ಬಿ ಡ್ರೈವ್ ಆಗಿ ಕೂಡ ಬಳಸಿಕೊಳ್ಳಬಹುದು. ಅದಕ್ಕೆಂದೇ ಪ್ರತ್ಯೇಕ ಜಾಗ ನೀಡಿದ್ದಾರೆ. ಒಂದು ಎಲ್‌ಇಡಿ ಇದೆ. ಅದು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಬಣ್ಣದ ಬೆಳಕನ್ನು ಹೊಮ್ಮಿಸುತ್ತದೆ.

 

ಬಣ್ಣ ಮತ್ತು ಅದು ಯಾವ ರೀತಿ ಉರಿಯುತ್ತಿದೆ (ನಿರಂತರ, ಹೊತ್ತಿ ನಂದಿ, ಇತ್ಯಾದಿ) ಎಂಬುದರಿಂದ ಮೋಡೆಮ್ ಯಾವ ಸ್ಥಿತಿಯಲ್ಲಿದೆ ಎಂದು ತಿಳಿದುಕೊಳ್ಳಬಹುದು. ಮೋಡೆಮ್ ಚಿಕ್ಕ ಗಾತ್ರದ್ದಾಗಿದೆ. ಮುಚ್ಚಳ ಕಳೆದು ಹೋಗದಂತೆ ಒಂದು ಚಿಕ್ಕ ದಾರದಿಂದ ಪೋಣಿಸಿದ್ದಾರೆ. 3ಜಿ ಮೋಡೆಮ್‌ನಂತೆ ಇದರಲ್ಲಿ ಸಿಮ್ ಕಾರ್ಡ್ ಹಾಕಲು ಹಾಗೂ ಬದಲಾಯಿಸಲು ಸಾಧ್ಯವಿಲ್ಲ. ಯಾಕೆಂದರೆ ಇದು ಸಿಮ್ ಇಲ್ಲದ ಸಿಡಿಎಂಎ ತಂತ್ರಜ್ಞಾನ ಬಳಸುತ್ತದೆ.ಬೆಂಗಳೂರಿನ ಹೊರವಲಯದಲ್ಲಿರುವ ಶ್ರೀಗಂಧದ ಕಾವಲಿನಲ್ಲಿ ನಾನು ಇದನ್ನು ಪರೀಕ್ಷಿಸಿದೆ. ವೇಗ ಅಷ್ಟೇನೂ ಚೆನ್ನಾಗಿ ಬರಲಿಲ್ಲ. ಅವರ ಕ್ಯಾಟಲಾಗಿನಂತೆ ಇದು 6.2 ಚಿ ಡೌನ್‌ಲೋಡ್ ಮತ್ತು 3.6 ಚಿ ಅಪ್‌ಲೋಡ್ ವೇಗ ನೀಡಬೇಕು.

 

ಆದರೆ ನನಗೆ ದೊರೆತ ಹೆಚ್ಚಿನ ವೇಗ ಅಂದರೆ 1.52 ಚಿ ಡೌನ್‌ಲೋಡ್ ಮತ್ತು 0.512 ಚಿ ಅಪ್‌ಲೋಡ್. ನಾನು ನಗರದ ಕೇಂದ್ರ ಭಾಗದಿಂದ ದೂರವಿರುವುದು ಈ ಕಡಿಮೆ ವೇಗಕ್ಕೆ ಕಾರಣವೇನೋ ಗೊತ್ತಿಲ್ಲ.ಆದರೆ ನಾನು ಇರುವ ಜಾಗ ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲೆೀ ಬರುತ್ತದೆ. ಹೋಲಿಕೆಗಾಗಿ ನಾನು ನನ್ನಲ್ಲಿರುವ ಬಿಎಸ್‌ಎನ್‌ಎಲ್ 3ಜಿ ಮೋಡೆಮ್‌ನ ವೇಗವನ್ನು ಪರೀಕ್ಷಿಸಿದೆ. ಅದು ಮನೆಯೊಳಗೆ ಅತಿ ಕಡಿಮೆ ವೇಗವನ್ನು ನೀಡಿತು ಆದರೆ ಮೋಡೆಮ್ ಅನ್ನು ಕಿಟಿಕಿಗೆ ನೇತು ಹಾಕಿದಾಗ 5 ಚಿ  ತನಕ ಡೌನ್‌ಲೋಡ್ ವೇಗ ನೀಡಿತು. ಟಾಟಾ ಫೋಟೋನ್ ಮ್ಯೋಕ್ಸ್ ಅನ್ನು ಕಿಟಿಕಿಗೆ ನೇತು ಹಾಕಿದರೂ ಮನೆಯ ಯಾವ ಜಾಗಕ್ಕೆ ತೆಗೆದುಕೊಂಡು ಹೋದರೂ ಒಂದೇ ವೇಗ. ಆದರೆ ಬಿಎಸ್‌ಎನ್‌ಎಲ್‌ನ 3ಜಿ ಮೋಡೆಮ್ ಮನೆಯೊಳಗೆ ಅತಿ ಕಡಿಮೆ 0.4 ಚಿ  ಡೌನ್‌ಲೋಡ್ ವೇಗವನ್ನು ನೀಡಿತ್ತು. ಆದರೆ ಕಿಟಿಕಿಗೆ ನೇತು ಹಾಕಿದಾಗ ಒಳ್ಳೆಯ ವೇಗ ನೀಡುತ್ತದೆ.ಗ್ರಾಹಕರು ಟಾಟಾ ಫೋಟಾನ್ ಮ್ಯೋಕ್ಸ್‌ನಲ್ಲಿ 6.2 ಎಂಬಿಪಿಎಸ್ ವೇಗದಲ್ಲಿ ಡೌನ್‌ಲೋಡ್ ಮಾಡಬಹುದು. 1999ರೂ.ಗೆ ಗ್ರಾಹಕರು ಈ ಸೇವೆ ಪಡೆಯಬಹುದು. ಜೊತೆಗೆ ಅನ್‌ಲಿಮಿಟೆಡ್ ಯೋಜನೆ ಘೋಷಿಸಿದೆ.

 

ಫ್ಲಾಟ್ ಬಿಲ್ 1000ರೂ.ಗೆ ಪ್ರತಿ ತಿಂಗಳು 6ಜಿಬಿ ಡಾಟಾವನ್ನು 6.2 ಚಿ ವೇಗದಲ್ಲಿ ಮೊದಲ 3 ತಿಂಗಳ ಕಾಲ ಪಡೆಯಬಹುದು. 4ನೇ ತಿಂಗಳಿನಿಂದ 3ಜಿಬಿ. ಈ ವೇಗದ ನಂತರ ಡೌನ್‌ಲೋಡ್ ಸಾಮರ್ಥ್ಯ 153.6 ಕೆಬಿಪಿಎಸ್ ಇರುತ್ತದೆ. ಹೋಲಿಕೆಗೆ ಬಿಎಸ್‌ಎನ್‌ಎಲ್‌ನವರ 3ಜಿ ಸೇವೆಯಲ್ಲಿ 3000ರೂ.ಗೆ 30ಜಿಬಿ ಡಾಟಾ ಪಡೆಯಬಹುದು. ಅದೂ 7.2 ಎಂಬಿಪಿಎಸ್ ವೇಗದಲ್ಲಿ. ಬಿಎಸ್‌ಎನ್‌ಎಲ್‌ನವರ 3ಜಿಯ ಇನ್ನೊಂದು ಸೌಲಭ್ಯವೇನೆಂದರೆ ನಮಗೆ ಇಷ್ಟವಾದ ಮೋಡೆಮ್ ನಾವು ಕೊಂಡುಕೊಂಡು ಬಳಸಬಹುದು. ಅವರು ನೀಡುವ ಮೋಡೆಮ್ ಅನ್ನೇ ಬಳಸಬೇಕೆಂಬ ನಿಯಮವಿಲ್ಲ.ನಾನಂತೂ ಬಿಎಸ್‌ಎನ್‌ಎಲ್‌ನವರ 3ಜಿ ಸೇವೆಗೆ ಹುವಾವಿಯವರ ಮೋಡೆಮ್ ಬಳಸುತ್ತೇನೆ. ಅದರಲ್ಲಿ ಸಿಮ್ ಕಾರ್ಡ್ ಸೌಲಭ್ಯವಿದೆ. 3ಜಿ ಸೇವೆ ಇರುವ ಯಾವ ಸಿಮ್ ಬೇಕಿದ್ದರೂ ಈ ಮೋಡೆಮ್‌ನಲ್ಲಿ ಬಳಸಬಹುದು. ಕೆಲವೊಮ್ಮೆ ಮೋಡೆಮ್ ಪರಿಶೀಲಿಸಲು ನಾನು ನನ್ನ ಮೊಬೈಲ್ ಫೋನಿನ ಸಿಮ್ ಕಾರ್ಡ್ ಅನ್ನು 3ಜಿ ಮೋಡೆಮ್‌ನಲ್ಲಿ ಹಾಕಿ ಪರೀಕ್ಷಿಸುತ್ತೇನೆ. ಟಾಟಾ ಫೋಟೋನ್ ಆಗಲೀ ರಿಲಯನ್ಸ್ ನೆಟ್ ಕನೆಕ್ಟ್ ಆಗಲೀ ಈ ಸೌಲಭ್ಯ ನೀಡಿಲ್ಲ.ಟಾಟಾ ಫೋಟೋನ್‌ನವರು ಘೊಷಿಸಿದ ಒಟ್ಟು ಮಾಹಿತಿ ಪ್ರವಾಹ (ಟ್ರಾಫಿಕ್) ಮಿತಿಯನ್ನು ತಲುಪಿದ ನಂತರ ಅದು 1ಗಿ ವೇಗಕ್ಕೆ ಇಳಿಯುತ್ತದೆ. ನನಗೆ ಪರಿಶೀಲನೆಗೆ ಬಂದ ಡಾಟಾ ಕಾರ್ಡ್ ಎರಡೇ ದಿನಗಳಲ್ಲಿ 1ಗಿ ವೇಗಕ್ಕೆ ಇಳಿಯಿತು. ಈ ವೇಗದಲ್ಲಿ ಅದು ಏತಕ್ಕೂ ಉಪಯೋಗವಿಲ್ಲದಂತಾಯಿತು. ಸರಿಯಾಗಿ ಇಮೈಲ್ ಕೂಡ ಡೌನ್‌ಲೋಡ್ ಆಗುತ್ತಿರಲಿಲ್ಲ. ಡಾಟಾ ಕಾರ್ಡ್ ಕೊಳ್ಳುವಾಗ ಈ ಒಂದು ವಿಷಯವನ್ನೂ ಗಮನದಲ್ಲಿರಿಸಿಕೊಳ್ಳಬೇಕು. ಹೆಚ್ಚಿನವರು ಈಗೀಗ ಈ ಒಂದು ಹೊಸ ಮಿತಿಯನ್ನು ಸೇರಿಸಿರುತ್ತಾರೆ. 5 ಅಥವಾ 6ಜಿಬಿ ಟ್ರಾಫಿಕ್ ಆದ ನಂತರ ಅದು 1ಗಿ ವೇಗಕ್ಕೆ ಇಳಿಯುತ್ತದೆ. ಈ ವೇಗ ಬಹುಮಟ್ಟಿಗೆ ನಿರುಪಯುಕ್ತ.ಒಟ್ಟಿನಲ್ಲಿ ಹೇಳುವುದಾದರೆ ಟಾಟಾ ಫೋಟೋನ್ ಮ್ಯೋಕ್ಸ್ ಅವರು ಘೋಷಿಸಿದ ವೇಗವನ್ನು ನೀಡುವುದಿಲ್ಲ. ಚಂದಾ ತುಂಬ ದುಬಾರಿ. ಸದ್ಯದ ಬೆಲೆಯಲ್ಲಿ ಟಾಟಾ, ರಿಲಯನ್ಸ್ ಮತ್ತು ಬಿಎಸ್‌ಎನ್‌ಎಲ್ ಇವರುಗಳ ಬೆಲೆಪಟ್ಟಿ ಪರಿಶೀಲಿಸಿದರೆ ಬಿಎಸ್‌ಎನ್‌ಎಲ್ ಎಲ್ಲಕ್ಕಿಂತ ಉತ್ತಮ ಅನ್ನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry