ಶನಿವಾರ, ಡಿಸೆಂಬರ್ 14, 2019
22 °C

ಗ್ಯಾಜೆಟ್ ಲೋಕ: ಯೇಟಿವ್ ಇಪಿ 630ಕಿವಿಯೊಳಗೆ ಅವಿತು ...

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಗ್ಯಾಜೆಟ್ ಲೋಕ: ಯೇಟಿವ್ ಇಪಿ 630ಕಿವಿಯೊಳಗೆ ಅವಿತು ...

ಯಾವುದೇ ಸಂಗೀತ ಉಪಕರಣದಿಂದ ಸಂಗೀತ ಆಲಿಸಲು ಇರುವ ಸಾಧನಗಳ ಸಾಲಿನಲ್ಲಿ ಕೊನೆಯ ಹಂತ ಸ್ಪೀಕರ್. ಇದನ್ನು ಎಲ್ಲರೂ ನೋಡಿಯೇ ಇರುತ್ತೀರಾ. ಸ್ಪೀಕರ್ ಮೂಲಕ ಹೊಮ್ಮುವ ಧ್ವನಿಯನ್ನು ಕೋಣೆಯಲ್ಲಿರುವ ಅಥವಾ ಹಾಲ್‌ನಲ್ಲಿರುವ ಎಲ್ಲರೂ ಆಲಿಸಿ ಆನಂದ ಪಡಬಹುದು.ಒಬ್ಬರಿಗೆ ಮಾತ್ರ ಸಂಗೀತ ಕೇಳಬೇಕಾದಾಗ? ಅಥವಾ ಮನೆಯಿಂದ ಹೊರಗೆ ಪ್ರಯಾಣ ಮಾಡುತ್ತಿರುವಾಗ ಬಸ್ಸಿನಲ್ಲಿ ರೈಲಿನಲ್ಲಿ ಕಾರಿನಲ್ಲಿ ಸಂಗೀತ ಆಲಿಸಿ ಆನಂದಿಸಬೇಕಾದಾಗ? ಅಂತಹ ಸಂದರ್ಭಗಳಿಗೆಂದೇ ಇಯರ್‌ಫೋನ್ ಹಾಗೂ ಹೆಡ್‌ಫೋನ್‌ಗಳ ಆವಿಷ್ಕಾರ ಆಗಿದೆ. ಇವುಗಳೇನು ಇತ್ತೀಚೆಗೆ ಮಾರುಕಟ್ಟೆಗೆ ಬಂದವುಗಳಲ್ಲ. ಹಲವು ದಶಕಗಳಿಂದಲೇ ಅವುಗಳು ಬಳಕೆಯಲ್ಲಿವೆ.ಕಿವಿಗೆ ನೇರವಾಗಿ ಸಂಗೀತವನ್ನು ಉಣಿಸುವ ಈ ಕಿರು ಸ್ಪೀಕರ್‌ಗಳಲ್ಲಿ ಮುಖ್ಯವಾಗಿ ಮೂರು ಬಗೆ. ಕಿವಿಯ ಹೊರಗೆ ಕುಳಿತುಕೊಳ್ಳುವ ದೊಡ್ಡ ಗಾತ್ರದ ಹೆಡ್‌ಫೋನ್, ಕಿವಿಯ ಒಳಗೆ ಕುಳಿತುಕೊಳ್ಳುವ ಇಯರ್ ಫೋನ್‌ಗಳು ಮತ್ತು ಕಿವಿಯ ಕಾಲುವೆಯೊಳಗೆ ಹೋಗಿ ಅವಿತುಕೊಳ್ಳುವ ಇಯರ್‌ಬಡ್ ಅನ್ನಿಸಿಕೊಳ್ಳುವ ಇಯರ್‌ಫೋನ್‌ಗಳು.

 

ಪ್ರತಿಯೊಂದಕ್ಕೂ ತನ್ನದೇ ಆದ ಉಪಯೋಗಗಳಿವೆ. ಹೆಡ್‌ಫೋನ್‌ಗಳನ್ನು ಸಾಮಾನ್ಯವಾಗಿ ಸ್ಟುಡಿಯೋ ಅಥವಾ ಮನೆಗಳಲ್ಲಿ ಬಳಸುತ್ತಾರೆ. ಅವುಗಳನ್ನು ಬಸ್ಸು ರೈಲುಗಳಲ್ಲಿ ಪ್ರಯಾಣಿಸುವಾಗ ಅಥವಾ ರಸ್ತೆ ಬದಿಯಲ್ಲಿ ಗಾಳಿ ಸೇವನೆಗೆ ಹೋಗುವಾಗ ಕಿವಿಯ ಮೇಲೆ ಇಟ್ಟುಕೊಂಡು ಹೋಗುವಂತಿಲ್ಲ.

 

ಇಯರ್‌ಫೋನ್‌ಗಳನ್ನು ಸಾಮಾನ್ಯವಾಗಿ ಎಲ್ಲರೂ ಬಸ್ಸು ರೈಲುಗಳಲ್ಲಿ ಪ್ರಯಾಣಿಸುವಾಗ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಬಳಸುತ್ತಾರೆ. ಇಯರ್‌ಬಡ್‌ಗಳನ್ನೂ ಇದೇ ರೀತಿಯಲ್ಲಿ ಬಳಸುತ್ತಾರೆ.

 

ಇಯರ್‌ಬಡ್‌ಗಳು ಕಿವಿಯ ಕಾಲುವೆಯೊಳಗೆ ಹೋಗಿ ಕುಳಿತುಕೊಳ್ಳುವುದರಿಂದ ಅವುಗಳ ಉಪಯುಕ್ತತೆಗೆ ಒಂದು ಗರಿ ಹೆಚ್ಚಿಗೆ ಇದೆ. ಅದುವೇ ಗದ್ದಲ ನಿವಾರಣೆ (ಪ್ರತ್ಯೇಕತೆ)  (್ಞಟಜಿಛಿ ಛ್ಝಿಜಿಞಜ್ಞಿಠಿಜಿಟ್ಞ). ಇವುಗಳು ಕಿವಿಯ ಕಾಲುವೆಗೆ ಸರಿಯಾಗಿ ಹೊಂದಿಕೊಳ್ಳುತ್ತವೆ. ಆದುದರಿಂದ ಹೊರಗಡೆ ನಡೆಯುತ್ತಿರುವ ಗದ್ದಲವನ್ನು ಕಿವಿಯೊಳಗೆ ಹೋಗದಂತೆ ಅದು ತಡೆಗಟ್ಟುತ್ತದೆ. ಇಯರ್‌ಬಡ್ ಹಾಕಿಕೊಂಡವನಿಗೆ ಸಂಗೀತ ಮಾತ್ರ ಕೇಳುತ್ತದೆ, ಹೊರಗಡೆಯ ಗದ್ದಲ ಕೇಳುವುದಿಲ್ಲ. ಈ ಸಲ ಇಂತಹ ಒಂದು ಇಯರ್‌ಬಡ್ ಇಯರ್‌ಫೋನನ್ನು ಗಮನಿಸೋಣ. ಅದುವೇ ಕ್ರಿಯೇಟಿವ್ ಕಂಪೆನಿಯ ಇಪಿ 630 (ಇ್ಟಛಿಠಿಜಿಛಿ ಉ630 ಛಿಚ್ಟಚ್ಠಿ). ಇದನ್ನು  ಕೊಟ್ಟ ಹಣಕ್ಕೆ ಮೋಸವಿಲ್ಲ  ಎಂಬ ಹಣೆಪಟ್ಟಿ ನೀಡಬಹುದಾದ ಗ್ಯಾಜೆಟ್‌ಗಳ ಪಟ್ಟಿಗೆ ಸೇರಿಸಬಹುದು. ಕಂಪೆನಿಯವರು ಇದರ ಬೆಲೆಯನ್ನು ಸುಮಾರು 1200ರೂ. ಎಂದು ನಿಗದಿಪಡಿಸಿದ್ದರೂ ಇದು ಮಾರುಕಟ್ಟೆಯಲ್ಲಿ ಸುಮಾರು 750 ರೂ.ಗಳಿಗೆ ಕೂಡ ದೊರೆಯುತ್ತಿತ್ತು.

 

ನಾನು ಕೊಟ್ಟಿದ್ದು 750ರೂ. ನಾನು ಕೊಂಡುಕೊಂಡು ಸುಮಾರು ಎರಡು ವರ್ಷಗಳಿಗೆ ಹತ್ತಿರ ಹತ್ತಿರವಾಯಿತು. ಇದು ತನಕ ಯಾವುದೇ ತೊಂದರೆ ಇಲ್ಲದೆ ಕೆಲಸ ಮಾಡುತ್ತಿದೆ.

ಇಪಿ 630 ಇಯರ್‌ಬಡ್‌ನಲ್ಲಿ ಇಯರ್‌ಫೋನ್‌ನಲ್ಲಿರಬೇಕಾದ ಎಲ್ಲ ಗುಣವೈಶಿಷ್ಟ್ಯಗಳಿವೆ.ಇದು ಕಿವಿಯ ಕಾಲುವೆಯೊಳಗೆ ಕುಳಿತುಕೊಳ್ಳುತ್ತದೆ. ಲೇಖನ ಬರೆಯುತ್ತಿರುವಾಗ ಇದರಲ್ಲಿ ಸಂಗೀತ ಆಲಿಸುತ್ತಿದ್ದರೆ ಇತರರು ಕರೆದರೆ, ಕಿರುಚಿದರೆ ನಿಮಗೆ ತೊಂದರೆ ಆಗುವುದಿಲ್ಲ! ಹೊರಗಿನ ಗದ್ದಲವನ್ನು ಸುಮಾರು ಶೇಕಡಾ 80ರಷ್ಟನ್ನು ಇದು ಕಡಿತಗೊಳಿಸುತ್ತದೆ. ಪ್ರಯಾಣ ಮಾಡುವಾಗ, ಸಂತೆಯಲ್ಲಿ ನಡೆದಾಡುವಾಗ ಎಲ್ಲ ಬಳಸಲು ಉಪಯುಕ್ತ. ಚಿಕ್ಕ ಗಾತ್ರದ್ದಾದರೂ ಉತ್ತಮ ಬಾಸ್ ಧ್ವನಿಯನ್ನು ಹೊರಡಿಸುತ್ತದೆ.ಇಪಿ630ರ ಕ್ಯಾಟಲೋಗ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ (ನೋಡಿ -ಠಿಠಿ://ಚಿಜಿಠಿ.್ಝ/ಛಿ630) ಇದು 6 ಹರ್ಟ್ಝ್ ನಿಂದ ಹಿಡಿದು 23 ಸಾವಿರ ಹರ್ಟ್ಝ್ ತನಕ ಎಲ್ಲ ಕಂಪನಾಂಕಗಳ ಧ್ವನಿಗಳನ್ನು ಉತ್ತಮವಾಗಿ ಪುನರುತ್ಪತ್ತಿ ಮಾಡಬಲ್ಲದು.ಮನುಷ್ಯರು ಸುಮಾರು 20 ಹರ್ಟ್ಝ್ ನಿಂದ ಹಿಡಿದು 20 ಸಾವಿರ ಹರ್ಟ್ಝ್ ತನಕ ಕಂಪನಾಂಕದ ಧ್ವನಿಗಳನ್ನು ಕೇಳಿಸಿಕೊಳ್ಳಬಲ್ಲರು. ನನ್ನಲ್ಲಿರುವ ಇಪಿ 630ಯನ್ನು ಬಳಸಿ ನೋಡಿರುವ ಪ್ರಕಾರ ಇದು ಬಾಸ್ ಮತ್ತು ಟ್ರೆಬ್ಲ್‌ಗಳೆರಡನ್ನೂ ಉತ್ತಮವಾಗಿ ಪುನರುತ್ಪತ್ತಿ ಮಾಡಬಲ್ಲದು. ಹಾಗೆಂದು ಹೇಳಿ ಇದುವೇ ಅತ್ಯುತ್ತಮ ಎಂದುಕೊಳ್ಳಬೇಕಾಗಿಲ್ಲ.

 

ಕೊಡುವ ಹಣಕ್ಕೂ ನಮಗೆ ದೊರೆಯುವ ಗುಣಮಟ್ಟಕ್ಕೂ ಹೋಲಿಕೆ ಮಾಡಿದಾಗ ಇದರ ಗುಣಮಟ್ಟ ಉತ್ತಮವಾಗಿಯೇ ಇದೆ. ಇದಕ್ಕಿಂತ ಉತ್ತಮ ಗುಣಮಟ್ಟದ ಇಯರ್‌ಫೋನ್ ಬೇಕಿದ್ದಲ್ಲಿ ಇದಕ್ಕಿಂತ ಕನಿಷ್ಠ ಐದು ಪಟ್ಟು ಹೆಚ್ಚು ಬೆಲೆಬಾಳುವ ಬೋಸ್ ಹೆಡ್‌ಫೋನ್ ಖರೀದಿಸಬೇಕು. ದೊಡ್ಡ ಅಥವಾ ಕಿವಿ ಕಾಲುವೆ ಉಳ್ಳವರಿಗಾಗಿ ಇದರ ಜೊತೆ ಮೂರು ಪ್ಯಾಡ್ ನೀಡಿದ್ದಾರೆ. ನಿಮ್ಮ ಕಿವಿಕಾಲುವೆಯ ಗಾತ್ರಕ್ಕೆ ಅನುಸರಿಸಿ ನಿಮಗೆ ಬೇಕಾದ ಪ್ಯಾಡ್ ಬಳಸಬಹುದು. ಪ್ಯಾಡ್ ತಯಾರಿಸಲು ಬಳಸಿದ ವಸ್ತುವಿನ ಗುಣಮಟ್ಟವೂ ಚೆನ್ನಾಗಿದೆ. ಕೇಬಲ್ ಉದ್ದ ಸುಮಾರು 4 ಅಡಿ ಇದೆ.ಈ ಇಯರ್‌ಫೋನ್ 3.5 ಮಿಮೀ ಜ್ಯಾಕ್ ಹೊಂದಿದೆ. ಇದರಿಂದಾಗಿ ಬಹುತೇಕ ಸಂಗೀತ ಉಪಕರಣಗಳ ಹೆಡ್‌ಫೋನ್ ಜ್ಯಾಕ್ ಪೋರ್ಟ್‌ಗಳಿಗೆ ಇದನ್ನು ಜೋಡಿಸಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುತೇಕ ಮೊಬೈಲ್ ಫೋನ್‌ಗಳಲ್ಲೂ ಇದೇ ಸೌಕರ್ಯ ಇರುವುದರಿಂದ ಅವುಗಳಿಗೆ ಇದನ್ನು ಜೋಡಿಸಿ ಸಂಗೀತ ಆಲಿಸಬಹುದು.

ಆದರೂ ಕೆಲವು ದೋಷಗಳು ಇದರಲ್ಲಿವೆ. ದೋಷಗಳು ಅನ್ನುವುದಕ್ಕಿಂತಲೂ ಈ ವಿಷಯಗಳನ್ನು ಸ್ವಲ್ಪ ಸುಧಾರಿಸಬಹುದಿತ್ತು ಎನ್ನಬಹುದು. ಅವುಗಳೆಂದರೆ   ಇಯರ್‌ಫೋನ್ ಜೊತೆ ಉತ್ತಮ ಚೀಲ ನೀಡಬಹುದಿತ್ತು, ಜ್ಯಾಕ್‌ನಿಂದ ಕಿವಿಗೆ ಹೋಗುವ ಕೇಬಲ್ ಕೊನೆಯಲ್ಲಿ ಎರಡಾಗುತ್ತದೆ. ನಂತರ ಎಡದ ಮತ್ತು ಬಲದ ಕಿವಿಗೆ ಹೋಗುವ ಕೇಬಲ್‌ಗಳಲ್ಲಿ ಒಂದನ್ನು ಉದ್ದ (ಬಲದ ಕಿವಿಯದನ್ನು) ಮತ್ತು ಇನ್ನೊಂದನ್ನು ಗಿಡ್ಡ ಮಾಡಬಹುದಿತ್ತು. ಹಾಗೆ ಮಾಡುವುದಿರಿಂದ ಕೇಬಲನ್ನು ಕುತ್ತಿಗೆಯ ಹಿಂದಿನಿಂದ ತರಬಹುದು.

 

ಬಾಸ್ ಮತ್ತು ಟ್ರೆಬ್ಲ್

Bass and treble.  ಇದು ಯಾವುದೇ ಸಂಗೀತದ ಸ್ಥಾಯಿಯನ್ನು ತಿಳಿಸುವ ಮೌಲ್ಯ. ಅತಿ ಕೆಳಗಿನದನ್ನು ಬಾಸ್ ಎನ್ನುತ್ತಾರೆ. ಉದಾಹರಣೆಗೆ ಡೋಲು, ಮದಂಗ, ಇತ್ಯಾದಿ. ಅತಿ ಹೆಚ್ಚಿನದನ್ನು ಟ್ರೆಬ್ಲ್ ಎನ್ನುತ್ತಾರೆ. ಉದಾಹರಣೆಗೆ ತಂತಿವಾದ್ಯಗಳು, ಸಂತೂರ್, ಗೆಜ್ಜೆ, ಇತ್ಯಾದಿ. ಅಧಿಕ ಕಂಪನಾಂಕದ (ಹರ್ಟ್ಝ್) ಧ್ವನಿ ಟ್ರೆಬ್ಲ್ ಎನಿಸಿಕೊಳ್ಳುತ್ತದೆ ಹಾಗೂ ಕಡಿಮೆ ಕಂಪನಾಂಕದ ಧ್ವನಿ ಬಾಸ್ ಎನಿಸಿಕೊಳ್ಳುತ್ತದೆ. ಯಾವುದೇ ಸ್ಪೀಕರ್ ಉತ್ತಮ ಅನ್ನಿಸಿಕೊಳ್ಳಬೇಕಾದರೆ ಬಾಸ್ ಮತ್ತು ಟ್ರೆಬ್ಲ್ ಧ್ವನಿಗಳನ್ನ ಉತ್ತಮವಾಗಿ ಪುನರು ಉತ್ಪಾದನೆ ಮಾಡತಕ್ಕದ್ದು . ಸಾಮಾನ್ಯವಾಗಿ ಚಿಕ್ಕ ಗಾತ್ರದ ಸ್ಪೀಕರ್ ಗಳು ಉತ್ತಮ ಬಾಸ್ ಗಳನ್ನು ಹೊಂದಿರುವುದಿಲ್ಲ.

ಪ್ರತಿಕ್ರಿಯಿಸಿ (+)