ಗ್ಯಾರಿ ಕರ್ಸ್ಟನ್‌ಗೆ ವರ್ಷದ ಕೋಚ್ ಪ್ರಶಸ್ತಿ

7

ಗ್ಯಾರಿ ಕರ್ಸ್ಟನ್‌ಗೆ ವರ್ಷದ ಕೋಚ್ ಪ್ರಶಸ್ತಿ

Published:
Updated:

ಬೆಂಗಳೂರು: ಭಾರತ ಕ್ರಿಕೆಟ್ ತಂಡವು ವರ್ಷದುದ್ದಕ್ಕೂ ಉತ್ತಮ ಪ್ರದರ್ಶನದ ಹಾದಿಯಲ್ಲಿ ಸಾಗುವಂತೆ ಬಲ ತುಂಬಿದ ಗ್ಯಾರಿ ಕರ್ಸ್ಟನ್ ಅವರಿಗೆ 2010ನೇ ಸಾಲಿನ ವರ್ಷದ ಕೋಚ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ಇಂಡಿಯಾದ ಎರಡನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಗುರುವಾರ ರಾತ್ರಿ ಉದ್ಯಾನನಗರಿಯಲ್ಲಿ ನಡೆಯಿತು. ಇದರಲ್ಲಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ತಂಡಗಳಿಗೆ ಹೆಚ್ಚಿನ ಪ್ರಶಸ್ತಿಗಳು ಸಂದಿದ್ದು ವಿಶೇಷ. ಸಚಿನ್ ತೆಂಡೂಲ್ಕರ್ ಅವರು ‘ವರ್ಷದ ಕ್ರಿಕೆಟ್ ತಾರೆ’ಯಾಗಿ ಮಿನುಗಿದರು.

ಮಹೇಂದ್ರ ಸಿಂಗ್ ದೋನಿ ನಾಯಕತ್ವದ ಟೆಸ್ಟ್ ಕ್ರಿಕೆಟ್ ತಂಡವು ‘ವರ್ಷದ ಶ್ರೇಷ್ಠ ತಂಡ’ ಎನ್ನುವ ಶ್ರೇಯಕ್ಕೆ ಪಾತ್ರವಾಯಿತು. ಈ ಬಾರಿಯ ದೇಸಿ ಕ್ರಿಕೆಟ್‌ನ ಉತ್ತಮ ಪ್ರದರ್ಶನಕ್ಕಾಗಿ ರಾಜಸ್ತಾನ ರಣಜಿ ತಂಡವು ಪ್ರಶಸ್ತಿ ಪಡೆದುಕೊಂಡಿತು. ಕುಸ್ತಿ ಪಟು ಸುಶೀಲ್ ಕುಮಾರ್‌ಗೆ ಸಂಪಾದಕರ ಆಯ್ಕೆ ವಿಶೇಷ ಪ್ರಶಸ್ತಿ ಸಂದಿದೆ.

ವರ್ಷದ ಪ್ರಶಸ್ತಿ ವಿಜೇತರು ಇಂತಿದ್ದಾರೆ: ಕ್ರೀಡಾ ಬಾಲಕ: ಅರ್ಮಾನ್ ಜಾಫರ್ (ಕ್ರಿಕೆಟ್), ದೇಸಿ ಕ್ರಿಕೆಟ್ ಪ್ರದರ್ಶನ: ರಾಜಸ್ತಾನ ರಣಜಿ ತಂಡ, ಅಚ್ಚರಿಯ ಪ್ರತಿಭೆ: ಆಶಿಶ್ ಕುಮಾರ್ (ಜಿಮ್ನಾಸ್ಟಿಕ್ಸ್), ವರ್ಷದ ಕೋಚ್: ಗ್ಯಾರಿ ಕರ್ಸ್ಟನ್ (ಕ್ರಿಕೆಟ್), ಕ್ರೀಡಾ ಆಡಳಿತಗಾರ: ಪಿ.ಕೆ.ಎಂ.ರಾಜಾ (ಬಾಕ್ಸಿಂಗ್), ಕ್ರೀಡಾ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ:

ರಿಲಯನ್ಸ್, ಕ್ರೀಡಾ ಕ್ಷಣ: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಗೆದ್ದ 4ಷ400 ಮೀ. ರಿಲೆ ಮಹಿಳೆಯರ ತಂಡ, ಯುವ ಆಟಗಾರ: ವಿಕಾಸ್ ಕೃಷ್ಣ (ಬಾಕ್ಸಿಂಗ್), ಜೀವಮಾನದ ಸಾಧನೆ: ರಮಾಕಾಂತ್ ಅಚ್ರೇಕರ್ (ಕ್ರಿಕೆಟ್), ಪಂದ್ಯ ಸ್ವರೂಪ ಬದಲಾವಣೆ: ವಿ.ವಿ.ಎಸ್.ಲಕ್ಷ್ಮಣ್ (ಕ್ರಿಕೆಟ್), ವರ್ಷದ ಕ್ರೀಡಾಪಟು: ಸೋಮದೇವ್ ದೇವ್‌ವರ್ಮನ್ (ಟೆನಿಸ್), ವರ್ಷದ ಶ್ರೇಷ್ಠ ತಂಡ: ಭಾರತದ ಟೆಸ್ಟ್ ಕ್ರಿಕೆಟ್ ತಂಡ, ಸಂಪಾದಕರ ಆಯ್ಕೆ ಪ್ರಶಸ್ತಿ: ಸುಶೀಲ್ ಕುಮಾರ್ (ಕುಸ್ತಿ), ವರ್ಷದ ಕ್ರೀಡಾ ತಾರೆ: ಸಚಿನ್ ತೆಂಡೂಲ್ಕರ್ (ಕ್ರಿಕೆಟ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry