ಗ್ಯಾಸ್‌ ದರ ಹೆಚ್ಚಳ: ಬಿಜೆಪಿ ಪ್ರತಿಭಟನೆ

7

ಗ್ಯಾಸ್‌ ದರ ಹೆಚ್ಚಳ: ಬಿಜೆಪಿ ಪ್ರತಿಭಟನೆ

Published:
Updated:

ಪಾವಗಡ: ಗ್ಯಾಸ್ ಸಿಲಿಂಡರ್ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಗ್ಯಾಸ್ ದರ ಹೆಚ್ಚಳವಾಗಿ­ರುವು­ದ­ರಿಂದ ಬಡವರು ಜೀವನ ಸಾಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರ ಜನ ವಿರೋಧಿ ಧೋರಣೆ ಅನುಸರಿಸುತ್ತಿದೆ. ಪೆಟ್ರೋಲ್, ಗ್ಯಾಸ್, ದಿನಬಳಕೆ ವಸ್ತು­ಗಳ ದರ ದಿನದಿಂದ ದಿನಕ್ಕೆ ಏರುತ್ತಿದೆ. ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಹಣವೂ ಸಕಾಲದಲ್ಲಿ ಜಮೆಯಾಗುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸದರು.ಕೇಂದ್ರ ಸರ್ಕಾರ ಕೂಡಲೇ ಇಂಧನ, ಗ್ಯಾಸ್ ಸಿಲಿಂಡರ್, ದಿನ ಬಳಕೆ ವಸ್ತುಗಳ ದರವನ್ನು ಕಡಿತ­ಗೊಳಿಸ­ಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಎಸ್.ಎಸ್.ಕೆ. ಸಮುದಾಯ ಭವನ­ದಿಂದ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಶಿರಸ್ತೇದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಟಿ.ಗಿರೀಶ್, ಜಿಲ್ಲಾ ಎಸ್.ಸಿ.ಮೋರ್ಚಾದ ಅಧ್ಯಕ್ಷ ಸಾಕೇಲ್ ಶಿವಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಮುರಳೀಧರ್, ಪ್ರಧಾನ ಕಾರ್ಯ­ದರ್ಶಿ ರವಿ, ವಿಜಯಲಕ್ಷ್ಮಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry