ಗುರುವಾರ , ಜೂನ್ 24, 2021
21 °C
ರಸ್ತೆಯಲ್ಲಿ ಖಾಲಿ ಸಿಲಿಂಡರ್‌ ಇಟ್ಟು ಪ್ರತಿಭಟನೆ

ಗ್ಯಾಸ್‌ ಪೂರೈಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ಗ್ಯಾಸ್‌ ಸಿಲಿಂಡರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ವಿವಿಧೆಡೆಯ ಗ್ರಾಹಕರು ಖಾಲಿ ಗ್ಯಾಸ್‌ ಸಿಲಿಂಡರ್‌ ಅನ್ನು ರಸ್ತೆಯಲ್ಲಿಟ್ಟು ಭಾನುವಾರ ರಸ್ತೆ ತಡೆ ನಡೆಸಿದರು.ವಾರದಲ್ಲಿ ಗುರುವಾರ ಮತ್ತು ಭಾನುವಾರ ಮಾತ್ರ ಸಿಲಿಂಡರ್‌ ವಿತರಿಸುತ್ತಾರೆ. ಮೊನ್ನೆ ಗುರುವಾರ ನೀಡದೆ ವಾಪಸ್‌ ಕಳುಹಿಸಿದರು. ಗ್ರಾಮಾಂತರ ಪ್ರದೇಶದಿಂದ ಖಾಲಿ ಸಿಲಿಂಡರ್‌ ಹೊತ್ತು ತರುವ ನಾವು ಬೆಳಿಗ್ಗೆ ಐದು ಗಂಟೆಯಿಂದ ಕಾಯುತ್ತಿದ್ದೇವೆ. ಈಗ ನೋಡಿದರೆ ಸಿಲಿಂಡರ್‌ ಇಲ್ಲ ಎನ್ನುತ್ತಿದ್ದಾರೆ. ಹಣ ಪಾವತಿಸಿಕೊಂಡು ರಸೀದಿ ನೀಡಿ ಗ್ರಾಹಕರನ್ನು ಶೋಷಿಸುತ್ತಿದ್ದಾರೆ ಎಂದು ಜನರು ಆರೋಪಿಸಿದರು.ಕಾನೂನಿನ ಅನ್ವಯ ಗ್ರಾಹಕರ ಮನೆಗಳಿಗೆ ಸಿಲಿಂಡರ್‌ ತಲುಪಿಸಬೇಕು. ಆದರೆ ನಾವೇ ಬಂದರೂ ಬಿಸಿಲಿನಲ್ಲಿ  ನಿಲ್ಲಿಸಿ ಕಾಯಿಸುತ್ತಾರೆ. ವಿತರಣಾ ಕೇಂದ್ರವು ಒಂದೇ ಇರುವುದರಿಂದ ಗ್ರಾಹಕರಿಗೆ ಸರಿಯಾದ ಸೇವೆ ಸಲ್ಲಿಸುತ್ತಿಲ್ಲ. ಗ್ರಾಹಕರು ಹೆಚ್ಚಾಗಿರುವುದರಿಂದ ವಿತರಣಾ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.ಖಾಲಿ ಸಿಲಿಂಡರು ಹೊತ್ತು ತಂದ ಗ್ರಾಹಕರು, ಪುರ ಪೋಲಿಸ್‌ ಠಾಣೆ ಎದುರು ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ತಾಲ್ಲೂಕು ಕಚೇರಿ ಬಳಿ ತೆರಳಿ ಅಲ್ಲಿಯೂ ಘೋಷಣೆ ಕೂಗಿದರು.ವಿತರಕರ ಪರವಾಗಿ ಬಂದ ಮುರಳಿ, ಲಾರಿ ಬಾರದಿರುವುದರಿಂದ ಗ್ಯಾಸ್‌ ಸಿಲಿಂಡರ್‌ ವಿತರಿಸಲು ಆಗಿಲ್ಲ ಎಂದು ಲಾರಿಗೆ ಸಂಬಂಧಿಸಿದ ಹಾಗೂ ಸಿಲಿಂಡರ್‌ಗೆ ಹಣ ಪಾವತಿಸಿರುವ ದಾಖಲೆಗಳನ್ನು ತೋರಿಸಿ ಗ್ರಾಹಕರನ್ನು ಸಮಾಧಾನಗೊಳಿಸಿದರು. ನಂತರ ಪ್ರತಿಭಟನೆ ಹಿಂಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.