ಬುಧವಾರ, ಆಗಸ್ಟ್ 21, 2019
22 °C

ಗ್ರಂಥಾಲಯ ಇಲಾಖೆ ಮಾಹಿತಿ ದೊರಕಿಸಿ

Published:
Updated:

ರಾಜ್ಯದ ನಾಗರಿಕರಿಗೆ ಮಾಹಿತಿಯನ್ನು ಪಡೆಯುವ ಅವಕಾಶದ ಹಕ್ಕಿಗಾಗಿ, ಆಡಳಿತದಲ್ಲಿ ಮುಕ್ತ ನಿಲುವು,  ಪಾರದರ್ಶಕತೆ, ಹೊಣೆಗಾರಿಕೆಯನ್ನು ಹೆಚ್ಚಿಸುವ ಮತ್ತು ಜನರು ಆಡಳಿತದಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ಕಲ್ಪಿಸಿದ ಉಪಬಂಧವೆ ಮಾಹಿತಿ ಹಕ್ಕು ಅಧಿನಿಯಮ.ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4:1 (ಬಿ) ಪ್ರಕಾರ ಅಧಿನಿಯಮವನ್ನು ಅಧಿನಿಯಮಿತಿಗೊಳಿಸಿದ ದಿನಾಂಕದಿಂದ 120 ದಿನಗಳ ಒಳಗಾಗಿ 17 ಅಂಶಗಳನ್ನು ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು ಆಂತರ್ಜಾಲ ಸೇರಿದಂತೆ, ವೆಬ್‌ಸೈಟ್ ಹೊಂದಿರುವ ಪ್ರಾಧಿಕಾರ ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದಿದೆ.ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 7 ವರ್ಷ ಕಳೆದರೂ, ಸಾರ್ವಜನಿಕ ಗ್ರಂಥಾಲಯ ಇಲಾಖೆ ವೆಬ್‌ಸೈಟ್‌ನಲ್ಲಿ 17 ಅಂಶಗಳ ಮಾಹಿತಿ ದೊರಕದೆ ಇರುವುದು ಇಲಾಖೆಯ ಆಡಳಿತದ ಪಾರದರ್ಶಕತೆ ಬಗ್ಗೆ ಸಂಶಯ ಉಂಟುಮಾಡಿದೆ.ಇಲಾಖೆಯ ವೆಬ್‌ಸೈಟ್‌ನಲ್ಲಿ ಕಾಯ್ದೆ ದೊರಕುತ್ತದೆ. ಇತ್ತೀಚಿನ ರಾಜ್ಯ ಪತ್ರಗಳು ದೊರಕುತ್ತವೆ. ಆದರೆ ನಿಯಮ ಮತ್ತು ನಮೂನೆಗಳು ಮಾತ್ರ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರಿಗೆ ದೊರಕದಿರುವುದು ಇನ್ನೂ ಹೆಚ್ಚಿನ ಸಂಶಯ ಉಂಟುಮಾಡಿದೆ.ಈ ಮೇಲ್ಕಾಣಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಗ್ರಂಥಾಲಯ ಇಲಾಖೆ ವೆಬ್‌ಸೈಟ್‌ನಲ್ಲಿ ದೊರಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿ, ಈಗ ಲಭ್ಯವಾಗದಿರುವ ಮಾಹಿತಿಗಳು ಸಾರ್ವಜನಿಕರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ದೊರೆಯುವಂತೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ನಾನು ತಿಳಿದಿದ್ದೇನೆ.

ಹೊಸ ಮುಖ್ಯಮಂತ್ರಿಗಳ ಬಗ್ಗೆ ಸಾರ್ವಜನಿಕರಿಗೆ ಅಗಾಧ ನಿರೀಕ್ಷೆ ಇರುವುದರಿಂದ  ಆ ನಿರೀಕ್ಷೆಯನ್ನು ಹುಸಿಯಾಗಿಸುವುದಿಲ್ಲ ಎಂದು  ನಂಬಿದ್ದೇನೆ.

 

Post Comments (+)