ಭಾನುವಾರ, ಜೂನ್ 20, 2021
21 °C

ಗ್ರಾ.ಪಂ. ಅಧ್ಯಕ್ಷರ ದಿಗ್ಬಂಧನ: ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ತಾಲ್ಲೂಕಿನ ಮಣ್ಣೂರ ಗ್ರಾಮ ಪಂಚಾಯತಿ ಸಾಮಾನ್ಯಸಭೆ ನಡೆಯುತ್ತಿರುವಾಗಲ್ಲೆ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಈಡೇರಿಕೆಗಾಗಿ ಆಗ್ರಹಿಸಿ ಪಂಚಾಯತಿಗೆ ಬೀಗ ಜಡಿದು ಅಧ್ಯಕ್ಷ ಹಾಗೂ ಸದಸ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ ಘಟನೆ ಮಣ್ಣೂರ ಗ್ರಾಮದಲ್ಲಿ ಜರುಗಿದೆ.ಮಣ್ಣೂರ ಗ್ರಾಮದಲ್ಲಿ ಕಳೆದ ಏಳು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ತೋಟದ ಭಾವಿಗಳಿಗೆ ತೆರಳಿ ನೀರು ತಂದು ಕುಡಿಯುವ ಗ್ರಾಮಸ್ಥರು ಆಕ್ರೋಶಗೊಂಡು ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಪಂಚಾಯಿತಿಗೆ ಆಗಮಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಆರಂಭಿಸಿದರು. ಅನಿರೀಕ್ಷಿತವಾಗಿ ನಡೆದ ಈ ಘಟನೆಯಿಂದ ಸದಸ್ಯರು ಹಾಗೂ ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು ಗಾಬರಿಗೊಂಡರು.ಗ್ರಾ.ಪಂ ಅಧ್ಯಕ್ಷ  ಒಳಗಡೆಯಿಂದಲೇ ಕೂಗಾಟ ಆರಂಭಿಸಿದರು. ಅದಕ್ಕೆ ಗಮನ ನೀಡದೆ ಗ್ರಾಮಸ್ಥರು ಪ್ರತಿಭಟನೆ ಮುಂದುವರೆಸಿದರು. ಕೆಲ ಸದಸ್ಯರು ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಾತನಾಡಿ, ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯಿಸಲಾಗಿದೆ. ಶೀಘ್ರವೇ ಮೋಟಾರ ಅಳವಡಿಕೆ ಮಾಡಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಗ್ರಾಮ ಪಂಚಾಯಿತಿಗೆ ಹಾಕಿದ್ದ ಬೀಗವನ್ನು ಗ್ರಾಮಸ್ಥರು ತೆರೆದಾಗ ಒಳಗಿದ್ದ ಎಲ್ಲ ಸದಸ್ಯರೂ ನಿಟ್ಟುಸಿರು ಬಿಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.