ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟ

7

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟ

Published:
Updated:

ಜಮಖಂಡಿ: ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳ 30 ತಿಂಗಳ 2ನೇ ಅವಧಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಹೇಳಿದರು.ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರಾಟ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಗಳ 2ನೇ ಅವಧಿಯ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಡಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಹಾಲಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷ ಅವಧಿ ಬರುವ ಡಿಸೆಂಬರ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಆದರೆ ಎರಡು ತಿಂಗಳು ಅವಧಿ ಮುಂಚಿತವಾಗಿ ಮೀಸಲಾತಿ ಪ್ರಕಟಿಸಲಾಗಿದೆ ಎಂದರು.ಇದೇ 4 ರಂದು ಮುಧೋಳ ತಾಲ್ಲೂಕು, ಇದೇ 5 ರಂದು ಬಾದಾಮಿ ತಾಲ್ಲೂಕು, ಇದೇ 8 ರಂದು ಬೆಳಿಗ್ಗೆ ಬೀಳಗಿ ತಾಲ್ಲೂಕು ಹಾಗೂ ಮಧ್ಯಾಹ್ನ ಬಾಗಲಕೋಟೆ ತಾಲ್ಲೂಕು ಮತ್ತು ಇದೇ 10 ರಂದು ಹುನಗುಂದ ತಾಲ್ಲೂಕು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಡಿಸಲಾಗುವುದು ಎಂದರು.ಎಸಿ ಅಶೋಕ ದುಡಗುಂಟಿ, ತಹಶೀಲ್ದಾರ ಜಿ.ಎಲ್.ಮೇತ್ರಿ, ತಾಲ್ಲೂಕು ಪಂಚಾಯಿತಿ ಇಒ ಎ.ಜಿ.ಪಾಟೀಲ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.ತಾಲ್ಲೂಕಿನ ಒಟ್ಟು 32 ಗ್ರಾಮ ಪಂಚಾಯಿತಿಗಳ ಪೈಕಿ 6 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಸ್ಥಾನಗಳು ಅನುಸೂಚಿತ ಜಾತಿಗೆ ಮೀಸಲಿದ್ದು, ಅವುಗಳಲ್ಲಿ 3 ಸ್ಥಾನಗಳು ಮಹಿಳೆಯರಿಗಾಗಿ ಮೀಸಲಿವೆ. ಒಂದು ಸ್ಥಾನ ಅನುಸೂಚಿತ ಪಂಗಡದ ಮಹಿಳೆಗೆ ಮೀಸಲಿದೆ.ಹಿಂದುಳಿದ ವರ್ಗ `ಅ~ ಕ್ಕೆ 7 ಸ್ಥಾನಗಳಿದ್ದು, ಅವುಗಳ ಪೈಕಿ 4 ಮಹಿಳೆಯರಿಗೆ, ಹಿಂದುಳಿದ ವರ್ಗ `ಬ~ಕ್ಕೆ 2 ಸ್ಥಾನಗಳಿದ್ದು, ಆ ಪೈಕಿ ಒಂದು ಮಹಿಳೆಗೆ ಹಾಗೂ 16 ಸ್ಥಾನಗಳು ಸಾಮಾನ್ಯರಿಗೆ ಮೀಸಲಿದ್ದು, ಅವುಗಳ ಪೈಕಿ 8 ಸ್ಥಾನಗಳು ಮಹಿಳೆಯರಿಗಾಗಿ ಮೀಸಲಿವೆ.ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ ಮತ್ತು ಮೀಸಲಾತಿಗಳು ಇಂತಿವೆ. (ಗ್ರಾ.ಪಂ.ಹೆಸರು, ಅಧ್ಯಕ್ಷರು  ಉಪಾಧ್ಯಕ್ಷರ ಮೀಸಲಾತಿ ಕ್ರಮವಾಗಿದೆ)

ಆಲಗೂರ: ಹಿಂ.ವರ್ಗ `ಅ~, ಹಿಂ.ವರ್ಗ `ಬ~ (ಮಹಿಳೆ)

ಆಸಂಗಿ: ಸಾಮಾನ್ಯ(ಮಹಿಳೆ), ಸಾಮಾನ್ಯ

ಬಿದರಿ: ಅ.ಜಾತಿ (ಮಹಿಳೆ), ಹಿಂ.ವರ್ಗ `ಬ~

ಚಿಕ್ಕಪಡಸಲಗಿ: ಸಾಮಾನ್ಯ (ಮಹಿಳೆ), ಸಾಮಾನ್ಯ

ಚಿಮ್ಮಡ : ಸಾಮಾನ್ಯ, ಅ.ಜಾತಿ (ಮಹಿಳೆ)

ಗೋಲಭಾವಿ: ಸಾಮಾನ್ಯ,  ಸಾಮಾನ್ಯ(ಮಹಿಳೆ)

ಗೋಠೆ: ಹಿಂ.ವರ್ಗ `ಅ~(ಮ), ಸಾಮಾನ್ಯ (ಮಹಿಳೆ)

ಹಳಿಂಗಳಿ: ಹಿಂ.ವರ್ಗ `ಅ~(ಮ), ಅ.ಜಾತಿ

ಹನಗಂಡಿ:  ಹಿಂ.ವರ್ಗ `ಬ~, ಹಿಂ.ವರ್ಗ `ಅ~ (ಮಹಿಳೆ)

ಹಿಪ್ಪರಗಿ: ಹಿಂ.ವರ್ಗ `ಅ~ ಸಾಮಾನ್ಯ(ಮಹಿಳೆ)

ಹಿರೇಪಡಸಲಗಿ: ಹಿಂ.ವರ್ಗ`ಬ~(ಮ), ಹಿಂ.ವರ್ಗ `ಅ~

ಹುಲ್ಯಾಳ: ಹಿಂ.ವರ್ಗ `ಅ, ~ಅ.ಜಾತಿ(ಮಹಿಳೆ)

ಹುನ್ನೂರ: ಅ.ಪಂಗಡ(ಮಹಿಳೆ), ಹಿಂ.ವರ್ಗ ~ಅ~(ಮಹಿಳೆ)

ಜಗದಾಳ:  ಸಾಮಾನ್ಯ, ಅ.ಜಾತಿ(ಮಹಿಳೆ)

ಜಂಬಗಿ:  ಬಿಕೆಸಾಮಾನ್ಯ, ಸಾಮಾನ್ಯ (ಮಹಿಳೆ)

ಕಡಪಟ್ಟಿ:  ಸಾಮಾನ್ಯ(ಮಹಿಳೆ), ಸಾಮಾನ್ಯ

ಕಂಕಣವಾಡಿ: ಸಾಮಾನ್ಯ(ಮಹಿಳೆ), ಸಾಮಾನ್ಯ

ಕನ್ನೊಳ್ಳಿ: ಸಾಮಾನ್ಯ, ಸಾಮಾನ್ಯ(ಮಹಿಳೆ)

ಕೊಣ್ಣ್ಟೂ: ಅ.ಜಾತಿ, ಹಿಂ.ವರ್ಗ `ಅ~ (ಮಹಿಳೆ)

ಕುಲಹಳ್ಳಿ: ಅ.ಜಾತಿ(ಮಹಿಳೆ), ಸಾಮಾನ್ಯ

ಕುಂಬಾರಹಳ್ಳ: ಸಾಮಾನ್ಯ , ಸಾಮಾನ್ಯ(ಮಹಿಳೆ)

ಕುಂಚನೂರ: ಹಿಂ.ವರ್ಗ~ಅ~(ಮ), ಅ.ಜಾತಿ

ಲಿಂಗನೂರ: ಸಾಮಾನ್ಯ, ಅ.ಪಂಗಡ (ಮಹಿಳೆ)

ಮಧುರಖಂಡಿ: ಅ.ಜಾತಿ, ಸಾಮಾನ್ಯ

ಮೈಗೂರ: ಸಾಮಾನ್ಯ(ಮಹಿಳೆ), ಸಾಮಾನ್ಯ (ಮಹಿಳೆ)

ಮುತ್ತೂರ, ಸಾಮಾನ್ಯ, ಸಾಮಾನ್ಯ(ಮಹಿಳೆ)

ನಾವಲಗಿ: ಹಿಂ.ವರ್ಗ~ಅ~(ಮ), ಅ.ಜಾತಿ

ಸಸಾಲಟ್ಟಿ: ಸಾಮಾನ್ಯ(ಮಹಿಳೆ), ಸಾಮಾನ್ಯ

ಸಾವಳಗಿ: ಅ.ಜಾತಿ(ಮಹಿಳೆ), ಹಿಂ.ವರ್ಗ~ಅ~

ಶೂರ್ಪಾಲಿ: ಸಾಮಾನ್ಯ(ಮಹಿಳೆ), ಸಾಮಾನ್ಯ

ತೊದಲಬಾಗಿ: ಅ.ಜಾತಿ, ಹಿಂ.ವರ್ಗ~ಅ~ (ಮಹಿಳೆ)

ತುಂಗಳ: ಸಾಮಾನ್ಯ(ಮಹಿಳೆ),  ಹಿಂ.ವರ್ಗ~ಅ~ 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry