ಬುಧವಾರ, ಮೇ 12, 2021
26 °C

ಗ್ರಾ.ಪಂ. ಉಪಚುನಾವಣೆ: ಮಾತಿನ ಚಕಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ನಾನಾ ಕಾರಣಗಳಿಂದ ತೆರವಾಗಿರುವ ತಾಲ್ಲೂಕಿನ 5 ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಭಾನುವಾರ ನಡೆದ ಉಪ ಚುನಾವಣೆ ಮತದಾನದ ವೇಳೆ ಅರಕೆರೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.ಅರಕೆರೆ ಗ್ರಾ.ಪಂ.ನ 4ನೇ ವಾರ್ಡ್‌ಗೆ ಮತಗಟ್ಟೆ 63/1 ಹಾಗೂ 63/2ರಲ್ಲಿ ಮತದಾನ ನಡೆಯುತ್ತಿದ್ದಾಗ ಜೆಡಿಎಸ್ ಬೆಂಬಲಿತ ಮಹಿಳೆಯೊಬ್ಬರು ವೃದ್ಧೆಯನ್ನು ಕೈ ಹಿಡಿದು ಕರೆ ತಂದು ವೋಟು ಹಾಕಿಸಿದರು ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ತಕರಾರು ತೆಗೆದರು.ಮೊಳ್ಳಮ್ಮ ಎಂಬ ವೃದ್ಧೆಯ ಹೆಸರಿನಲ್ಲಿ ಜೆಡಿಎಸ್ ಕಡೆಯ ತಾನೇ ಮತ ಹಾಕಿದ್ದಾರೆ ಎಂದು ಜಿ.ಪಂ. ಸದಸ್ಯ ಎ.ಆರ್.ಮರೀಗೌಡ, ಬಾಲಕೃಷ್ಣ, ಸುರೇಶ್ ಇತರರು ಮತಗಟ್ಟೆ ಅಧ್ಯಕ್ಷಾಧಿಕಾರಿ ವಿರುದ್ಧ ಹರಿಹಾಯ್ದರು. ಒಂದು ಹಂತದಲ್ಲಿ ಜೆಡಿಎಸ್‌ನ ಎ.ಆರ್.ಶಿವಶಂಕರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.ರವೀಂದ್ರ ಶ್ರೀಕಂಠಯ್ಯ ತಿರುಗೇಟು: `ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಸಹೋದರಿ ಎ.ಬಿ.ಜ್ಯೋತಿ ( ಕ್ರ.ಸಂ.627) ಎಂಬವರು 15 ವರ್ಷಗಳ ಹಿಂದೆಯೇ ಬೇರೆ ಊರಿಗೆ ಮದುವೆಯಾಗಿ ಹೋಗಿದ್ದಾರೆ. ಆದರೂ ಭಾನುವಾರ ಅರಕೆರೆ ಗ್ರಾ.ಪಂ. ಉಪ ಚುನಾವಣೆಯಲ್ಲಿ ಮತ ಚಲಾಯಿಸಿರುವುದು ತಿಳಿದು ಬಂದಿದೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಜ್ಯೋತಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಬೇಕು.ಶಾಸಕರ ಕುಟುಂಬದವರು ಹಾಗೂ ಸಾಮಾನ್ಯ ಜನರಿಗೆ ಒಂದೇ ಕಾನೂನು ಎಂಬುದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು~ ಎಂದು ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದರು.ಅರಕೆರೆ ಗ್ರಾ.ಪಂ.ನ 4 ಮತ್ತು 7ನೇ ವಾರ್ಡ್‌ಗಳು ಸೂಕ್ಷ್ಮ ಮತಗಟ್ಟೆ ಎಂಬ ಕಾರಣಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮತಗಟ್ಟೆ ಸಮೀಪ ಶಾಸಕ ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಹಾಗೂ ಅವರ ಕುಟುಂಬ ದವರು ಮತ್ತು ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಕಡೇ ಗಳಿಗೆ ವರೆಗೆ ಮತದಾರರನ್ನು ಓಲೈಸುತ್ತಿದ್ದ ದೃಶ್ಯ ಕಂಡುಬಂತು.ತಡಗವಾಡಿಯಲ್ಲಿ ಶೇ.93.8 ಮತದಾನ: ಭಾನುವಾರ ತಾಲ್ಲೂಕಿನ ವಿವಿಧ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ತಾಲ್ಲೂಕಿನ ತಡಗವಾಡಿ ಮತಗಟ್ಟೆ 69/ಎ ಕೇಂದ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.93.8ರಷ್ಟು ಮತದಾನವಾಗಿದೆ. ಈ ಮತಗಟ್ಟೆಯಲ್ಲಿ 690 ಮತದಾರರ ಪೈಕಿ 647 ಮಂದಿ ಮತ ಚಲಾಯಿಸಿದ್ದಾರೆ.ತಾಲ್ಲೂಕಿನ ಅರಕೆರ ಗ್ರಾ.ಪಂ. ವ್ಯಾಪ್ತಿಯ ಮಂಡ್ಯಕೊಪ್ಪಲು ಮತಗಟ್ಟೆ 66ರಲ್ಲಿ ಶೇ.91.3ರಷ್ಟು ಮತದಾನವಾಗಿದೆ. 910 ಮತದಾರರ ಪೈಕಿ 831 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ತಡವಾಡಿ ಮತಗಟ್ಟೆ 68ರಲ್ಲಿ 560 ಮಂದಿ ಮತದಾರರಲ್ಲಿ 458 ಮತದಾರರು ಮತ ಹಾಕಿದ್ದು, ಶೇ.81.8ರಷ್ಟು ಮತದಾನವಾಗಿದೆ. ಶಾಸಕರ ತವರು ಅರಕೆರೆ ಮತಗಟ್ಟೆ 63/2ರಲ್ಲಿ 755 ಮತದಾರರಿದ್ದು, 574 ಮಂದಿ ಮತ ಹಾಕಿದ್ದಾರೆ. ಇಲ್ಲಿ ಶೇ.76ರಷ್ಟು ಮತದಾನವಾಗಿದೆ. ಮತಗಟ್ಟೆ 63/1ರಲ್ಲಿ 903 ಮತದಾರರ ಪೈಕಿ 697 ಮತಗಳು ಚಲಾವಣೆಯಾಗಿದ್ದು, ಶೇ.77.2ರಷ್ಟು ಮತದಾನವಾಗಿದೆ.ಪಿ.ಹೊಸಹಳ್ಳಿ ಮತಗಟ್ಟೆ 32ರಲ್ಲಿ 741 ಮತದಾರರಿದ್ದು 539 ಮಂದಿ ಮತ ಹಾಕಿದ್ದು, ಶೇ.72.7 ಮತದಾನವಾಗಿದೆ. ಇದೇ ಗ್ರಾಮದ ಮತಗಟ್ಟೆ 32/ಎ ಕೇಂದ್ರದಲ್ಲಿ 644 ಮತದಾರರಲ್ಲಿ 434 ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.67.4ರಷ್ಟು ಮತದಾ ನವಾಗಿದೆ ಎಂದು ತಹಶೀಲ್ದಾರ್ ಅರುಳ್‌ಕುಮಾರ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.