ಗ್ರಾ.ಪಂ: ಕಾಂಗ್ರೆಸ್ ವಿಜಯೋತ್ಸವ

7

ಗ್ರಾ.ಪಂ: ಕಾಂಗ್ರೆಸ್ ವಿಜಯೋತ್ಸವ

Published:
Updated:

ಹಾನಗಲ್ಲ: ತಾಲ್ಲೂಕಿನ ಕೂಡಲ, ಹಾವಣಗಿ, ಹುಲತ್ತಿ ಗ್ರಾಮ ಪಂಚಾಯಿತಿಗಳಲ್ಲಿ ಜಯ ಗಳಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರೊ.ಸಿ.ಎಸ್. ಬಡಿಗೇರ ಮಾತನಾಡಿ, ‘ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜನಪರ ಆಡಳಿತದ ಮೂಲಕ ಪಕ್ಷವನ್ನು ಸಂಘಟಿಸಲು ಕಾಂಗ್ರೆಸ್ ಮುಂದಾಗುತ್ತದೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಮುಖಂಡರಾದ ವಿಷ್ಣುಕಾಂತ ಜಾಧವ, ಆರ್.ಎಸ್. ಪಾಟೀಲ, ವೀರೇಶ ಬೈಲವಾಳ, ಮಹದೇವಪ್ಪ ಪೂಜಾರ,  ಪ್ರಶಾಂತ ಗೊಂದಿ, ಗನೀಸಾಬ್ ಪಟೇಲ, ಹನುಮಂತಪ್ಪ ಶಡಗರವಳ್ಳಿ, ಬಂಗಾರಗೌಡ್ರು ಪಾಟೀಲ, ಕೇಶವ ಶೇಷಗಿರಿ, ಆರ್.ಸಿ. ಹಿರೇಮಠ, ಮಲ್ಲನಗೌಡ್ರ ಪಾಟೀಲ, ಬಸವಣ್ಣೆಪ್ಪ ಚಕ್ರಸಾಲಿ, ಬಶೀರಖಾನಸಾಬ್ ಪಠಾಣ, ನಜೀರಸಾಬ್ ಗಿರಸಿನಕೊಪ್ಪ, ಮಕಬೂಲಸಾಬ್ ಹುಲಗೂರ, ಮಾರ್ಕಂಡೆಪ್ಪ ಪವಾರ, ಪ್ರಭು ದೊಡ್ಡಕುರುಬರ, ಮಹಾಂತ ತೊಗರಳ್ಳಿ, ಬಸನಗೌಡ್ರ ಪಾಟೀಲ  ವಿಜಯೋತ್ಸವದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry