ಗ್ರಾ.ಪಂ. ಚುನಾವಣೆ: ಅಧಿಸೂಚನೆ ಪ್ರಕಟ

ಬುಧವಾರ, ಜೂಲೈ 24, 2019
28 °C

ಗ್ರಾ.ಪಂ. ಚುನಾವಣೆ: ಅಧಿಸೂಚನೆ ಪ್ರಕಟ

Published:
Updated:

ಚಾಮರಾಜನಗರ: ಜಿಲ್ಲೆಯ 4 ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಒಟ್ಟು 19 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.ಜುಲೈ 24ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಜುಲೈ 25ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜುಲೈ 27ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಂತಿಮ ದಿನ. ಆ. 4ರಂದು ಅವಶ್ಯವಿದ್ದರೆ ಮತದಾನ ನಡೆಯಲಿದೆ. ಆ. 6ರಂದು ಮರುಮತದಾನ ಅವಶ್ಯವಿದ್ದರೆ ನಡೆಸಲಾಗುವುದು. ಮತದಾನ ಬೆಳಿಗ್ಗೆ 7ರಿಂದ ಸಂಜೆ 5ಗಂಟೆವರೆಗೆ ನಡೆಯಲಿದೆ. ಮತ ಎಣಿಕೆ ಕಾರ್ಯವು ಆ. 7ರಂದು ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 8ಗಂಟೆಗೆ ಆರಂಭವಾಗಲಿದೆ. ಆ. 7ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.ಚಾಮರಾಜನಗರ ತಾಲ್ಲೂಕಿನ ಮಸಣಾಪುರ ಗ್ರಾಮ ಪಂಚಾಯಿತಿ, ಎಚ್. ಮೂಕಹಳ್ಳಿ (ಪರಿಶಿಷ್ಟ ಜಾತಿ- ಮಹಿಳೆ), ನಾಗವಳ್ಳಿ ಗ್ರಾಮ ಪಂಚಾಯಿತಿಯ 2 ಕ್ಷೇತ್ರಕ್ಕೆ (ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ), ಅರಕಲವಾಡಿ ಗ್ರಾಮ ಪಂಚಾಯಿತಿಯ ಲಿಂಗಣಾಪುರ (ಸಾಮಾನ್ಯ), ದೇಮಹಳ್ಳಿ ಗ್ರಾಮ ಪಂಚಾಯಿತಿಯ ಕಮರವಾಡಿ (ಅನುಸೂಚಿತ ಜಾತಿ- ಮಹಿಳೆ), ಮಂಗಲ ಗ್ರಾಮ ಪಂಚಾಯಿತಿಯ ಹುಲ್ಲೆೀಪುರ (ಸಾಮಾನ್ಯ) ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 7 ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ.ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮ ಪಂಚಾಯಿತಿಯ ಲಕ್ಕರಸನಪಾಳ್ಯ (ಹಿಂದುಳಿದ ಅ ವರ್ಗ-   ಮಹಿಳೆ), ಹುತ್ತೂರು ಗ್ರಾಮ ಪಂಚಾಯಿತಿಯ ಒಡೆಯರಪಾಳ್ಯ (ಪರಿಶಿಷ್ಟ ಪಂಗಡ) ಮತ್ತು ಕೌದಳ್ಳಿ ಗ್ರಾಮ ಪಂಚಾಯಿತಿಯ (ಪರಿಶಿಷ್ಟ ಜಾತಿ) ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿದೆ. ಒಟ್ಟಾರೆ 3 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಗುಂಡ್ಲುಪೇಟೆ ತಾಲ್ಲೂಕಿನ ಬನ್ನಿತಾಳಪುರ ಗ್ರಾಮ ಪಂಚಾಯಿತಿಯ ಇಂಗಲವಾಡಿ (ಹಿಂದುಳಿದ ಅ ವರ್ಗ), ಕೆಲಸೂರು ಗ್ರಾಮ ಪಂಚಾಯಿತಿಯ (ಪರಿಶಿಷ್ಟ ಪಂಗಡ), ಶಿವಪುರ ಗ್ರಾಮ ಪಂಚಾಯಿತಿಯ ಕಲೀಗೌಡನಹಳ್ಳಿ (ಹಿಂದುಳಿದ ಅ ವರ್ಗ- ಮಹಿಳೆ), ಕೊಡಸೋಗೆ ಗ್ರಾಮ ಪಂಚಾಯಿತಿಯ ಕರಕಲ ಮಾದಹಳ್ಳಿ (ಸಾಮಾನ್ಯ), ಚಿಕ್ಕಾಟಿ ಗ್ರಾಮ ಪಂಚಾಯಿತಿಯ (ಹಿಂದುಳಿದ ಅ ವರ್ಗ), ಹೊರೆಯಾಲ ಗ್ರಾಮ ಪಂಚಾಯಿತಿಯ ಹಿರಿಕಾಟಿ (ಸಾಮಾನ್ಯ- ಮಹಿಳೆ) ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 6 ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮ ಪಂಚಾಯಿತಿಯ ಬೂದಿತಿಟ್ಟು (ಹಿಂದುಳಿದ ಅ ವರ್ಗ- ಮಹಿಳೆ), ಮಾಂಬಳ್ಳಿ (ಹಿಂದುಳಿದ ಬ ವರ್ಗ) ಹಾಗೂ ಯರಿಯೂರು ಗ್ರಾಮ ಪಂಚಾಯಿತಿಯ (ಪರಿಶಿಷ್ಟ ಜಾತಿ- ಮಹಿಳೆ) ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಒಟ್ಟು 3 ಸದಸ್ಯ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry