ಮಂಗಳವಾರ, ಜೂನ್ 22, 2021
23 °C

ಗ್ರಾ.ಪಂ. ಸದಸ್ಯರ ಕಾಲು ಶತಮಾನದ ಯಶಸ್ವಿ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಡಚಣ: ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ಕುಡಿಯುವ ನೀರು ಪೂರೈಕೆ ಯೋಜನೆಗೆ ಇದೀಗ ಚಾಲನೆ ನೀಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರ ನಿರಂತರ ಹೋರಾಟ ಕೊನೆಗೂ ಯಶಸ್ಸು ಕಂಡಿದೆ.ಹಾಲಿ ಸಂಸದ ರಮೇಶ ಜಿಗಜಿಣಗಿ ಅವರು 25 ವರ್ಷಗಳ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಿದ್ದರು. ನಂತರ ಯೋಜನೆ ನೆನೆಗುದಿಗೆ ಬಿದ್ದಿತ್ತು. ಗ್ರಾಮಸ್ಥರು ನೀರು ಪೂರೈಕೆಗಾಗಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ.ಬೇಸಿಗೆಯಲ್ಲಿ ನೀರಿನ ಅಭಾವ ತಡೆಯಲು ಗ್ರಾ.ಪಂ. ಸದಸ್ಯರು ದುರಸ್ತಿ ಕಾಮಗಾರಿ ಕೈಗೊಂಡಿದ್ದರು. ಒಡೆದ ಕೊಳವೆಗಳನ್ನು ಸರಿಪಡಿಸಿದರು. ಹಾವಿನಾಳ ಬಳಿ ಭೀಮಾ ನದಿಗೆ ಅಳವಡಿಸಿರುವ ಜಾಕ್‌ವೆಲ್‌ನ ದುರಸ್ತಿ ಮಾಡಿಸಿದ್ದಾರೆ. ಜಲ ಸಂಗ್ರಹಾಗಾರ ಶುದ್ಧಗೊಳಿಸಿ, ನೀರು ಪೂರೈಕೆಗೆ ವ್ಯವಸ್ಥೆ ಮಾಡಿದ್ದಾರೆ.ನೀರು ಪೂರೈಕೆ ಯೋಜನೆಯ ಪುನರಾರಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಚಂದಕ್ಕ ಚವ್ಹಾಣ, ಪಟ್ಟಣಕ್ಕೆ ಬಹು ಹಳ್ಳಿಗಳ ನೀರು ಪೂರೈಕೆ ಯೋಜನೆಯಡಿ ಭೀಮಾ ನದಿಯಿಂದ ನೀರು ಪೂರೈಸಲಾಗುತ್ತಿದೆ.ಆದರೂ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ 25 ವರ್ಷಗಳಷ್ಟು ಹಳೆಯದಾದ ಕೊಳವೆ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಅದಕ್ಕಾಗಿ 5 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ನುಡಿದರು.ಗ್ರಾ.ಪಂ. ಸದಸ್ಯರಾದ ಬಾಬುಗೌಡ ಪಾಟೀಲ, ರಾಜು ಕೋಳಿ, ಚಂದ್ರಕಾಂತ ಶಿಂಧೆ, ಸೋಮು ಬಡಿಗೇರ, ಮಹಾದೇವ ಯಂಕಂಚಿ, ಕಾಂತುಗೌಡ ಪಾಟೀಲ, ಚಾಂದಸಾಬ ನದಾಫ್, ಸಂಗೀತಾ ಮಠ, ಶಾರದಾ ಕೋಟಿ, ಪಿಡಿಒ ಆರ್.ಬಿ.ಬಿರಾದಾರ, ಮುಖಂಡ ಭರತೇಶ ಚವ್ಹಾಣ, ಪಿಎಸ್‌ಐ ಮಹಾದೇವ ಯಲಗಾರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.