`ಗ್ರಾಮಗಳು ಸಂಸ್ಕೃತಿ ಬಿತ್ತರಿಸುವ ತಾಣ'

7

`ಗ್ರಾಮಗಳು ಸಂಸ್ಕೃತಿ ಬಿತ್ತರಿಸುವ ತಾಣ'

Published:
Updated:

ಗದಗ: `ಗ್ರಾಮಗಳು ಸಂಸ್ಕೃತಿಯನ್ನು ಬಿತ್ತರಿಸುವ ತಾಣಗಳಾಗಿವೆ' ಎಂದು ಹುಲಕೋಟಿ  ಕೆ. ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ ಹೇಳಿದರು.ತಾಲ್ಲೂಕಿನ ಬಿಂಕದಕಟ್ಟಿಯಲ್ಲಿ ಹುಲಕೋಟಿ ಕೆ. ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು, `ಸಹಬಾಳ್ವೆ, ಸಹಕಾರ, ಅನ್ಯೋನ್ಯತೆ, ಕಲೆ, ಸಂಸ್ಕೃತಿ, ಜನಪದ ಗಳನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡ ಗ್ರಾಮಗಳ ಕಡೆಗೆ ಯುವಕರು ಗಮನಹರಿಸಬೇಕು' ಎಂದು ಕರೆ ನೀಡಿದರು.ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಉಮೇಶ ಅರಹುಣಸಿ ಮಾತನಾಡಿ, `ರಾಷ್ಟ್ರೀಯ ಸೇವಾ ಯೋಜನೆಗಳಂತಹ ಕಾರ್ಯಕ್ರಮಗಳ ಮೂಲಕ  ಯುವ ಜನಾಂಗ ಸದೃಢತೆ  ರೂಢಿಸಿಕೊಳ್ಳಬೇಕು ಎಂದರು.ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ನಾಗರಾಜ ಹಾವಿನಾಳ, ಬಿ.ವೈ. ಆಲೂರ, ಪ್ರೊ. ಎ. ಬಿ ರೊಟ್ಟಿಗವಾಡ, ಪ್ರೊ. ರಂಜನಾ ಭಂಡಾರೆ, ಪ್ರೊ. ನವೀನ ತಿರ್ಲಾಪುರ, ಪ್ರೊ.  ಎಂ. ಎಚ್. ಕರ್ಲವಾಡ ಮಾತ ನಾಡಿದರು.ನಿಪ್ಪಾಣಿ, ಚನ್ನಮ್ಮ ಅಂಗಡಿ, ಮಂಜುನಾಥ ಅಂಗಡಿ, ಭಾರತಿ ಯರಗುಪ್ಪಿ, ಅನಿತಾ ದಾಮೋದರ, ಜಂದೂಬಿ ದೊಡಮನಿ, ರಮೇಶ ದೊಡಮನಿ ಅನಿಸಿಕೆ ಹಂಚಿಕೊಂಡರು. ಪ್ರೊ. ಎಫ್. ಬಿ. ಆನಿ, ಪ್ರೊ. ಈಶ್ವರ ಚೋಬಾರಿ. ಮುತ್ತು ಬದ್ನಿಕಾಯಿ, ಶಿವು ಬಿನ್ನಾಳ ಪಾಲ್ಗೊಂಡಿದ್ದರು. ಬಸವರಾಜ ಗೂರನವರ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry