ಶನಿವಾರ, ಮೇ 28, 2022
29 °C

ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ: ಚಿಮ್ಮನಕಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಳೇದಗುಡ್ಡ: ಗ್ರಾಮೀಣ ಪ್ರದೇಶದಲ್ಲಿರುವ ಬಡವರ, ದೀನ- ದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಸಂರಕ್ಷಣೆಗೆ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಲಿದೆ ಎಂದು ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿದರು.



ಇತ್ತೀಚೆಗೆ ಸಮೀಪದ ಆಸಂಗಿ- ಕಟಗಿನಹಳ್ಳಿ, ಕೊಟ್ನಳ್ಳಿ, ಲಾಯದಗುಂದಿ, ನಾಗರಾಳ ಗ್ರಾಮದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.



ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಜೋಗಿನ, ಗುಳೇದಗುಡ್ಡದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನಮಂತ ಮಾವಿನಮರದ, ಬಾದಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಡಿ.ಎಲಿಗಾರ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ವಿವಿಧ ಬೇಡಿಕೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು.



ತಾ.ಪಂ. ಸದಸ್ಯ ಹನಮಂತ ಕೆ. ಪತ್ತಾರ, ಪಾದರ ರಾಜಪ್ಪ, ಪ್ರಕಾಶ ಗೌಡರ, ಬಾಪುಗೌಡ ಪಾಟೀಲ, ಶಿವಾನಂದ ರಾಹುತ, ಕಮಲಪ್ಪ ಚಂದನ್ನವರ, ಆಸಂಗೆಪ್ಪ ನಕ್ಕರಗುಂದಿ, ಶೇಖರ ರಾಠೋಡ, ಅಬ್ರಾಮಪ್ಪ ಚಂದನ್ನವರ, ಚಂದಪ್ಪ ಗೌಡರ, ಸುಭಾಸ ಗುರುಶಾಂತಪ್ಪನವರ, ಗಂಗಪ್ಪ ಮಣ್ಣೂರ, ಮಲ್ಲಪ್ಪ ಕುಪ್ಪಸ್ತ, ಬೈಲಪ್ಪ ಜಡಿ, ಬಸಪ್ಪ ಮಾಳವಾಡ, ಬೈಲಪ್ಪ ಪಾತ್ರೋಟಿ, ಬಾಲಚಂದ್ರಪ್ಪ ಅಂಬಿಗೇರ, ಗೌಡಪ್ಪ ಗೌಡರ, ಬಾಲಪ್ಪ ಬಗಲಿ, ಶಿವಪ್ಪ ಹಾದಿಮನಿ, ನಿಂಗಪ್ಪ ಅಂಬಿಗೇರ, ಹನಮಂತ ಉಪ್ಪಾರ,ಶಂಕರಗೌಡ ಗೌಡರ, ಬೈಲಪ್ಪ ಡೊಳ್ಳಿನ, ಶೇಖಪ್ಪ ನಡುವಿನಮನಿ, ರಾಯಪ್ಪ ಗೋಡಿ, ವಿ.ಆರ್.ಚವಾಣ, ಹನಮಂತ ಕಳ್ಳಿಗುಡ್ಡ, ಲೆಂಕೆಪ್ಪ ಹಿರೇಕುರುಬರ ಇದ್ದರು. ಪ್ರಕಾಶ ಗೌಡರ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.