ಗ್ರಾಮಸಭೆ–ಅಧಿಕಾರಿಗಳ ಗೈರು

5

ಗ್ರಾಮಸಭೆ–ಅಧಿಕಾರಿಗಳ ಗೈರು

Published:
Updated:

ಕನಕಪುರ: ಕಸಬಾ ಹೋಬಳಿ ನಾರಾಯಣಪುರ ಗ್ರಾಮ ಪಂಚಾಯಿ ತಿಯಲ್ಲಿ 2013–14ನೇ ಸಾಲಿನ ಮೊದಲನೆ ಸುತ್ತಿನ ವಾರ್ಡ್‌ ಮತ್ತು ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷ ರಾಜು ಅಧ್ಯಕ್ಷತೆಯಲ್ಲಿ ನಡೆಯಿತು.ಗ್ರಾಮ ಸಭೆಗೂ ಮುನ್ನ ಪಂಚಾ ಯಿತಿ ವ್ಯಾಪ್ತಿಯ ಗ್ರಾಮಗಳಾದ ದೊಡ್ಡಬೆಟ್ಟಹಳ್ಳಿ, ಮುನೇಶ್ವರನ ದೊ ಡ್ಡಿ, ಕೆಬ್ಬೆಹಳ್ಳಿ, ಬೆಟ್ಟೇಗೌಡನ ದೊಡ್ಡಿ, ನಾರಾಯಣಪುರ, ನಿಡಗಲ್ಲು, ಹುಲಿ ಬೆಲೆ, ಕೂನೂರು ಗ್ರಾಮಗಳಲ್ಲಿ ವಾರ್ಡ್ ಸಭೆಯನ್ನು ವಿವಿಧ ಇಲಾಖೆ ಗಳ ಅಧಿಕಾರಗಳೊಂದಿಗೆ ನಡೆಸಿ ಕುಂ ದು–ಕೊರತೆ, ಆಗಬೇಕಿರುವ ಕೆಲಗಳ ಬಗ್ಗೆ ಪಟ್ಟಿ ಮಾಡಲಾಗಿತ್ತು.ಸಭೆಯಲ್ಲಿ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಅರಣ್ಯ ಮತ್ತು ರೇಷ್ಮೆ ಹಾಗೂ ನರೇಗಾ ಅಧಿಕಾರಿಗಳು ಇಲಾಖೆಯ ಸವಲತ್ತು ಗಳ ಬಗ್ಗೆ ತಿಳಿಸಿಕೊಟ್ಟು ಗ್ರಾಮಗಳಲ್ಲಿ ಆಗಬೇಕಿರುವ ಕಾರ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾ ಮೀಣ ಉದ್ಯೋಗ ಖಾತ್ರಿ ಯೋಜ ನೆಯ ಹೆಚ್ಚುವರಿ ಕಾಮಗಾರಿಗಳ ತಯಾರಿಸುವ ಬಗ್ಗೆ, ವಿವಿಧ ವಸತಿ ಯೋಜನೆಯಡಿಯಲ್ಲಿ ಫಲಾನು ಭವಿಯನ್ನು ಪಟ್ಟಿ ಮಾಡುವುದು, ವಿವಿ ಧ ಇಲಾಖೆಗಳಲ್ಲಿ ದೊರೆಯುವ ಸಲ ವತ್ತುಗಳ ಬಗ್ಗೆ ಪಟ್ಟಿ ಮಾಡುವುದು, ನಿರ್ಮಲ ಭಾರತ ಅಭಿಯಾನ ಯೋಜ ನೆಯ ಅನುಷ್ಠಾನದ ಬಗ್ಗೆ ಪಂಚಾಯಿತಿ ಅಧಿಕಾರಿ ಶಿವರಾಜಯ್ಯ ಸಭೆಗೆ ತಿಳಿಸಿ ಕೊಟ್ಟರು.ಅರಣ್ಯ, ರೇಷ್ಮೆ ಮತ್ತು ನರೇಗಾ ಇಲಾಖೆ ಅಧಿಕಾರಿಗಳು ಹೊರತು ಪಡಿಸಿದರೆ ಉಳಿದಂತ ಇಲಾಖೆಗಳ ಅಧಿಕಾರಿಗಳಾಗಲಿ, ಅವರ ಪ್ರತಿನಿಧಿ ಗಳಾಗಲಿ ಸಭೆಗೆ ಭಾರದೆ ಗೈರು ಹಾಜ ರಾಗಿದ್ದರು. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆ  ವಿರುದ್ಧ ಕ್ರಮಕ್ಕೆ ಒತ್ತಾ ಯಿಸಿ ಸಭೆಯಲ್ಲಿ ನಿರ್ಣಯ ಕೈಗೊಂಡಿ ರುವುದಾಗಿ ಶಿವರಾಜಯ್ಯ ತಿಳಿಸಿದರು.ಪಂಚಾಯಿತಿ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಪದ್ಮಮ್ಮ, ಮಾಜಿ ಅಧ್ಯಕ್ಷ ಶಿವನೇಗೌಡ, ಉಪಾದ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಮುನಿಲಿಂಗಮ್ಮ, ಚನ್ನ ಯ್ಯ, ಚನ್ನಪ್ಪ, ಸ್ವಾಮಿ, ಮುನಿಯಮ್ಮ, ನಾಗೇಶ್‌, ಚಾಮುಂಡಿ, ಚಿಕ್ಕಮಾ ದೇಗೌಡ, ಸಿದ್ದಯ್ಯ, ಜಯಲಕ್ಷ್ಮಮ್ಮ, ರತ್ನಮ್ಮ, ಸುಶೀಲರಮೇಶ್, ಕರ ವಸೂಲಿಗಾರ ವೈರಮುಡಿಗೌಡ ಸಭೆ ಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry