ಸೋಮವಾರ, ಜನವರಿ 27, 2020
27 °C

ಗ್ರಾಮಸ್ಥರಿಂದ ರಸ್ತೆ ದುರಸ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ(ಮುದಗಲ್ಲ): ತಾಲ್ಲೂಕಿನ ಮೇಗಳಪೇಟೆ ಕ್ರಾಸ್‌ದಿಂದ ಬನ್ನಿಗೋಳ ಮಾರ್ಗವಾಗಿ ರಾಮತ್ನಾಳಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆ ಸರ್ಕಾರದ ನಿರ್ಲಕ್ಷ್ಯದಿಂದ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿ ಕಂಡಿರುವುದಿಲ್ಲ. ಅಂತೆಯೆ ಬನ್ನಿಗೋಳದಿಂದ ರಾಮತ್ನಾಳ ವರೆಗೆ ಗ್ರಾಮಸ್ಥರೆ ಹಣ ಸಂಗ್ರಹಿಸಿ ದುರಸ್ತಿಗೆ ಮುಂದಾಗಿರುವುದು ಸರ್ಕಾರದ ಕಾರ್ಯವೈಖರಿಯನ್ನು ಅಣುಕಿಸುವಂತಿದೆ.ಹಲವಾರು ಬಾರಿ ತಾಲ್ಲೂಕಿನ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ಶಾಶ್ವತ ಅಭಿವೃದ್ಧಿ ಇರಲಿ, ತಾತ್ಕಾಲಿಕ ದುರಸ್ತಿ ಮಾಡಿಸಿ ಸಂಚಾರಕ್ಕೆ ಅನುಕೂಲ ಮಾಡಲಿಲ್ಲ. ಬೇಸತ್ತ ಜನತೆ ಅಂಕಲಿಮಠದ ಜಾತ್ರಾಮಹೋತ್ಸವ ನಿಮಿತ್ಯ ಸ್ವತಃ ಹಣ ಸಂಗ್ರಹಿಸಿ ಮಣ್ಣು ಹಾಕಿಕೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದಾರೆ.ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿದರು ಪ್ರಯೋಜನವಾಗಲಿಲ್ಲ. ಈ ಕ್ಷೇತ್ರದ ತಾಪಂ ಸದಸ್ಯರಾಗಿ ಆಯ್ಕೆಗೊಂಡು ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಲು ಆಗಲಿಲ್ಲ ಎಂಬ ನೋವು ತಮಗಿದೆ.ಜನರೊಂದಿಗೆ ತಾವು ಕೈಜೋಡಿಸಿ ದುರಸ್ತಿ ಮಾಡಿಕೊಳ್ಳಲು ಮುಂದಾಗಿದ್ದೇವೆ. ಈಗಲಾದರು ಸರ್ಕಾರಕ್ಕೆ ನಾಚಿಕೆ ಬರಲಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ರುದ್ರಗೌಡ ತುರಡಗಿ ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)