ಗ್ರಾಮಸ್ಥರ ಗೊಂದಲ: ಮುಂದೂಡಿಕೆ

7

ಗ್ರಾಮಸ್ಥರ ಗೊಂದಲ: ಮುಂದೂಡಿಕೆ

Published:
Updated:

ಕಡಬ (ಉಪ್ಪಿನಂಗಡಿ): ಕೊಂಬಾರು, ಸಿರಿಬಾಗಿಲು ಅರಣ್ಯ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೊಂದಲ ಏರ್ಪಟ್ಟು, ಗ್ರಾಮಸ್ಥರೊಳಗೆ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಭೆ ವಿಫಲವಾಗಿ ಅಧಿಕಾರಿಗಳು ಸಭೆಯನ್ನು ಮುಂದೂಡಿದ ಘಟನೆ ಶನಿವಾರ ಕೆಂಜಾಳದಲ್ಲಿ ನಡೆಯಿತು.ವಿಭಾಗೀಯ ಅರಣ್ಯ ಸಂರಕ್ಷಣಾಧಿ ಕಾರಿ ದಿನೇಶ್ ಕುಮಾರ್, ವಲಯಾರ ಣ್ಯಧಿಕಾರಿ ಬಾಲಕೃಷ್ಣ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆಯಿತು. ಸಭೆ ಆರಂಭಗೊಂಡು ನೂತನ ಸಮಿತಿ ರಚಿಸಲು ಅಧ್ಯಕ್ಷ ಹುದ್ದೆಗೆ ಗ್ರಾಮಸ್ಥರ ಹೆಸರನ್ನು ಸೂಚಿಸುವಂತೆ ವಿಭಾಗೀಯ ಅರಣ್ಯಾಧಿಕಾರಿ ಹೇಳಿದರು. ಆಗ ಹಾಲಿ ಅಧ್ಯಕ್ಷ ಬಾಲಕೃಷ್ಣ ಮತ್ತು ಆನಂದ ಮಿತ್ತಬೈಲು ಹಾಗೂ ಪುರುಷೋತ್ತಮ ದೇರಣೆಯವರ ಹೆಸರನ್ನು ಸಭೆಯಲ್ಲಿ ಸೂಚಿಸಲಾಯಿತು. ಇದಕ್ಕೆ ಅರಣ್ಯಾಧಿಕಾರಿಯವರು ಅಧ್ಯಕ್ಷ ಹುದ್ದೆ ಒಂದು ಮಾತ್ರ ಇರುವುದು.

ಒಬ್ಬರ ಹೆಸರನ್ನು ಮಾತ್ರ ಸೂಚಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಗೌಡರು ಆಗಬೇಕೆಂದು ಕೆಲವು ಗ್ರಾಮಸ್ಥರು ಒತ್ತಾಯಿಸಿದರೆ, ಇನ್ನೂ ಕೆಲವರು ಆನಂದ ಮಿತ್ತಬೈಲು ಆಗಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರೊಳಗೆ ಎರಡು ಗುಂಪುಗಳಾಗಿ  ಮಾತಿನ ಚಕಮಕಿ ನಡೆದು ಗೊಂದಲ ಉಂಟಾಯಿತು.ಈ ವೇಳೆ ಅರಣ್ಯ ಅಧಿಕಾರಿಗಳು ಸಭೆಯನ್ನು ನಿಯಂತ್ರಿಸಲು ಪ್ರಯತ್ನಿಸಿ ದರು. ಆದರೆ ಗ್ರಾಮಸ್ಥರು ಎರಡು ಗುಂಪುಗಳಾಗಿ ಮಾತುಕತೆ ನಡೆಸಿದರು. ಇನ್ನೂ ಕೆಲವರು ಎರಡು ಗುಂಪುಗಳ ಮುಖಂಡರ ಜತೆ ಮಾತುಕತೆ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ.ಆನಂದ ಮಿತ್ತಬೈಲ್ ಮಾತನಾಡಿ, ಈ ತನಕ ಪರಿಶಿಷ್ಟ ಜಾತಿ ಪಂಗಡದವರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ನಡೆಸುತ್ತಿದ್ದಾರೆ. ಅರಣ್ಯ ಸಮಿತಿಯ ಅಧ್ಯಕ್ಷತೆಯನ್ನು ಉಳಿದ ವರಿಗೆ ನೀಡಿದರೆ ದಲಿತರಿಗೆ ಅನ್ಯಾಯ ವಾಗುತ್ತದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಅಧ್ಯಕ್ಷತೆ ಕೊಡಿ ಎಂದು ಪಟ್ಟು ಹಿಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry