ಗ್ರಾಮಾಂತರ ಜಿಲ್ಲಾ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಮುಕ್ತಾಯ

7

ಗ್ರಾಮಾಂತರ ಜಿಲ್ಲಾ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಮುಕ್ತಾಯ

Published:
Updated:

ಹೊಸಕೋಟೆ: ಇಲ್ಲಿಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದ ಬಾಲಕರ ವಿಭಾಗದಲ್ಲಿ ಹೊಸಕೋಟೆಯ ವಿ.ಸುದರ್ಶನ್ ಮತ್ತು  ಎಚ್.ಬಿ.ನವೀನ್‌ಕುಮಾರ್ ತಲಾ 15 ಅಂಕ ಗಳಿಸಿ ವೈಯಕ್ತಿಕ ಪ್ರಶಸ್ತಿ ಹಂಚಿಕೊಂಡರು.800, 1500 ಮತ್ತು 3000 ಮೀಟರ್‌ಗಳ ಓಟದಲ್ಲಿ ಸುದರ್ಶನ್ ಹಾಗೂ ಡಿಸ್ಕಸ್, ಜಾವೆಲಿನ್ ಮತ್ತು ಷಾಟ್‌ಪುಟ್‌ನಲ್ಲಿ ನವೀನ್‌ಕುಮಾರ್ ಪ್ರಥಮ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಹೊಸಕೋಟೆಯ ಜಿ.ಸನ್ಮಿತ 100, 200 ಮೀ. ಓಟದಲ್ಲಿ ಪ್ರಥಮ 400 ಮೀ.ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ವೈಯಕ್ತಿಕ ಪ್ರಶಸ್ತಿ ಪಡೆದರು.ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲೂ ಹೊಸಕೋಟೆಯ ವಿ.ಚರಣ್ 13 ಅಂಕ ಗಳಿಸಿ ವೈಯಕ್ತಿಕ ಪ್ರಶಸ್ತಿ ಪಡೆದರೆ ಬಾಲಕಿಯರ ವಿಭಾಗದಲ್ಲಿ ಹೊಸಕೋಟೆಯ ಆರ್.ಪಲ್ಲವಿ ವೈಯಕ್ತಿಕ ಪ್ರಶಸ್ತಿ ಪಡೆದಳು. ಒಟ್ಟು 211 ಅಂಕ ಶೇಖರಿಸಿದ ಹೊಸಕೋಟೆ ತಾಲ್ಲೂಕು ಸಮಗ್ರ ಪ್ರಶಸ್ತಿ ಪಡೆಯಿತು.ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಹೊಸಕೋಟೆ ತಾಲ್ಲೂಕು 61 ಅಂಕ ಶೇಖರಿಸಿ ತಂಡ ಪ್ರಶಸ್ತಿ ಪಡೆದರೆ ಬಾಲಕಿಯರ ವಿಭಾಗದಲ್ಲಿ ನೆಲಮಂಗಲ ತಾಲ್ಲೂಕು 48 ಅಂಕ ಶೇಖರಿಸಿ ತಂಡ ಪ್ರಶಸ್ತಿ ಪಡೆಯಿುತು. ಪ್ರಾಥಮಿಕ ಶಾಲಾ ಬಾಲಕರ ಹಾಗು ಬಾಲಕಿಯರ ವಿಭಾಗದಲ್ಲೂ ಹೊಸಕೋಟೆ ತಾಲ್ಲೂಕು ತಂಡ ಪ್ರಶಸ್ತಿ ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry