`ಗ್ರಾಮಾಭಿವೃದ್ಧಿಗೆ ಆದ್ಯತೆ ಸಿಗಲಿ'

7

`ಗ್ರಾಮಾಭಿವೃದ್ಧಿಗೆ ಆದ್ಯತೆ ಸಿಗಲಿ'

Published:
Updated:

ಬೆಂಗಳೂರು: ಸೌದಿ ಬೇಸಿಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ (ಸಾಬಿಕ್) ಹಾಗೂ ಬೆಂಗಳೂರು ದಕ್ಷಿಣ ರೋಟರಿಯ ಸಹಯೋಗದಲ್ಲಿ ನಿರ್ಮಾಣಗೊಂಡ ಬಿ.ಹೊಸಹಳ್ಳಿ ಗ್ರಾಮ ಸಮುದಾಯ ಸಂಪನ್ಮೂಲ ಭವನವನ್ನು ಹೈಕೋರ್ಟ್ ನ್ಯಾಯಮೂರ್ತಿ ರಾಮ್ ಮೋಹನ್ ರೆಡ್ಡಿ ಶನಿವಾರ ಉದ್ಘಾಟಿಸಿದರು.ನಂತರ ಮಾತನಾಡುತ್ತಾ, `ಗ್ರಾಮಗಳು ದೇಶದ ಕೇಂದ್ರಗಳು. ದೇಶದ ಅಭಿವೃದ್ಧಿ ದೃಷ್ಟಿಯಿಂದ ಅವುಗಳ ಪ್ರಗತಿ ಮುಖ್ಯ. ಕಾರ್ಪೊರೇಟ್ ಸಂಸ್ಥೆಗಳು, ನಾಗರಿಕ ಸಮಾಜ ಜಂಟಿಯಾಗಿ ಇಂತಹ ಪ್ರಯತ್ನಗಳನ್ನು ನಡೆಸಬೇಕು' ಎಂದು ಕಿವಿಮಾತು ಹೇಳಿದರು.ಬೆಂಗಳೂರಿನ ಸಾಬಿಕ್ ಟೆಕ್ನಾಲಜಿ ಸೆಂಟರ್‌ನ ಮುಖ್ಯಸ್ಥ ಸುರೇಂದ್ರ ಕುಲಕರ್ಣಿ ಅವರು ಮಾತನಾಡಿ,  `ಈ ಭವನದಲ್ಲಿ ಗ್ರಾಮಸ್ಥರು ವೈದ್ಯಕೀಯ ಶಿಬಿರಗಳು, ಪೋಷಕಾಂಶ ಕಾರ್ಯಾಗಾರಗಳು ಮತ್ತು ಸುರಕ್ಷತೆ, ಜಾಗೃತಿ ಅಭಿಯಾನಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು' ಎಂದರು.ಬೆಂಗಳೂರು ದಕ್ಷಿಣ ರೋಟರಿಯ ನಿಯೋಜಿತ ಅಧ್ಯಕ್ಷ ಶ್ರೀಧರ್ ಬಿ.ಆರ್., `ಸಾಬಿಕ್ ಸಹಯೋಗದಲ್ಲಿ ಅನೇಕ ಅಭಿವೃದ್ಧಿ ಉಪಕ್ರಮಗಳಲ್ಲಿ ತೊಡಗಿದ್ದು, ಸ್ಥಳೀಯ ಸಮುದಾಯಗಳ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು' ಎಂದರು.ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಎನ್.ವಾಮನಾಚಾರ್ಯ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸಾಬಿಕ್ ಮತ್ತು ರೋಟರಿ ಸಹಯೋಗದಲ್ಲಿ ಆರು ಸರ್ಕಾರಿ ಶಾಲೆಗಳಿಗೆ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry