ಗ್ರಾಮಾಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಚಿಮ್ಮನಕಟ್ಟಿ

ಶುಕ್ರವಾರ, ಜೂಲೈ 19, 2019
28 °C

ಗ್ರಾಮಾಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಚಿಮ್ಮನಕಟ್ಟಿ

Published:
Updated:

ಗುಳೇದಗುಡ್ಡ: `ಗ್ರಾಮೀಣ ಪ್ರದೇಶದಲ್ಲಿರುವ ಬಡವರ, ದೀನದಲಿತರ, ಅಲ್ಪಸಂಖ್ಯಾತರ, ಹಿಂದುಳಿದವರ ಸಂರಕ್ಷಣೆಗೆ ಹಾಗೂ ಗ್ರಾಮಾಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಾಗುವುದು' ಎಂದು ಮಾಜಿ ಸಚಿವ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಹೇಳಿದರು.   ಸಮೀಪದ ಆಸಂಗಿ-ಕಟಗಿನಹಳ್ಳಿ, ಕೊಟ್ನಳ್ಳಿ ಹಾಗೂ ಲಾಯದಗುಂದಿ ಗ್ರಾಮದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. `ಗ್ರಾಮೀಣ ಪ್ರದೇಶಗಳಿಗೆ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಸಾರಿಗೆ ಸೌಲಭ್ಯ, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ಕೊಡಲಾಗುವುದು' ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಜೋಗಿನ, ಗುಳೇದಗುಡ್ಡದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನಮಂತ ಮಾವಿನಮರದ, ಬಾದಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಡಿ.ಎಲಿಗಾರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ವಿವಿಧ ಬೇಡಿಕೆಗಳ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು.ತಾ.ಪಂ. ಸದಸ್ಯ ಹನಮಂತ ಪತ್ತಾರ, ಪಾದರ ರಾಜಪ್ಪ, ಪ್ರಕಾಶ ಗೌಡರ, ಬಾಪುಗೌಡ ಪಾಟೀಲ, ಶಿವಾನಂದ ರಾಹುತ, ಕಮಲಪ್ಪ ಚಂದನ್ನವರ, ಆಸಂಗೆಪ್ಪ ನಕ್ಕರಗುಂದಿ, ಶೇಖರ ರಾಠೋಡ, ಅಬ್ರಾಮಪ್ಪ ಚಂದನ್ನವರ, ಚಂದಪ್ಪ ಗೌಡರ, ಸುಬಾಷ್ ಗುರುಶಾಂತಪ್ಪನವರ, ಗಂಗಪ್ಪ ಮಣ್ಣೂರ, ಮಲ್ಲಪ್ಪ ಕುಪ್ಪಸ್ತ, ಬೈಲಪ್ಪ ಜಡಿ, ಬಸಪ್ಪ ಮಾಳವಾಡ, ಬೈಲಪ್ಪ ಪಾತ್ರೋಟಿ, ಬಾಲಚಂದ್ರಪ್ಪ ಅಂಬಿಗೇರ, ಗೌಡಪ್ಪ ಗೌಡರ, ಬಾಲಪ್ಪ ಬಗಲಿ, ಶಿವಪ್ಪ ಹಾದಿಮನಿ, ನಿಂಗಪ್ಪ ಅಂಬಿಗೇರ ಇತರರು ಇದ್ದರು. ಪ್ರಕಾಶ ಗೌಡರ ಸ್ವಾಗತಿಸಿದರು. ಬಸವರಾಜ ಗೋನಾಳ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry